ಪಲ್ಲೆಕೆಲೆ: ಭಾರತ ಮತ್ತು ನೇಪಾಳ(India vs Nepal) ವಿರುದ್ಧ ಇಂದು ನಡೆಯುವ ಪಂದ್ಯದ ಆಡುವ ಬಳಗ ಮತ್ತು ಹವಾಮಾನ ವರದಿಯ ಹೈಲೆಟ್ಸ್ ಇಲ್ಲಿದೆ.
231ರನ್ಗಳ ಗೆಲುವಿನ ಗುರಿಯನ್ನು ಬೆನ್ನೆಟ್ಟಲು ಭಾರತ ಆರಂಭಿಸಿದೆ. ಮೊದಲ ಎರಡು ಓವರ್ಗಳು ಮುಕ್ತಾಯಗೊಂಡಾಗ ವಿಕೆಟ್ ನಷ್ಟವಿಲ್ಲದೆ 13 ರನ್ ಬಾರಿಸಿದೆ.
ಏಷ್ಯ ಕಪ್ನ ಲೀಗ್ ಹಂತದ ಭಾರತ ಹಾಗೂ ನೇಪಾಳ ನಡುವಿನ ಪಂದ್ಯದ ಮೊದಲ ಇನಿಂಗ್ಸ್ ಮಳೆಯ ಅಡಚಣೆಯ ನಡುವೆಯೂ ಮುಕ್ತಾಯಗೊಂಡಿತು. ಬಲಿಷ್ಠ ಭಾರತ ತಂಡದ ಬೌಲಿಂಗ್ ದಾಳಿಯನ್ನು ಹಿಮ್ಮೆಟ್ಟಿಸಿದ ನೇಪಾಳ ತಂಡ 48.2 ಓವರ್ಗಳಲ್ಲಿ 230 ರನ್ ಬಾರಿಸಿದೆ. ಈ ಮೂಲಕ ಭಾರತ ತಂಡಕ್ಕೆ ಸಾಧಾರಣ ಗೆಲುವಿನ ಗುರಿ ಎದುರಾಗಿದೆ.
ಭಾರತ ಹಾಗೂ ನೇಪಾಳ ತಂಡಗಳ ನಡುವಿನ ಪಂದ್ಯಕ್ಕೆ ಮಳೆಯ ಅಡಚಣೆ ಉಂಟಾಗಿದೆ. ಮೊದಲು ಬ್ಯಾಟ್ ಮಾಡಿರುವ ನೇಪಾಳ 37.5 ಓವರ್ಗಳಲ್ಲಿ 178 ರನ್ ಬಾರಿಸಿದ್ದ ವೇಳೆ ಮಳೆ ಸುರಿದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿದೆ.
ಕೆಲವೇ ಹನಿ ಮಳೆ ಉದುರಿದ ಹೋದ ಕಾರಣ ಭಾರತ ಹಾಗೂ ನೇಪಾಳ ತಂಡಗಳ ನಡುವಿನ ಏಷ್ಯಾ ಕಪ್ ಪಂದ್ಯ ಮುಂದುವರಿದಿದೆ.
ಪಲ್ಲೆಕೆಲೆಯಲ್ಲಿ ಮಳೆ ಸುರಿಯಲು ಆರಂಭವಾಗಿದೆ. ಭಾರತ ಹಾಗೂ ನೇಪಾಳ ನಡುವಿನ ಏಷ್ಯಾ ಕಪ್ ಪಂದ್ಯ ಸ್ಥಗಿತಗೊಂಡಿದೆ. ಈ ವೇಳೆ ಮೊದಲು ಬ್ಯಾಟ್ ಮಾಡುತ್ತಿದ್ದ ನೇಪಾಳ ತಂಡ 6 ವಿಕೆಟ್ಗೆ 155 ರನ್ ಗಳಿಸಿದೆ. 34.2 ಓವರ್ಗಳು ಮುಕ್ತಾಯಗೊಂಡಿವೆ.