ಡಬ್ಲಿನ್: ಭಾರತ ಮತ್ತು ಐರ್ಲೆಂಡ್(India vs Ireland) ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದೆ(Ireland vs India, 1st T20). ಆಗಸ್ಟ್ 18, 20 ಮತ್ತು 23 ರಂದು ಪಂದ್ಯಗಳು ನಡೆಯಲಿವೆ. 2024ರ ಪುರುಷರ ಟಿ20 ವಿಶ್ವಕಪ್ ಅರ್ಹತೆಯನ್ನು ಪಡೆದುಕೊಂಡ ನಂತರ ಈ ಸರಣಿಯು ಐರ್ಲೆಂಡ್ ನ ಮೊದಲ ದ್ವಿಪಕ್ಷೀಯ ಟಿ20 ಸರಣಿಯಾಗಿದೆ. ಭಾರತ ತಂಡವನ್ನು ಮುನ್ನಡೆಸುತ್ತಿರುವ ಜಸ್‌ಪ್ರೀತ್ ಬುಮ್ರಾ(Jasprit Bumrah)ಗೆ ಈ ಸರಣಿ ಫಿಟ್‌ನೆಸ್ ಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಮಹತ್ವದ್ದಾಗಿದೆ. ಈ ಪಂದ್ಯದ ಪಿಚ್ ರಿಪೋರ್ಟ್(The Village, Dublin pitch report) ಮತ್ತು ಸಂಭಾವ್ಯ ತಂಡಗಳ ವರದಿ ಇಂತಿದೆ.
ಪಿಚ್ ರಿಪೋರ್ಟ್
ಮಲಾಹೈಡ್‌ನ ವಿಲೇಜ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇತ್ತೀಚಿನ ಟಿ20 ದಾಖಲೆಗಳನ್ನು ಪರಿಶೀಲಿಸಿದಾಗ, ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವುದು ಕಂಡು ಬಂದಿದೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ 167 ರನ್ ಆಗಿದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸಬಹುದಾದರೂ ವೇಗಿಗಳಿಗೆ ಹೆಚ್ಚಿನ ಹಿಡಿತ ಕಷ್ಟ. ಹೀಗಾಗಿ ವೇಗಿಗಳು ಶಕ್ತಿಮೀರಿ ಪ್ರಯತ್ನಿಸಬೇಕಾದಿತು. ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಅಧಿಕ.
ಹವಾಮಾನ ವರದಿ
ಡಬಲ್ಲಿನ್‌ನಲ್ಲಿ ಮಳೆ ಕಾಟ ಸದ್ಯಕ್ಕೆ ಇಲ್ಲ. ಆದರೆ ವಿಪರೀತ ಚಳಿ ಇರಳಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಜತೆಗೆ ಇಬ್ಬನಿ ಸಮಸ್ಯೆಯೂ ಕಾಡಲಿದೆ ಎಂದು ತಿಳಿಸಿದೆ. ಇಬ್ಬನಿ ಸಮಸ್ಯೆ ಇದ್ದರೆ ವೇಗಿಗಳಿಗೆ ಇಲ್ಲಿ ನಿಖರ ಗುರಿಯೆಡೆಗೆ ಚೆಂಡನ್ನು ಎಸೆಯಲು ಕಷ್ಟಕರವಾಗಲಿದೆ. ಅದಲ್ಲೂ ಚೇಸಿಂಗ್ ವೇಳೆ ಬ್ಯಾಟರ್‌ಗಳನ್ನು ಹಿಡಿದಿಟ್ಟುಕೊಳ್ಳುವುದು ಮತ್ತಷ್ಟು ಸವಾಲಾಗಲಿದೆ.
ಇಲ್ಲಿ ಇದುವರೆಗೆ 16 ಟಿ20 ಪಂದ್ಯಗಳು ನಡೆದಿದ್ದು ಇದರಲ್ಲಿ 7 ಪಂದ್ಯಗಳು ಮೊದಲು ಬ್ಯಾಟಿಂಗ್ ನಡೆಸಿದ ತಂಡ ಮೇಲುಗೈ ಸಾಧಿಸಿದೆ. 9 ಪಂದ್ಯಗಳಲ್ಲಿ ಚೇಸಿಂಗ್ ನಡೆಸಿದ ತಂಡ ಗೆಲುವು ದಾಖಲಿಸಿದೆ. ಇಲ್ಲಿ ಕುಲ್‌ದೀಪ್ ಯಾದವ್ ಅವರು ಉತ್ತಮ ಬೌಲಿಂಗ್ ದಾಖಲೆಯನ್ನು ಹೊಂದಿದ್ದಾರೆ. 2018 ರಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ಕುಲ್‌ದೀಪ್ 21 ರನ್‌ಗಳಿಗೆ 4 ವಿಕೆಟ್ ಉಡಾಯಿಸಿದ್ದರು. ಇದು ಇಲ್ಲಿಯ ಉತ್ತಮ ಬೌಲಿಂಗ್ ದಾಖಲೆಯಾಗಿದೆ.
ಇದನ್ನೂ ಓದು ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ; ಬುಮ್ರಾ ಬೆಂಕಿ ಬೌಲಿಂಗ್‌ಗೆ ಪರದಾಡಿದ ಬ್ಯಾಟರ್‌ಗಳು
ಸಂಭ್ಯಾ ತಂಡ
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್/ ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್/ ಕ್ರೇಗ್ ಯಂಗ್.
ಭಾರತ ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್/ ಮುಕೇಶ್ ಕುಮಾರ್.