ಕೊಲಂಬೊ: ಶುಭ್ಮನ್ ಗಿಲ್ (121) ಬಾರಿಸಿ ಅಮೋಘ ಶತಕದ ಹೊರತಾಗಿಯೂ ಉಳಿದ ಬ್ಯಾಟರ್ಗಳ ನೆರವು ಲಭಿಸದ ಹಿನ್ನೆಲೆಯಲ್ಲಿ ಏಷ್ಯಾ ಕಪ್ನ ಸೂಪರ್ 4 ಹಂತದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 6 ರನ್ಗಳ ಸೋಲಿಗೆ ಒಳಗಾಗಿದೆ. ಹಾಲಿ ಟೂರ್ನಿಯಲ್ಲಿ ಭಾರತ ತಂಡ ಈಗಾಗಲೇ ಫೈನಲ್ಗೆ ಪ್ರವೇಶ ಮಾಡಿರುವ ಕಾರಣ ಭಾರತ ತಂಡಕ್ಕೆ ಹೆಚ್ಚಿನ ನಷ್ಟ ಉಂಟಾಗುವುದಿಲ್ಲ. ಇದೇ ವೇಳೆ ಬಾಂಗ್ಲಾದೇಶ ತಂಡಕ್ಕೆ ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ ಎರಡನೇ ಜಯ ಲಭಿಸಿತು.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿ ಹಾಕಿ ಜಯ ಸಾಧಿಸುವುದು ರೋಹಿತ್ ಶರ್ಮಾ ಅವರ ಯೋಜನೆಯಾಗಿತ್ತು. ಆದರೆ ಬಾಂಗ್ಲಾ ಬ್ಯಾಟರ್ಗಳು ಉತ್ತಮವಾಗಿ ಬ್ಯಾಟ್ ಬೀಸಿ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 49.5 ಓವರ್ಗಳಲ್ಲಿ 259 ರನ್ಗಳಿಗೆ ಆಲ್ಔಟ್ ಆಯಿತು.
ಬ್ಯಾಟಿಂಗ್ ಆಹ್ವಾನ ಪಡೆದ ಬಾಂಗ್ಲಾ ತಂಡ ಕಳಪೆ ಆರಂಭ ಪಡೆಯಿತು. ಲಿಟನ್ ದಾಸ್ ಶೂನ್ಯಕ್ಕೆ ಔಟಾದರೆ, ಅನ್ಮುಲ್ ಹಕ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಅದೇ ರೀತಿ 28 ರನ್ಗಳಿಗೆ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಮೆಹೆದಿ ಹಸನ್ ಕೂಡ 13 ರನ್ಗಳಿಗೆ ಔಟಾಗುವ ಮೂಲಕ ಬಾಂಗ್ಲಾ ತಂಡ 59 ರನ್ಗೆ ನಾಲ್ಕು ವಿಕೆಟ್ ನಷ್ಟ ಮಾಡಿಕೊಂಡಿತು. ಆದೆರ, ಈ ವೇಳೆ ಜತೆಯಾದ ಶಕಿಬ್ ಅಲ್ ಹಸನ್ (80) ಹಾಗೂ ಹೃದೋಯ್ (54) ಐದನೇ ವಿಕೆಟ್ಗೆ 101 ರನ್ಗಳ ಜತೆಯಾಟ ನೀಡಿದರು. ಇವರ ಸಾಹಸದಿಂದಾಗಿ ಬಾಂಗ್ಲಾ ತಂಡ ಚೇತರಿಕೆ ಪಡೆಯಿತು.
ಅಂತಿ ಹಂತದಲ್ಲಿ ನಾಸುಮ್ ಅಹ್ಮದ್ (44) ಹಾಗೂ ಮೆಹೆದಿ ಹಸನ್ (29) ಬಿರುಸಾಗಿ ಬ್ಯಾಟ್ ಬೀಸಿದರು. ತಂಜಿಮ್ ಹಸನ್ ಕೂಡ 14 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.
ಭಾರತದ ಬೌಲಿಂಗ್ ಪರ ಶಾರ್ದುಲ್ ಠಾಕೂರ್ 65 ರನ್ಗಳಿಗೆ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 32 ರನ್ಗಳಿಗೆ 2 ವಿಕೆಟ್ ಪಡೆದರು. ಪ್ರಸಿದ್ದ್ ಕೃಷ್ಣ, ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ತಂಡಕ್ಕೆ ಆಸರೆಯಾಗಿರುವ ನಾಯಕ ಶಕೀಬ್ ಅಲ್ ಹಸನ್
ಸದ್ಯ ಶಾರ್ದೂಲ್ ಠಾಕೂರ್ 2 ವಿಕೆಟ್ ಉಡಾಯಿಸಿದ್ದಾರೆ.
20 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ ಬಾಂಗ್ಲಾ ತಂಡ
ಭಾರತದ ಬಿಗು ದಾಳಿಗೆ ರನ್ ಗಳಿಸಲು ಪರದಾಡುತ್ತಿರುವ ಬಾಂಗ್ಲಾ ಆಟಗಾರರು
15 ರನ್ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದ ಬಾಂಗ್ಲಾದೇಶ