ಪಲ್ಲೆಕೆಲೆ: ಭಾರತ ಮತ್ತು ನೇಪಾಳ(India vs Nepal) ವಿರುದ್ಧ ಇಂದು ನಡೆಯುವ ಪಂದ್ಯದ ಆಡುವ ಬಳಗ ಮತ್ತು ಹವಾಮಾನ ವರದಿಯ ಹೈಲೆಟ್ಸ್ ಇಲ್ಲಿದೆ.
ರೋಹಿತ್ ಶರ್ಮಾ (74) ಹಾಗೂ ಶುಭ್ಮನ್ ಗಿಲ್ (67) ಅವರ ಅರ್ಧ ಶತಕಗಳ ನೆರವಿನಿಂದ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ ಬೇಕಾದ 145 ರನ್ಗಳ ಗುರಿಯನ್ನು ಸುಲಭವಾಗಿ ಮೀರಿತು.
12.4 ಓವರ್ಗಳಲ್ಲಿ 100 ರನ್ ಬಾರಿಸಿದ ಭಾರತ.
ಭಾರತ ತಂಡದ ಆರಂಭಿಕ ಜೋಡಿಯಾದ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಮೊದಲ 9 ಓವರ್ಗಳಲ್ಲಿ 61 ರನ್ ಬಾರಿಸಿದೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 23 ಓವರ್ಗಳಲ್ಲಿ 145 ರನ್ ಬಾರಿಸುವ ಗುರಿ ಎದುರಾಗಿದೆ.
ಭಾರತ ಹಾಗೂ ನೇಪಾಳ ತಂಡಗಳ ನಡುವಿನ ಏಷ್ಯಾ ಕಪ್ ಪಂದ್ಯಕ್ಕೆ ಮತ್ತೆ ಮಳೆಯ ಅಡಚಣೆ ಉಂಟಾಗಿದೆ. 231 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಲು ಭಾರತ ತಂಡ ಆರಂಭಿಸಿದ್ದು, 2.1 ಓವರ್ ಮುಕ್ತಾಯಗೊಂಡಾಗ ಮಳೆ ಬಂತು. ರೋಹಿತ್ ಶರ್ಮಾ 4 ರನ್ ಹಾಗೂ ಶುಭ್ಮನ್ ಗಿಲ್ 12 ರನ್ ಬಾರಿಸಿದ್ದು ಭಾರತ ತಂಡದ ಮೊತ್ತ 17.