Site icon Vistara News

Asia Cup 2023 : ಬಾಂಗ್ಲಾ- ಭಾರತ ಪಂದ್ಯಕ್ಕೂ ಮಳೆ ಬರಬಹುದೇ? ಹೇಗುಂಟು ಕೊಲೊಂಬೊದ ಹವಾಮಾನ?

Premadasa Stadium

ಕೊಲೊಂಬೊ: ಏಷ್ಯಾಕಪ್ 2023ರ (Asia Cup 2023) ಸೂಪರ್ 4 ಹಂತದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಲಿವೆ. ಶ್ರೀಲಂಕಾ ವಿರುದ್ಧ ರೋಚಕ ಗೆಲುವಿನ ನಂತರ ಭಾರತವು ಕಾಂಟಿನೆಂಟಲ್ ಚಾಂಪಿಯನ್​ಷಿಪ್​​ನ ಫೈನಲ್​ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿದೆ. ಮತ್ತೊಂದೆಡೆ, ಬಾಂಗ್ಲಾದೇಶ ಈಗಾಗಲೇ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿ ಪಂದ್ಯಾವಳಿಯಿಂದ ಹೊರಗುಳಿದಿದೆ.

ಕಳೆದ ಮುಖಾಮುಖಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಸುಲಭ ಜಯ ಸಾಧಿಸಿತ್ತು. ಯುವ ಆಲ್ರೌಂಡರ್ ದುನಿತ್ ವೆಲ್ಲಾಲಗೆ ಅವರು ಅಮೋಘ ಆಟದ ಹೊರತಾಗಿಯೂ ಭಾರತ ಪಾರಮ್ಯ ಮೆರೆಯಿತು. ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಮತ್ತು ಅವರ ಪಡೆ ಕೇವಲ 213 ರನ್​ಗಳಿಗೆ ಆಲ್​ಔಟ್​ ಆಯಿತು.

ದುನಿತ್​ ತಮ್ಮ 10 ಓವರ್​ಗಳಲ್ಲಿ 40 ರನ್​ ನೀಡಿ 5 ವಿಕೆಟ್ ಪಡೆದರು. ಇದರಲ್ಲಿ ಒಂದು ಮೇಡನ್ ಕೂಡ ಸೇರಿತ್ತು. ಅರೆಕಾಲಿಕ ಬೌಲರ್​ ಚರಿತ್ ಅಸಲಂಕಾ ಕೂಡ ನಾಲ್ಕು ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು, ಭಾರತವು ತನ್ನ ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಎಲ್ಲಾ ಹತ್ತು ವಿಕೆಟ್​ಗಳನ್ನು ಸ್ಪಿನ್​ ಬೌಲರ್​ಗಳಿಗೆ ನೀಡಿತು. ನಂತರ ವೆಲ್ಲಾಲಗೆ 46 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿದರು. ಉಳಿದ ಬ್ಯಾಟರ್​ಗಲು ಅವರಿಗೆ ಬೆಂಬಲ ನೀಡಲಿಲ್ಲ. ಹೀಗಾಗಿ ಭಾರತಕ್ಕೆ ಜಯ ಸಿಕ್ಕಿತು.

ಇದನ್ನೂ ಓದಿ : Asia Cup 2023 : ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇವರಿಗೆಲ್ಲ ಇದೆ ರೆಕಾರ್ಡ್​ ಮಾಡೋ ಚಾನ್ಸ್​​

ಬಾಂಗ್ಲಾ ವಿರುದ್ಧದ ಪಂದ್ಯದಲ್ಲೂ ಭಾರತ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಕೆಲವು ಬೆಂಚ್ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಬಾಂಗ್ಲಾದೇಶವು ಅಭಿಯಾನವನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಸಮಾಧಾನಕರ ಗೆಲುವು ಸಾಧಿಸುವ ಭರವಸೆಯಲ್ಲಿದೆ.

ಬೆಳಗ್ಗಿನಿಂದಲೇ ಮಳೆ

ಕೊಲಂಬೋದಲ್ಲಿ ಬೆಳಗ್ಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮಧ್ಯಾಹ್ನದ ನಂತರವೂ (ಸೆಪ್ಟೆಂಬರ್ 15) ಮುಂದುವರಿಯುವ ಸಾಧ್ಯತೆಯಿದೆ. ಆಟದ ಆರಂಭದಲ್ಲಿ ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಲಿದ್ದು, ರಾತ್ರಿ 26 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ತೇವಾಂಶದ ಮಟ್ಟವು ಸುಮಾರು 74% ಎಂದು ಊಹಿಸಲಾಗಿದೆ. ಈ ಹವಾಮಾನ ಪರಿಸ್ಥಿತಿಗಳನ್ನು ಗಮನಿಸಿದರೆ, ಮಳೆ ಆಟವನ್ನು ನಿಲ್ಲಿಸುವ ಸಾಧ್ಯತೆಯಿದೆ.

ಹೇಗಿರಬಹುದು ತಂಡ

ಭಾರತ ತಂಡ ಹಿಂದಿನ ಪಂದ್ಯದಲ್ಲಿ ಆಡಿಸಿದ ತಂಡವನ್ನೇ ಇಲ್ಲಿ ಕಣಕ್ಕೆ ಇಳಿಸಲಿದೆ. ವಿಶ್ವ ಕಪ್​ಗೆ ಮುನ್ನ ಶ್ರೇಯಸ್ ಅಯ್ಯರ್​ಗೆ ಅವಕಾಶ ನೀಡಲಿದೆ. ಆದಾಗ್ಯೂ, ಶ್ರೇಯಸ್​ ಅಯ್ಯರ್​ ಅವರ ಫಿಟ್ನೆಸ್​ ಮಾಹಿತಿ ಇನ್ನೂ ರಹಸ್ಯವಾಗಿ ಉಳಿದಿದೆ. ಏತನ್ಮಧ್ಯೆ, ಪಿಚ್ ಸ್ಪಿನ್ನರ್​ಗಳಿಗೆ ಅನುಕೂಲಕರವಾಗಿದ್ದರೆ, ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ 11 ರಲ್ಲಿ ಸೇರಿಸುವ ನಿರೀಕ್ಷೆಯಿದೆ.

ಬಾಂಗ್ಲಾದೇಶವು ಪಂದ್ಯಾವಳಿಯಿಂದ ಬಹುತೇಕ ಹೊರಗುಳಿದಿದೆ. ಫೈನಲ್​ಗೆ ಪ್ರವೇಶಿಸುವ ಯಾವುದೇ ಅವಕಾಶವಿಲ್ಲ ಎಂದು ಪರಿಗಣಿಸಿ, ಇತರ ಆಟಗಾರರಿಗೆ ಅವಕಾಶಗಳನ್ನು ನೀಡಬಹುದು. ಹೀಗಾಗಿ 2023ರ ಏಕ ದಿನ ವಿಶ್ವ ಕಪ್​ಗೆ ಅಭ್ಯಾಸವನ್ನು ಇಲ್ಲಿಂದಲೇ ಆರಂಭಿಸಿದಂತಾಗಲಿದೆ.

ಪಿಚ್ ಹೇಗಿರಲಿದೆ

ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಮೇಲ್ಮೈ ಬ್ಯಾಟರ್​ಗಳಿಗೆ ಪೂರಕವಾಗಿದೆ. ಆದಾಗ್ಯೂ, ಅಂತಹ ಪಿಚ್​ನಲ್ಲಿ ತಾಳ್ಮೆಯು ಅಗತ್ಯವಿದೆ. ಏಕೆಂದರೆ ಬ್ಯಾಟರ್​​ಗಳು ನಿರ್ಭೀಡ ಆಟ ಆಡುವ ಮೊದಲು ವಿಕೆಟ್ ಕಾಪಾಡಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು. ದೊಡ್ಡ ಮೊತ್ತದ ಸ್ಕೋರ್ ಮೂಡಬಹುದು ಎಂದು ಹೇಳಲಾಗಿದೆ. ಟಾಸ್​ ಗೆದ್ದ ತಂಡ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡುವುದು ಈ ಸ್ಥಳದಲ್ಲಿ ಸೂಕ್ತ ನಿರ್ಧಾರ.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಬಾಂಗ್ಲಾದೇಶ: ಮೊಹಮ್ಮದ್ ನೈಮ್, ಲಿಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಶಮೀಮ್ ಹುಸೇನ್, ಮುಷ್ಫಿಕರ್ ರಹೀಮ್ (ವಿಕೆಟ್​​ ಕೀಪರ್​​), ಅಫಿಫ್ ಹುಸೇನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.

Exit mobile version