ಡಬ್ಲಿನ್: ಪ್ರವಾಸಿ ಭಾರತ ಮತ್ತು ಆತಿಥೇಯ ಐರ್ಲೆಂಡ್(India vs Ireland) ನಡುವಣ ಮೊದಲ ಟಿ20 ಪಂದ್ಯ ಶುಕ್ರವಾರದಿಂದ(Ireland vs India, 1st T20) ಮೊದಲ್ಗೊಳ್ಳಲಿದೆ. ಮೂರು ಪಂದ್ಯಗಳ ಸರಣಿ ಇದಾಗಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಐರ್ಲೆಂಡ್ ತಂಡದ ಯುವ ಸ್ಪಿನ್ನರ್ ಬೆನ್ ವೈಟ್(Ben White) ಟೀಮ್ ಇಂಡಿಯಾಕ್ಕೆ(Team India) ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. ನಾವು ಬಲಿಷ್ಠವಾಗಿದ್ದೇವೆ, ಭಾರತ ತಂಡದ ಆಟಗಾರರನ್ನು ಕಟ್ಟಿಹಾಕಲು ಎಲ್ಲ ತಂತ್ರವನ್ನು ಕರಗತ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಬಾರಿ ಗೆಲುವು ನಮ್ಮದೆ…
ಬಿಸಿಸಿಐ ಜತೆಗಿನ ಸಂದರ್ಶನದಲ್ಲಿ ಈ ವಿಚಾರವನ್ನು ಬೆನ್ ವೈಟ್ ಹೇಳಿದ್ದಾರೆ. “ಭಾರತ ತಂಡ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬಲಿಷ್ಠವಾಗಿದೆ. ಈ ತಂಡದ ವಿರುದ್ಧ ಆಡುವುದೇ ಒಂದು ಖುಷಿ, ಇಲ್ಲಿ ಸಿಗುವ ಅನುಭವ ಬೇರಲ್ಲೂ ಸಿಗಲು ಸಾಧ್ಯವಿಲ್ಲ. ಸ್ಪಿನ್ ಬೌಲಿಂಗ್‌ಗೆ ಭಾರತೀಯ ಆಟಗಾರರು ಉತ್ತಮವಾಗಿ ಬ್ಯಾಟ್ ಬೀಸುವ ಸಾಮರ್ಥ್ಯ ಹೋಂದಿದ್ದಾರೆ. ಇದುವರೆಗೂ ನಾವು ಭಾರತ ವಿರುದ್ಧ ಒಂದು ಪಂದ್ಯವನ್ನೂ ಗೆದ್ದಿಲ್ಲ. ಆದರೆ ಈ ಬಾರಿ ಮಾತ್ರ ನಾವು ಗೆದ್ದೆ ಗೆಲ್ಲುತ್ತೇವೆ” ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಸಂಜು ವಿಕೆಟ್ ಪಡೆಯುವುದು ಮೊದಲ ಗುರಿ
ಇದೇ ವೇಳೆ ಬೆನ್ ವೈಟ್ ಅವರು ಕೇರಳದ ಸ್ಟಂಪರ್ ಮತ್ತು ಬ್ಯಾಟರ್ ಆಗಿರುವ ಸಂಜು ಸ್ಯಾಮ್ಸನ್(Sanju Samson) ಅವರ ವಿಕೆಟ್ ಕೀಳುವುದು ನನ್ನ ಮೊದಲ ಗುರಿಯಾಗಿದೆ ಎಂದರು. ಸಂಜು ಅವರು ಐರ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಆದರೆ ಈ ಬಾರಿ ಅವರ ವಿಕೆಟ್ ಪಡೆಯಲು ಹೊಸ ತಂತ್ರಗಾರಿಕೆಯನ್ನು ಮಾಡಿದ್ದೇನೆ ಅವರ ವಿಕೆಟ್ ಪೆಡೆದರೆ ಸಂತಸಗೊಳ್ಳಲಿದ್ದೇನೆ ಎಂದರು.
ಕಳೆದೊಂದು ವರ್ಷಗಳಿಂದ ನಮ್ಮ ತಂಡ ಎಲ್ಲ ವಿಭಾಗದಲ್ಲಿಯೂ ಸುಧಾರಣೆ ಕಂಡಿದೆ. ಅಲ್ಲದೆ ಹಲವು ಸರಣಿಗಳಲ್ಲೂ ಆಡಿದ ಅನುಭಬವಿದೆ. ಸದ್ಯ ನಮ್ಮ ತಂಡವನ್ನು ನೋಡುವಾಗ ವಿಶ್ವದ ಯಾವುದೇ ಬಲಿಷ್ಠ ತಂಡವನ್ನು ಸೋಲಿಸುವ ಶಕ್ತಿ ನಮ್ಮಲಿದೆ ಎಂದು ವೈಟ್ ಹೇಳಿದರು.
ಇದನ್ನೂ ಓದಿ India vs Ireland: ಐರ್ಲೆಂಡ್ ವಿರುದ್ಧ ಭಾರತ ತಂಡದ ದಾಖಲೆ ಹೇಗಿದೆ? ಅಂಕಿ ಅಂಶ ಹೀಗಿದೆ
ಉಭಯ ತಂಡಗಳು
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್.
ಜಸ್‌ಪ್ರೀತ್ ಬುಮ್ರಾ ಘಾತಕ ಬೌಲಿಂಗ್ ದಾಳಿಯ ದೃಶ್ಯ
ಭಾರತ ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.