Site icon Vistara News

India vs England, 1st Test: ಕೋಚ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್​ ಇಂಡಿಯಾ

team india practice

ಹೈದರಾಬಾದ್​: ಇಂಗ್ಲೆಂಡ್​ ವಿರುದ್ಧದ(IND vs ENG) ಟೆಸ್ಟ್​ ಸರಣಿಗೆ ಆತಿಥೇಯ ಟೀಮ್​ ಇಂಡಿಯಾ ಇಂದಿನಿಂದ(ಜ.20) ಅಭ್ಯಾಸ ಆರಂಭಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ(Rajiv Gandhi International Stadium) ಎಲ್ಲ ಆಟಗಾರರು ಲಘು ಬ್ಯಾಟಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಹೆಚ್ಚಾಗಿ ಸ್ಪಿನ್​ ಎಸೆತಕ್ಕೆ ಅಭ್ಯಾಸ ನಡೆಸಿದ್ದಾರೆ. ಮೊದಲ ಟೆಸ್ಟ್​ ಪಂದ್ಯ(India vs England, 1st Test) ಜನವರಿ 25ರಿಂದ ಇದೇ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

ಶನಿವಾರ ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಎಲ್ಲ ಆಟಗಾರರು ಬ್ಯಾಟಿಂಗ್​ಗೆ ಹೆಚ್ಚಿನ ಒತ್ತು ನೀಡಿದರು. ಏಕೆಂದರೆ ಆಕ್ರಮಣಕಾರಿ ಆಟದಿಂದ ಹೊಸ ಬಾಜ್‌ಬಾಲ್ ಕ್ರಿಕೆಟ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ ಕ್ರಿಕೆಟ್ ಪ್ರಿಯರನ್ನು ಸೆಳೆಯುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತವೂ ಬಲಿಷ್ಠ ಬ್ಯಾಟಿಂಗ್​ ಪಡೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಶನಿವಾರ ಬ್ಯಾಟಿಂಗ್​ ಅಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ಯ ನೀಡಲಾಗಿತು.

ಈಗಾಗಲೇ ಕೋಚ್​ ದ್ರಾವಿಡ್​ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆಯನ್ನು ನೀಡಿದ್ದು, ಈ ಸರಣಿಯನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು, ತವರಿನ ಪಿಚ್​ ಎನ್ನುವ ಕಲ್ಪನೆಯನ್ನು ಬದಿಗಿಟ್ಟು ಕಠಿಣ ಅಭ್ಯಾಸ ನಡೆಸಬೇಕಿದೆ ಎಂದು ತಿಳಿಸಿದ್ದಾರೆ.

5ನೇ ಕ್ರಮಾಂಕದ ಗೊಂದಲ


ಭರತ್​ ಅವರು ಕೀಪಿಂಗ್​ ನಡೆಸಿದರೆ, ಅಯ್ಯರ್(Shreyas Iyer)​ ಅಥವಾ ರಾಹುಲ್​ ಮಧ್ಯೆ ಯಾರು ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ? ಯಾರನ್ನು ಆಯ್ಕೆ ಮಾಡುವುದು ಎನ್ನುವುದು ಈಗ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆ.ಎಲ್ ರಾಹುಲ್ ತವರಿನ ಟೆಸ್ಟ್‌ಗಳಲ್ಲಿ ವಿಕೆಟ್ ಕೀಪಿಂಗ್​ ಮಾಡಿದರೆ, ಶ್ರೇಯಸ್ ಅಯ್ಯರ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಖಚಿತ. ಆದರೆ, ಭರತ್​ ಕೀಪಿಂಗ್​ ಮಾಡಿದರೆ ರಾಹುಲ್​ ಮತ್ತು ಅಯ್ಯರ್​ ನಡುವೆ ಪೈಪೋಟಿ ಏರ್ಪಡಲಿದೆ.

ಇದನ್ನೂ ಓದಿ Team India: ಆಸ್ಟ್ರೇಲಿಯಾದಲ್ಲಿ ರಹಾನೆ ಸಾರಥ್ಯದ ಯಂಗ್‌ ಬ್ರಿಗೇಡ್‌ ಟೆಸ್ಟ್​ ಗೆದ್ದ ಸಂಭ್ರಮಕ್ಕೆ ತುಂಬಿತು ಮೂರು ವರ್ಷ

ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ಒಟ್ಟು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಸರಣಿಯ ಮೊದಲ ಪಂದ್ಯ ಜನವರಿ 25ರಿಂದ ಹೈದರಾಬಾದ್​ನಲ್ಲಿ ನಡೆಯಲಿದೆ. ಬಳಿಕದ 4 ಟೆಸ್ಟ್​ಗಳನ್ನು ಕ್ರಮವಾಗಿ ವಿಶಾಖಪಟ್ಟಣ (ಫೆ.2-6), ರಾಜ್​ಕೋಟ್​ (ಫೆ.15-19), ರಾಂಚಿ (ಫೆ. 23-27) ಮತ್ತು ಧರ್ಮಶಾಲಾದಲ್ಲಿ (ಮಾ.7-11) ಆಡಲಿದೆ. ಇಂಗ್ಲೆಂಡ್​ ಪೂರ್ಣ ಪ್ರಮಾಣದ ತಂಡ ಪ್ರಕಟಿಸಿದೆ. ಆದರೆ ಭಾರತ ಕೇವಲ 2 ಟಸ್ಟ್​ಗೆ ಮಾತ್ರ ತಂಡ ಪ್ರಕಟಿಸಿದೆ. ಇದರರ್ಥ ಅಂತಿಮ ಮೂರು ಪಂದ್ಯಗಳಿಗೆ ಬದಲಾವಣೆ ನಿಶ್ಚಿತ.

2 ಟೆಸ್ಟ್​ ಪಂದ್ಯಕ್ಕೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಅವೇಶ್ ಖಾನ್.

Exit mobile version