Site icon Vistara News

India vs Ireland: ಭಾರತ-ಐರ್ಲೆಂಡ್​ ಟಿ20 ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

India vs Ireland

India vs Ireland: How is India-Ireland T20 record, pitch report?

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಭಾರತ, ತನ್ನ ಅಭಿಯಾನವನ್ನು ನಾಳೆ(ಬುಧವಾರ) ಆರಂಭಿಸಲಿದೆ. ಐರ್ಲೆಂಡ್​(India vs Ireland) ವಿರುದ್ಧ ನ್ಯೂಯಾರ್ಕ್​ನ ನಸೌ ಕೌಂಟಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಇದುವರೆಗಿನ ಟಿ20 ದಾಖಲೆ, ತಂಡಗಳು, ಪಂದ್ಯದ ಪ್ರಸಾರದ ಮಾಹಿತಿ ಇಂತಿದೆ.

ಟಿ20 ಮುಖಾಮುಖಿ


ಉಭಯ ತಂಡಗಳು ಇದುವೆರೆಗೆ ಟಿ20 ಕ್ರಿಕೆಟ್​ನಲ್ಲಿ ಒಟ್ಟು 7 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎಲ್ಲ ಪಂದ್ಯಗಳನ್ನು ಭಾರತ ಗೆದ್ದಿದೆ. ಇದರಲ್ಲೊಂದು ಟಿ20 ವಿಶ್ವಕಪ್​ ಪಂದ್ಯವಾಗಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿ ಗೋಚರಿಸಿದರೂ ಕೂಡ ಐರ್ಲೆಂಡ್​ ಸವಾಲನ್ನು ಹಗುರವಾಗಿ ಕಾಣುವಂತಿಲ್ಲ. ಏಕೆಂದರೆ ಬಲಿಷ್ಠ ತಂಡಗಳು ಕೂಡ ದುರ್ಬಲ ತಂಡದ ವಿರುದ್ಧ ಸೋತ ಹಲವು ನಿದರ್ಶನಗಳಿವೆ. ಹೀಗಾಗಿ ಪ್ರತಿ ಹೆಚ್ಚುಗೂ ಎಚ್ಚರಿಕೆಯಿಂದ ಆಡಬೇಕು.

ಪಿಚ್​ ರಿಪೋರ್ಟ್​


ನಸೌ ಕ್ರಿಕೆಟ್​ ಸ್ಟೇಡಿಯಂನ ಪಿಚ್ ಅತ್ಯಂತ ಆಘಾತಕಾರಿಯಾಗಿ ವರ್ತಿಸುತ್ತಿದೆ. ಬ್ಯಾಟರ್​ಗಳು ಇಲ್ಲಿ ರನ್​ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸೋಮವಾರ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯವೇ ಉತ್ತಮ ನಿದರ್ಶನ. ಈ ಪಂದ್ಯದಲ್ಲಿ ದಾಖಲೆಯ 127 ಎಸೆತಗಳು ಡಾಟ್​ ದಾಖಲಾಗಿತ್ತು. ಅಲ್ಲದೆ ಬೌನ್ಸರ್​ ಎಸೆತಗಳನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗದೆ ಬ್ಯಾಟರ್​ಗಳು ಚೆಂಡಿನೇಟು ತಿಂದಿದ್ದರು. ಔಟ್​ ಫೀಲ್ಡ್​ ಕೂಡ ಫೀಲ್ಡಿಂಗ್​ಗೆ ಅಷ್ಟು ಯೋಗ್ಯವಾಗಿಲ್ಲ. ಈ ಬಗ್ಗೆ ಕೋಚ್​ ರಾಹುಲ್​ ದ್ರಾವಿಡ್​ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಪೂರ್ಣವಾಗಿ ಜಾರುತ್ತಿದ್ದು ಆಟಗಾರರು ಗಾಯಗಳಾಗುವ ಸಾಧ್ಯತೆ ಅಧಿಕವಾಗಿ ಎಂದು ದ್ರಾವಿಡ್​ ಹೇಳಿದ್ದರು. ಬೌಲರ್​ಗಳಿಗೆ ಇದು ನೆಚ್ಚಿನ ತಾಣವಾಗಿದೆ.

ಪಂದ್ಯದ ಪ್ರಸಾರ


ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಲಂಕಾ-ದಕ್ಷಿಣ ಆಫ್ರಿಕಾ ಪಂದ್ಯ

ಉಭಯ ತಂಡಗಳು


ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್.

ಐರ್ಲೆಂಡ್​: ಪಾಲ್ ಸ್ಟರ್ಲಿಂಗ್ (ನಾಯಕ), ಮಾರ್ಕ್ ಅಡೈರ್, ರಾಸ್ ಅಡೈರ್, ಆಂಡ್ರ್ಯೂ ಬಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಲಾರ್ಕನ್ ಟಕರ್ (ವಿಕೆಟ್ ಕೀಪರ್), ಬೆನ್ ವೈಟ್ ಮತ್ತು ಕ್ರೇಗ್ ಯಂಗ್.

Exit mobile version