Site icon Vistara News

India vs Ireland: ಅಂತಿಮ ಟಿ20 ಪಂದ್ಯಕ್ಕೆ ಕ್ಷಣಗಣನೆ; ಭಾರತ ತಂಡದಲ್ಲಿ ಬದಲಾವಣೆ ಖಚಿತ

India tour of Ireland, 2023

ಡಬ್ಲಿನ್​: ಈಗಾಗಲೇ ಸರಣಿ ಐರ್ಲೆಂಡ್(India vs Ireland)​ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡು ಸರಣಿ ವಶಪಡಿಸಿಕೊಂಡಿರುವ ಭಾರತ ಅಂತಿಮ ಮತ್ತು ಮೂರನೇ(IRE vs IND, 3rd T20I) ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ಸಂಜೆ ಈ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಳ್ಳುವುದು ಜಸ್​ಪ್ರೀತ್​ ಬುಮ್ರಾ(Jasprit Bumrah) ಪಡೆಯ ಯೋಜನೆಯಾಗಿದೆ. ಇತ್ತಂಡಗಳ ಸಂಭಾವ್ಯ ತಂಡ ಮತ್ತು ಪಿಚ್​ ರಿಪೋರ್ಟ್​ ಇಂತಿದೆ.

ಪಿಚ್​ ರಿಪೋರ್ಟ್

ಮಲಾಹೈಡ್‌ನ ವಿಲೇಜ್(The Village, Dublin) ಕ್ರಿಕೆಟ್ ಸ್ಟೇಡಿಯಂನ ಪಿಚ್​ ಬೌಲಿಂಗ್​ ಸ್ನೇಹಿಯಾಗಿದ್ದರೂ ಇಲ್ಲಿ ರನ್​ ಗಳಿಕೆಗೂ ಅವಕಾಶವಿದೆ. ಇಲ್ಲಿ ವೇಗಿಗಳು ಮತ್ತು ಸ್ಪಿನ್ನರ್​ಗಳು ಸಮಾನವಾಗಿ ವಿಕೆಟ್​ ಕೀಳಬಹುದು. ಆರಂಭದಲ್ಲಿ ವಿಕೆಟ್​ ಬಿದ್ದರೂ ಬಳಿಕ ಬ್ಯಾಟಿಂಗ್​ಗೆ ನೆರವು ಸಿಗಲಿದೆ. ಇದಕ್ಕೆ ಕಳೆದ ಎರಡು ಪಂದ್ಯಗಳೇ ಉತ್ತಮ ನಿದರ್ಶನ ಉಭಯ ತಂಡಗಳ ಆರಂಭಿಕ ವಿಕೆಟ್​ ಬೇಗನೇ ಬಿದ್ದರೂ ಬಳಿಕ ಮಧ್ಯಮ ಕ್ರಮಾಂಕದಲ್ಲಿ ರನ್​ ಮಳೆಯೇ ಹರಿದು ಬಂದಿತ್ತು. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ 167 ರನ್‌ ಆಗಿದೆ. ಇಬ್ಬನಿಯ ಸಮಸ್ಯೆಯೂ ಇಲ್ಲಿ ಅಧಿಕವಾಗಿರುವ ಕಾರಣ ಚೇಸಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಬದಲಾವಣೆ ಸಾಧ್ಯ

ಈಗಾಗಲೇ ಸರಣಿ ಗೆದ್ದಿರುವ ಭಾರತ ತಂಡ ಮೂರನೇ ಪಂದ್ಯಕ್ಕೆ ಕೆಲ ಬದಲಾವಣೆ ಮಾಡುವ ಸಾಧ್ಯತೆ ಅಧಿಕ. ಜಿತೇಶ್​ ಶರ್ಮ, ಅವೇಶ್​ ಖಾನ್​ ಅಥವಾ ಮುಖೇಶ್​ ಕುಮಾರ್​ ಅವರು ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಅಧಿಕವಾಗಿದೆ. ಸಂಜು ಸ್ಯಾಮ್ಸನ್​ ಮತ್ತು ಅರ್ಶ್​ದೀಪ್​ ಸಿಂಗ್​ ವಿಶ್ರಾಂತಿ ಪಡೆಯಬಹುದು. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿದೆ. ಈ ಸ್ಟೇಡಿಯಂನಲ್ಲಿ 11,500 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ದ್ವಿತೀಯ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿ ಚೊಚ್ಚಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಐಪಿಎಲ್‌ ಸ್ಟಾರ್‌ ರಿಂಕು ಸಿಂಗ್‌ ಈ ಪಂದ್ಯದಲ್ಲಿಯೂ ಸಿಡಿಯುವ ನಿರೀಕ್ಷೆಯಿದೆ.

ಇದನ್ನೂ ಓದಿ Ireland vs India: ಐರ್ಲೆಂಡ್​ ವಿರುದ್ಧ ಸರಣಿ ಗೆದ್ದ ಭಾರತ; ದ್ವಿತೀಯ ಪಂದ್ಯದಲ್ಲಿ33 ರನ್​ ಗೆಲುವು

ಸಂಭಾವ್ಯ ತಂಡ

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್/ ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್/ ಕ್ರೇಗ್ ಯಂಗ್.

ಭಾರತ ತಂಡ: ಜಸ್‌ಪ್ರೀತ್‌ ಬುಮ್ರಾ (ನಾಯಕ), ಋತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ಜಿತೇಶ್​ ಶರ್ಮ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್‌ ಸಿಂಗ್‌/ ಮುಕೇಶ್‌ ಕುಮಾರ್‌, ಅವೇಶ್​ ಖಾನ್​.

Exit mobile version