ಈಪುಣೆ: ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್ ಪಡೆಯ ಯೋಜನೆಯಾಗಿದೆ.
ಶತಕದ ಸಾಧನೆ ಮಾಡಲು ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಅವರ ಅರ್ಧ ಶತಕದ ಜತೆಯಾಟವಾಡುವ ಮೂಲಕ ಭಾರತ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸುತ್ತಿದ್ದಾರೆ.
36ನೇ ಓವರ್ ಮುಕ್ತಾಯ. ಭಾರತ ತಂಡದ ಗೆಲುವಿಗೆ ಇನ್ನು 48 ರನ್ಗಳು ಬೇಕಾಗಿವೆ. ಗೆಲುವಿನತ್ತ ತಂಡವನ್ನು ಕೊಂಡೊಯ್ಯುತ್ತಿರುವ ವಿರಾಟ್ ಕೊಹ್ಲಿ
33.3 ಓವರ್ಗಳಿಗೆ 200 ರನ್ ಗಡಿ ದಾಟಿದ ಭಾರತ, ಗೆಲುವಿಗೆ ಇನ್ನೂ ಬೇಕು 57 ರನ್. ಕೊಹ್ಲಿ 64 ಹಾಗೂ ಕೆ. ಎಲ್ ರಾಹುಲ್ 13 ಕ್ರೀಸ್ನಲ್ಲಿದ್ದಾರೆ.
ವಿಕೆಟ್ಗಳು ಉರುಳಿರುವ ಕಾರಣ ಭಾರತ ತಂಡದ ರನ್ ಗಳಿಕೆ ವೇಗ ಇಳಿಕೆ. 21ರಿಮದ 30ನೇ ಓವರ್ಗಳ ಅವಧಿಯಲ್ಲಿ ಕೇವಲ 42 ರನ್ ಬಾರಿಸಿದ್ದಾರೆ.