ಮುಂಬಯಿ: 4 ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು(IND vs NZ Live) ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ಮೊಹಮ್ಮದ್ ಶಮಿ ಅದ್ಭುತ ಫಾರ್ಮ್ ಮೂಲಕ ಮರಳಿದ್ದಾರೆ. ಅವರು ತಮ್ಮ ಸ್ಪೆಲ್ನ ಮೊದಲ ಎಸೆತದಲ್ಲಿಯೇ ಅಪಾಯಕಾರಿ ಡೆವೋನ್ ಕಾನ್ವೆ ಆವರನ್ನು ಔಟ್ ಮಾಡಿದ್ದಾರೆ. ಕಾನ್ವೆ 15 ಎಸೆತಕ್ಕೆ 13 ರನ್ ಬಾರಿಸಿ ಔಟಾದರು.
50ನ ಏಕ ದಿನ ಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದ ವಿರಾಟ್ ಕೊಹ್ಲಿ ಟಿಮ್ ಸೌಥಿ ಎಸೆತಕ್ಕೆ ಕಾನ್ವೆಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಅವರು ಅದಕ್ಕಿಂತ ಮೊದಲು 113 ಎಸೆತಗಳಲ್ಲಿ 117 ರನ್ ಬಾರಿಸಿದ್ದರು. 9 ಫೋರ್ ಹಾಗೂ 2 ಸಿಕ್ಸರ್ಗಳು ಅವರ ಇನಿಂಗ್ಸ್ನಲ್ಲಿ ಸೇರಿಕೊಂಡಿದ್ದವು.
ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ 49 ಶತಕದ ದಾಖಲೆಯನ್ನು ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಮುರಿದರು.
31ಓವರ್ಗೆ ಒಂದು ವಿಕೆಟ್ ಕಳೆದುಕೊಂಡು 221 ರನ್ ಬಾರಿಸಿದ ಭಾರತ. 70 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿರುವ ವಿರಾಟ್ ಕೊಹ್ಲಿ
ವಿಶ್ವಕಪ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿ
ರೋಹಿತ್ ಶರ್ಮ-50 ಸಿಕ್ಸರ್
ಕ್ರಿಸ್ ಗೇಲ್-49 ಸಿಕ್ಸರ್
ಗ್ಲೆನ್ ಮ್ಯಾಕ್ಸ್ವೆಲ್-43 ಸಿಕ್ಸರ್
ಎಬಿಡಿ ವಿಲಿಯರ್ಸ್-37 ಸಿಕ್ಸರ್
ಡೇವಿಡ್ ವಾರ್ನರ್-37 ಸಿಕ್ಸರ್