Site icon Vistara News

India vs Bangladesh: ಬಾಂಗ್ಲಾದೇಶ ವಿರುದ್ಧ ಭಾರತ ತಂಡಕ್ಕೆ 6 ರನ್​ ಸೋಲು

rohit sharma and shakib al hasan

ಕೊಲಂಬೊ: ಶುಭ್​​ಮನ್​ ಗಿಲ್ (121) ಬಾರಿಸಿ ಅಮೋಘ ಶತಕದ ಹೊರತಾಗಿಯೂ ಉಳಿದ ಬ್ಯಾಟರ್​ಗಳ ನೆರವು ಲಭಿಸದ ಹಿನ್ನೆಲೆಯಲ್ಲಿ ಏಷ್ಯಾ ಕಪ್​​ನ ಸೂಪರ್​ 4 ಹಂತದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 6 ರನ್​ಗಳ ಸೋಲಿಗೆ ಒಳಗಾಗಿದೆ. ಹಾಲಿ ಟೂರ್ನಿಯಲ್ಲಿ ಭಾರತ ತಂಡ ಈಗಾಗಲೇ ಫೈನಲ್​ಗೆ ಪ್ರವೇಶ ಮಾಡಿರುವ ಕಾರಣ ಭಾರತ ತಂಡಕ್ಕೆ ಹೆಚ್ಚಿನ ನಷ್ಟ ಉಂಟಾಗುವುದಿಲ್ಲ. ಇದೇ ವೇಳೆ ಬಾಂಗ್ಲಾದೇಶ ತಂಡಕ್ಕೆ ಏಷ್ಯಾ ಕಪ್​ನಲ್ಲಿ ಭಾರತ ವಿರುದ್ಧ ಎರಡನೇ ಜಯ ಲಭಿಸಿತು.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿ ಜಯ ಸಾಧಿಸುವುದು ರೋಹಿತ್​ ಶರ್ಮಾ ಅವರ ಯೋಜನೆಯಾಗಿತ್ತು. ಆದರೆ ಬಾಂಗ್ಲಾ ಬ್ಯಾಟರ್​ಗಳು ಉತ್ತಮವಾಗಿ ಬ್ಯಾಟ್​ ಬೀಸಿ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 265 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ 49.5 ಓವರ್​ಗಳಲ್ಲಿ 259 ರನ್​ಗಳಿಗೆ ಆಲ್​ಔಟ್​ ಆಯಿತು.

ಬ್ಯಾಟಿಂಗ್​ ಆಹ್ವಾನ ಪಡೆದ ಬಾಂಗ್ಲಾ ತಂಡ ಕಳಪೆ ಆರಂಭ ಪಡೆಯಿತು. ಲಿಟನ್ ದಾಸ್​ ಶೂನ್ಯಕ್ಕೆ ಔಟಾದರೆ, ಅನ್ಮುಲ್ ಹಕ್​ 4 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಅದೇ ರೀತಿ 28 ರನ್​ಗಳಿಗೆ ಮೊದಲ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಮೆಹೆದಿ ಹಸನ್​ ಕೂಡ 13 ರನ್​ಗಳಿಗೆ ಔಟಾಗುವ ಮೂಲಕ ಬಾಂಗ್ಲಾ ತಂಡ 59 ರನ್​ಗೆ ನಾಲ್ಕು ವಿಕೆಟ್​ ನಷ್ಟ ಮಾಡಿಕೊಂಡಿತು. ಆದೆರ, ಈ ವೇಳೆ ಜತೆಯಾದ ಶಕಿಬ್​ ಅಲ್​ ಹಸನ್​ (80) ಹಾಗೂ ಹೃದೋಯ್​ (54) ಐದನೇ ವಿಕೆಟ್​ಗೆ 101 ರನ್​ಗಳ ಜತೆಯಾಟ ನೀಡಿದರು. ಇವರ ಸಾಹಸದಿಂದಾಗಿ ಬಾಂಗ್ಲಾ ತಂಡ ಚೇತರಿಕೆ ಪಡೆಯಿತು.

ಅಂತಿ ಹಂತದಲ್ಲಿ ನಾಸುಮ್​ ಅಹ್ಮದ್​ (44) ಹಾಗೂ ಮೆಹೆದಿ ಹಸನ್​ (29) ಬಿರುಸಾಗಿ ಬ್ಯಾಟ್​ ಬೀಸಿದರು. ತಂಜಿಮ್ ಹಸನ್​ ಕೂಡ 14 ರನ್​ ಗಳಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

ಭಾರತದ ಬೌಲಿಂಗ್ ಪರ ಶಾರ್ದುಲ್​ ಠಾಕೂರ್​ 65 ರನ್​ಗಳಿಗೆ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 32 ರನ್​ಗಳಿಗೆ 2 ವಿಕೆಟ್ ಪಡೆದರು. ಪ್ರಸಿದ್ದ್​ ಕೃಷ್ಣ, ಅಕ್ಷರ್ ಪಟೇಲ್​ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್​ ಪಡೆದರು.

Sukhesha Padibagilu

ಭಾರತ ತಂಡದ ಗೆಲುವಿಗೆ 12 ಎಸೆತಗಳಲ್ಲಿ ಬೇಕು 17 ರನ್​

Sukhesha Padibagilu

ವಿಕೆಟ್​ ಪತನ, ರನ್​ರೇಟ್ ಕುಸಿತದೊಂದಿಗೆ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ.

Sukhesha Padibagilu

100 ರನ್​ ಒಳಗೆ ನಾಲ್ಕು ವಿಕೆಟ್​ ಕಳೆದುಕೊಂಡು ಆತಂಕ್ಕೆ ಬಿದ್ದ ಭಾರತ ತಂಡ

Sukhesha Padibagilu

100 ರನ್​ ಗಡಿ ದಾಟಿದ ಭಾರತ ತಂಡ.

Sukhesha Padibagilu

ಇಶಾನ್ ಕಿಶನ್​ 5 ರನ್​ ಮಾಡಿ ಔಟಾಗಿದ್ದಾರೆ. ಅವರು ಎಲ್​ಬಿಡಬ್ಲ್ಯು ಆಗಿ ವಿಕೆಟ್​ ಒಪ್ಪಿಸಿದ್ದಾರೆ.

Exit mobile version