ಮುಂಬೈ: ಮುಂಬರುವ ಭಾರತ ತಂಡದ ಐರ್ಲೆಂಡ್ (Ind vs IRE) ಪ್ರವಾಸದ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ಜಿಯೋಸಿನಿಮಾದಲ್ಲಿ ನೇರಪ್ರಸಾರ ಮಾಡಲು ಎಕ್ಸ್ಕ್ಲೂಸಿವ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ವಯಾಕಾಮ್18 ಘೋಷಿಸಿದೆ. ಜಸ್ಪ್ರೀತ್ ಬುಮ್ರಾ ಸಾರಥ್ಯದ ಭಾರತ ತಂಡ ಆಗಸ್ಟ್ 18, 20 ಮತ್ತು 23ರಂದು ಡಬ್ಲಿನ್ನ ಮಲಾಹೈಡ್ ಕ್ರಿಕೆಟ್ ಕ್ಲಬ್ನಲ್ಲಿ ಆಡಲಿದೆ. ಈ ಮೂರು ಟಿ20 ಪಂದ್ಯಗಳು ಸ್ಪೋರ್ಟ್ಸ್ 18 – 1, ಸ್ಪೋರ್ಟ್ಸ್ 18 – 1 ಎಚ್‌ಡಿ ಮತ್ತು ಸ್ಪೋರ್ಟ್ಸ್ 18 ಖೇಲ್ ಚಾನಲ್ಗಳಲ್ಲೂ ನೇರಪ್ರಸಾರ ಕಾಣಲಿವೆ.
ಪ್ರಸಕ್ತ ನಡೆಯುತ್ತಿರುವ ಭಾರತ ತಂಡದ 2023ರ ವೆಸ್ಟ್ ಇಂಡೀಸ್ ಪ್ರವಾಸ ಪಂದ್ಯಗಳೂ ಜಿಯೋಸಿನಿಮಾದಲ್ಲಿ ನೇರಪ್ರಸಾರವಾಗುತ್ತಿದೆ. ವೀಕ್ಷಕರ ಸಂಖ್ಯೆ, ವೀಕ್ಷಕರನ್ನು ಹಿಡಿದಿಡುವಲ್ಲಿ ಟಿವಿಯನ್ನೂ ಮೀರಿಸಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯು ಜಿಯೋಸಿನಿಮಾದಲ್ಲಿ 2.2 ದಶಲಕ್ಷಕ್ಕಿಂತಲೂ ಹೆಚ್ಚಿನ ವೀಕ್ಷಣೆಯನ್ನು ದಾಖಲಿಸಿದೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕಿಂತ ಹೆಚ್ಚಾಗಿದೆ. ಕೆರಿಬಿಯನ್‌ನಲ್ಲಿ ನಡೆದ ಎಲ್ಲ ಮಾದರಿಯ ಕ್ರಿಕೆಟ್ ಸರಣಿಗಳ ಪಂದ್ಯಗಳನ್ನೂ 7 ಕೋಟಿಗೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ.
ಮೂರು ಪಂದ್ಯಗಳ ಟಿ20 ಸರಣಿಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಹಳಷ್ಟು ಮಹತ್ವದ್ದಾಗಿದೆ. ಇದು ಭಾರತದ ಬೌಲಿಂಗ್ ತಾರೆ ಜಸ್ಪ್ರೀತ್ ಬುಮ್ರಾ ಅವರ ಪುನರಾಗಮನಕ್ಕೆ ವೇದಿಕೆಯಾಗಲಿದೆ. ಮುಂದಿನ ಪೀಳಿಗೆಯ ಭಾರತೀಯ ಕ್ರಿಕೆಟ್ ಪ್ರತಿಭೆಗಳ ಒಂದು ಇಣುಕುನೋಟವಾಗಿದೆ’ ಎಂದು ವಯಾಕಾಮ್18 ಸ್ಪೋರ್ಟ್ಸ್ನ ಕಾರ್ಯತಂತ್ರ, ಪಾಲುದಾರಿಕೆ ಮತ್ತು ಸ್ವಾಧೀನಗಳ ಮುಖ್ಯಸ್ಥ ಹರ್ಷ್ ಶ್ರೀವಾಸ್ತವ ಹೇಳಿದ್ದಾರೆ.
ಇದನ್ನೂ ಓದಿ : IND vs WI: ಭಾರತದ ಸರಣಿ ಸಮಬಲದ ಯೋಜನೆಗೆ ಮಳೆ ಅಡ್ಡಿ ಸಾಧ್ಯತೆ
ನೇರಪ್ರಸಾರ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಪಂಜಾಬಿ ಮತ್ತು ಭೋಜ್‌ಪುರಿಯಂಥ ಜನಪ್ರಿಯ ಭಾಷೆಗಳನ್ನು ಒಳಗೊಂಡಂತೆ ಬಹು ಭಾಷೆಗಳಲ್ಲಿ ಸರಣಿಯನ್ನು ಜಿಯೋಸಿನಿಮಾ ಪ್ರಸಾರವಾಗಲಿದೆ. ಜತೆಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಜನಪ್ರಿಯವಾದ ತನ್ನ, ಭವಿಷ್ಯ ಹೇಳಿ ಬಹುಮಾನ ಗೆಲ್ಲುವ ‘ಜೀತೋ ಧನ್ ಧನಾ ಧನ್’ ಸ್ಪರ್ಧೆಯನ್ನೂ ಮುಂದುವರಿಸುತ್ತದೆ.
ಐಪಿಎಲ್ ಸಮಯದಲ್ಲಿ ಆರಂಭ
2023ರ ಟಾಟಾ ಐಪಿಎಲ್ ಸಮಯದಲ್ಲಿ ಮೊದಲಿಗೆ ‘ಜೀತೋ ಧನ್ ಧನಾ ಧನ್’ ಸ್ಪರ್ಧೆಯನ್ನು ಪರಿಚಯಿಸಲಾಯಿತು. ಸಾವಿರ ಜನರು ಬಹುಮಾನಗಳನ್ನು ಗೆಲ್ಲುವ ಈ ಸ್ಪರ್ಧೆ ಭರ್ಜರಿ ಯಶಸ್ಸು ಕಂಡಿದೆ. ಈ ಸ್ಪರ್ಧೆಯಿಂದ 60ಕ್ಕೂ ಹೆಚ್ಚು ಸ್ಪರ್ಧಿಗಳು ಅತ್ಯಾಕರ್ಷಕವಾದ ಕಾರುಗಳನ್ನೂ ಬಹುಮಾನವಾಗಿ ಗೆದ್ದುಕೊಂಡಿದ್ದಾರೆ.
18ರಿಂದ ಸರಣಿ
ಭಾರತ ತಂಡವು ಆಗಸ್ಟ್ 18ರಂದು ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ತಂಡವನ್ನು ಎದುರಿಸಲಿದೆ ಮತ್ತು ಇದರ ನೇರಪ್ರಸಾರವು ಜಿಯೋಸಿನಿಮಾ, ಸ್ಪೋರ್ಟ್ಸ್18-1, ಸ್ಪೋರ್ಟ್ಸ್18-1 ಎಚ್‌ಡಿ ಮತ್ತು ಸ್ಪೋರ್ಟ್ಸ್18 ಖೇಲ್ನಲ್ಲಿ ಸಂಜೆ 7.15ರಿಂದ ಆರಂಭವಾಗಲಿದೆ.
ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.
ಭಾರತ ತಂಡದ ಐರ್ಲೆಂಡ್ ಪ್ರವಾಸ ವೇಳಾಪಟ್ಟಿ
- ಆಗಸ್ಟ್ 18 ಮೊದಲ ಟಿ20 ಸಂಜೆ 7.15 ಮಲಾಹೈಡ್ ಕ್ರಿಕೆಟ್ ಕ್ಲಬ್, ಡಬ್ಲಿನ್
- ಆಗಸ್ಟ್ 20 ಎರಡನೇ ಟಿ20 ಸಂಜೆ 7.15 ಮಲಾಹೈಡ್ ಕ್ರಿಕೆಟ್ ಕ್ಲಬ್, ಡಬ್ಲಿನ್
- ಆಗಸ್ಟ್ 23 ಮೂರನೇ ಟಿ20 ಸಂಜೆ 7.15 ಮಲಾಹೈಡ್ ಕ್ರಿಕೆಟ್ ಕ್ಲಬ್, ಡಬ್ಲಿನ್