ಬೆಂಗಳೂರು: ಅಕ್ಟೋಬರ್ 5 ರಿಂದ ಆರಂಭವಾದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ(ICC World Cup 2023) ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು (ಭಾನುವಾರ) ನಡೆಯುವ ಭಾರತ ಮತ್ತು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಮೂಲಕ ಲೀಗ್ ಪಂದ್ಯಗಳಿಗೆ ತೆರೆ ಬೀಳಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ರಾರಾಜಿಸಿದ ಕಿಂಗ್ ಕೊಹ್ಲಿ ಕಟೌಟ್
ನಮ್ಮ ವಿರಾಟ ರಾಜ! 👑
— Royal Challengers Bangalore (@RCBTweets) November 12, 2023
Walking down memory lane with King Kohli at the Chinnaswamy be like! 🤴🏟️
🎥: Sastry_Chilakamarthy#playbold #indvned #teamindia #cwc23 #viratkohli pic.twitter.com/zKD4K1gDuT
ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ರಾರಾಜಿಸಿದ ಕಿಂಗ್ ಕೊಹ್ಲಿ ಕಟೌಟ್
ಪಂದ್ಯಕ್ಕಿಂತ ಸ್ಟೇಡಿಯಂನ ಹೊರ ಭಾಗದಲ್ಲಿ ರಾರಾಜಿಸುತ್ತಿರುವ ವಿರಾಟ್ ಕೊಹ್ಲಿ(Virat Kohli) ಅವರ ಕಟೌಟ್ ಪ್ರಮುಖ ಆಕರ್ಷಣೆಯಾಗಿದೆ. ಕೊಹ್ಲಿ ಸಿಡಿಸಿರುವ ಕೆಲ ಶತಕದ ಸಂಭ್ರಮಾಚರಣೆಯ ಕಟೌಟ್ ಇದಾಗಿದೆ. ಇದರ ವಿಡಿಯೊ ಎಲ್ಲಡೆ ವೈರಲ್(viral video) ಆಗಿದೆ.
ನಮ್ಮ ವಿರಾಟ ರಾಜ! 👑
— Royal Challengers Bangalore (@RCBTweets) November 12, 2023
Walking down memory lane with King Kohli at the Chinnaswamy be like! 🤴🏟️
🎥: Sastry_Chilakamarthy#playbold #indvned #teamindia #cwc23 #viratkohli pic.twitter.com/zKD4K1gDuT
ಜೋಶ್ ತುಂಬಲಿದ್ದಾರೆ ಕೊಹ್ಲಿ ಅಭಿಮಾನಿಗಳು
ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಹೀಗಾಗಿ ಸಹಜವಾಗಿಯೇ ಪಂದ್ಯಕ್ಕೆ ಅವರ ಅಭಿಮಾನಿಗಳು ಜೋಶ್ ತುಂಬಲಿದ್ದಾರೆ.
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಇಲ್ಲಿ 300 ಪ್ಲಸ್ ರನ್ಗೆ ಯಾವುದೇ ಕೊರತೆಯಾಗದು. ಪಿಚ್ 22 ಯಾರ್ಡ್ಗಳಷ್ಟು ಉದ್ದವಾಗಿದೆ ಮತ್ತು ಬೌಂಡರಿ ಲೈನ್ ಕೂಡ ಚಿಕ್ಕದಾಗಿದೆ. ಹೀಗಾಗಿ ಬ್ಯಾಟರ್‌ಗಳಿಗೆ ಇಲ್ಲಿ ಉತ್ತಮ ಸ್ಕೋರ್ ಮಾಡಲು ಸಹಕಾರಿಯಾಗಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಇದು ತವರಿನ ಪಂದ್ಯ. ಇದೇ ಕ್ರೀಡಾಂಗಣದಲ್ಲಿ ಅವರು ಆಡಿ ಬೆಳದದ್ದು. ಕೊಹ್ಲಿಗೂ ಈ ಪಿಚ್ನಲ್ಲಿ ಆಡಿದ ಅಪಾರ ಅನುಭವವಿದೆ. ಏಕೆಂದರೆ ಐಪಿಎಲ್ನಲ್ಲಿ ಅವರು ಆರ್ಸಿಬಿ ಪರ ಆಡುತ್ತಿದ್ದಾರೆ. ಅಲ್ಲದೆ ಆರ್ಸಿಬಿ ಬೌಲರ್ ಸಿರಾಜ್ಗೂ ಈ ಪಿಚ್ ಬೌಲಿಂಗ್ನಲ್ಲಿ ನೆರವು ನೀಡಬಹುದು