ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೈದಾನಕ್ಕಿಳಿಯಲಿಲ್ಲ. ಬೆನ್ನು ಮೂಳೆಯ ಸಣ್ಣ ನೋವಿನಿಂದಾಗಿ ಅವರು ಶನಿವಾರದ ಆಟದಿಂದ ಹೊರಗುಳಿದಿದ್ದಾರೆ. ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ರೋಹಿತ್ ಅವರ ಗೈರಿನಲ್ಲಿ ಉಪನಾಯಕನಾಗಿರುವ ಜಸ್ಪ್ರೀತ್ ಬುಮ್ರಾ ಅವರು ಮೂರನೇ ದಿನದಾಟದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. 5 ಟೆಸ್ಟ್‌ಗಳ ಸರಣಿಯಲ್ಲಿ ರೋಹಿತ್ ಶರ್ಮಾ ಫಿಟ್‌ನೆಸ್ ಸಮಸ್ಯೆಯಿಂದಾಗಿ ಒಂದು ದಿನದ ಆಟದಿಂದ ಹೊರಗುಳಿದಿರುವುದು ಇದೇ ಮೊದಲು. ರೋಹಿತ್ ಶರ್ಮಾ ಅವರು ಈ ಪಂದ್ಯದಲ್ಲಿ ಒಂದುವರೆ ದಿನ ಬ್ಯಾಟಿಂಗ್ ನಡೆಸುವ ಮೂಲಕ ಶತಕ ಬಾರಿಸಿ ಮಿಂಚಿದ್ದರು. 103 ರನ್ ಬಾರಿಸಿದ್ದರು.
UPDATE: Captain Rohit Sharma has not taken the field on Day 3 due to a stiff back.#TeamIndia | #INDvENG | @IDFCFIRSTBank
— BCCI (@BCCI) March 9, 2024
ರೋಹಿತ್ ಗಾಯದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಸದ್ಯಕ್ಕೆ ಯಾವುದೇ ಆತಂಕ ಪಡಬೇಕಿಲ್ಲ. ರೋಹಿತ್ಗೆ ಸಣ್ಣ ಪ್ರಮಾಣದ ಬೆನ್ನು ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ಮೂರನೇ ದಿನದಾಟದ ಫೀಲ್ಡಿಂಗ್ನಿಂದ ವಿಶ್ರಾಂತಿ ನೀಡಲಾಗಿದೆ. ನಾಲ್ಕನೇ ದಿನದಾಟ ಸಾಗಿದರೆ ಅವರು ಮೈದಾನಕ್ಕಿಳಿಯಲಿದ್ದಾರೆ ಎಂದು ತಿಳಿಸಿದೆ.
ಶನಿವಾರ ಭಾರತ 477 ರನ್ ಗಳಿಸಿ ಆಲೌಟ್ ಆಗುವ ಮೊದಲ ಇನಿಂಗ್ಸ್ನಲ್ಲಿ 259 ರನ್ಗಳ ಲೀಡ್ ಗಳಿಸಿತು. ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಸದ್ಯ ಭೋಜನ ವಿರಾಮಕ್ಕೆ 5 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿ ಇನ್ನೂ 156ಗಳ ಹಿನ್ನಡೆಯಲ್ಲಿದೆ. ಸದ್ಯದ ಸ್ಥಿತಿ ನೋಡುವಾಗ ಈ ಪಂದ್ಯ ಇಂದೇ ಮುಕ್ತಾಯ ಕಾಣುವ ಸೂಚನೆಯಲ್ಲಿದೆ.
ರೋಹಿತ್ ಅವರು ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದರು. ಅವರ ದಾಖಲೆಗಳ ಪಟ್ಟಿ ಇಲ್ಲಿದೆ.
ಇದನ್ನೂ ಓದಿ Rohit Sharma : ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ; ಏನದು ದಾಖಲೆ?
ರೋಹಿತ್ ಶರ್ಮ ಅವರು ಬರೆದ ದಾಖಲೆಗಳ ಪಟ್ಟಿ ಇಲ್ಲಿದೆ
2021 ರಿಂದ ಭಾರತದ ಪರ ಅತಿ ಹೆಚ್ಚು ಟೆಸ್ಟ್ ಶತಕಗಳು
ರೋಹಿತ್ ಶರ್ಮ-6
ಶುಭಮನ್ ಗಿಲ್-4
ರವೀಂದ್ರ ಜಡೇಜಾ-3
ಯಶಸ್ವಿ ಜೈಸ್ವಾಲ್-3
ರಿಷಭ್ ಪಂತ್-3
ಕೆಎಲ್ ರಾಹುಲ್-3
ಇಂಗ್ಲೆಂಡ್ ವಿರುದ್ಧ ಭಾರತದ ಆರಂಭಿಕ ಆಟಗಾರರಿಂದ ಅತಿ ಹೆಚ್ಚು ಟೆಸ್ಟ್ ಶತಕ
ಸುನೀಲ್ ಗವಾಸ್ಕರ್-4
ರೋಹಿತ್ ಶರ್ಮ-4
ವಿಜಯ್ ಮರ್ಚೆಂಟ್-3
ಮುರಳಿ ವಿಜಯ್-3
ಕೆ.ಎಲ್ ರಾಹುಲ್-3
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಶತಕಗಳು
ಡೇವಿಡ್ ವಾರ್ನರ್-49
ಸಚಿನ್ ತೆಂಡೂಲ್ಕರ್- 45
ರೋಹಿತ್ ಶರ್ಮಾ-43
ಕ್ರಿಸ್ ಗೇಲ್-42
ಸನತ್ ಜಯಸೂರ್ಯ-41
ಮ್ಯಾಥ್ಯೂ ಹೇಡನ್-40
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ಶತಕಗಳು
ಸಚಿನ್ ತೆಂಡೂಲ್ಕರ್-100
ವಿರಾಟ್ ಕೊಹ್ಲಿ-80
ರಾಹುಲ್ ದ್ರಾವಿಡ್-48
ರೋಹಿತ್ ಶರ್ಮ-48
ವಿರೇಂದ್ರ ಸೆಹವಾಗ್-38
ಸೌರವ್ ಗಂಗೂಲಿ-38