Site icon Vistara News

India vs Ireland: ಭಾರತ-ಐರ್ಲೆಂಡ್‌ ಟಿ20 ಪಂದ್ಯಗಳ ಟಿಕೆಟ್‌ ಸೋಲ್ಡ್‌ ಔಟ್‌

team india cricket players

ಡಬ್ಲಿನ್‌: ಭಾರತದ ಕ್ರಿಕೆಟ್‌ ಪಂದ್ಯ ಇದ್ದರೇ ಸಾಕು ಎಲ್ಲರಲ್ಲೂ ಕ್ರಿಕೆಟ್‌ ಕ್ರೇಜ್‌ ಕೊಂಚ ಅಧಿಕವಾಗಿಯೇ ಕಾಣಸಿಗುತ್ತದೆ. ಅದು ಎಷ್ಟ್ರೇ ದುರ್ಬಲ ತಂಡದ ಎದುರಾದರೂ ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಐರ್ಲೆಂಡ್‌(Ireland vs India, 1st T20) ವಿರುದ್ಧದ ಟಿ20 ಸರಣಿ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೇರಿ ಯಾವುದೇ ಸ್ಟಾರ್‌ ಆಟಗಾರರು ಈ ಸರಣಿಯಲ್ಲಿ(India tour of Ireland) ಇರದಿದ್ದರೂ ಎರಡು ಪಂದ್ಯಗಳ ಟಿಕೆಟ್‌ ಸೋಲ್ಡ್‌ ಔಟ್‌(india vs ireland t20 tickets) ಆಗಿದೆ ಎಂದು ಐರ್ಲೆಂಡ್‌ ಕ್ರಿಕೆಟ್‌ ಮಂಡಳಿ ಟ್ವಿಟರ್‌ನಲ್ಲಿ ತಿಳಿಸಿದೆ.

“ಭಾರತ ಮತ್ತು ಐರ್ಲೆಂಡ್‌ ವಿರುದ್ಧದ ಮೊದಲೆರಡು ಪಂದ್ಯಗಳ ಎಲ್ಲ ಟಿಕೆಟ್‌ ಈಗಾಗಲೇ ಮಾರಾಟವಾಗಿದೆ. ಮೂರನೇ ಪಂದ್ಯಕ್ಕೂ ಇನ್ನೇನು ಕೆಲವೇ ಟಿಕೆಟ್‌ಗಳು ಮಾತ್ರ ಬಾಕಿ ಇದೆ. ಇದೂ ಕೂಡ ಸೋಲ್ಡ್‌ ಔಟ್‌ ಆಗುವ ಬರವಸೆ ಇದೆ. ನಮ್ಮ ದೇಶದಲ್ಲಿಯೂ ಕ್ರಿಕೆಟ್‌ ಬೆಳವಣಿಗೆಗೆ ಇದೊಂದು ಮಹತ್ವದ ಹೆಜ್ಜೆ” ಎಂದು ಐರ್ಲೆಂಡ್‌ ಕ್ರಿಕೆಟ್‌ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

ಉಭಯ ತಂಡಗಳ ಮೊದಲ ಟಿ20 ಪಂದ್ಯ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಎಲ್ಲ ಪಂದ್ಯಗಳು ‘ದಿ ವಿಲೇಜ್’ ಮಲಾಹೈಡ್ ಕ್ರಿಕೆಟ್ ಕ್ಲಬ್(The Village, Dublin) ಮೈದಾನದಲ್ಲಿ ನಡೆಯಲಿವೆ. ಈ ಸ್ಟೇಡಿಯಂನಲ್ಲಿ 11,500 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಐಪಿಎಲ್‌ ಸ್ಟಾರ್‌ಗಳಾದ ರಿಂಕು ಸಿಂಗ್‌ ಅವರಿಗೆ ಈ ಸರಣಿಯಲ್ಲಿ ಆಡುವ ಅವಕಾಶ ಸಿಗುವು ಸಾಧ್ಯತೆ ಅಧಿಕವಾಗಿದೆ.

ಭಾರತದ ವಿರುದ್ಧ ಆಡುವುದೇ ಖುಷಿ

“ಐರ್ಲೆಂಡ್​ ಪ್ರವಾಸಕ್ಕೆ ಭಾರತ ತಂಡವನ್ನು ಆಹ್ವಾನಿಸುತ್ತಿರುವುದು ಸಂತಸ ತಂದಿದೆ. ಕಳೆದ 12 ತಿಂಗಳ ಅವದಿಯಲ್ಲಿ ಎರಡನೇ ಬಾರಿ ಭಾರತದ ಜತೆ ಸರಣಿ ಆಡಲು ಸಜ್ಜಾಗಿದ್ದೇವೆ. ವಿಶ್ವ ಬಲಿಷ್ಠ ತಂಡದ ವಿರುದ್ಧ ಆಡುವುದೇ ಒಂದು ಖುಷಿಯ ವಿಚಾರ” ಎಂದು ಕ್ರಿಕೆಟ್ ಐರ್ಲೆಂಡ್​ನ ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯೂಟ್ರೋಮ್ ಹೇಳಿದ್ದಾರೆ.

ಕಳೆದ ವರ್ಷ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಂಡಿತು. ಈ ವೇಳೆ 2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು. ಈ ಬಾರಿಯೂ ಭಾರತ ಗೆಲುವು ಸಾಧಿಸುವ ಇರಾದೆಯಲ್ಲಿದೆ.

ಪಂದ್ಯಗಳ ವಿವರ ಹೀಗಿದೆ

ಮೊದಲ ಟಿ20: ಆಗಸ್ಟ್ 18, ಸಂಜೆ 7:30ಕ್ಕೆ

ದ್ವಿತೀಯ ಟಿ20: ಆಗಸ್ಟ್ 20, ಸಂಜೆ 7:30ಕ್ಕೆ

ತೃತೀಯ ಟಿ20: ಆಗಸ್ಟ್​ 23 ಸಂಜೆ 7:30ಕ್ಕೆ

ಇದನ್ನೂ ಓದಿ India vs Ireland: ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಐರ್ಲೆಂಡ್‌ ಆಟಗಾರ

ಉಭಯ ತಂಡಗಳು

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್.

ಭಾರತ ತಂಡ: ಜಸ್‌ಪ್ರೀತ್‌ ಬುಮ್ರಾ (ನಾಯಕ), ರುತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌, ಆವೇಶ್‌ ಖಾನ್‌.

Exit mobile version