Site icon Vistara News

IND vs NZ Live: ಭಾರತ ತಂಡಕ್ಕೆ 70 ರನ್ ಗೆಲುವು

rohit sharma and kane williamson

ಮುಂಬಯಿ: 4 ವರ್ಷಗಳ ಬಳಿಕ ಮತ್ತೆ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು(IND vs NZ Live) ಏಕದಿನ ವಿಶ್ವಕಪ್​ನ​ ಸೆಮಿಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದ ರೋಹಿತ್​ ಶರ್ಮ ಅವರು ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

Abhilash B C

ನ್ಯೂಜಿಲ್ಯಾಂಡ್​ ವಿರುದ್ಧ ಟಾಸ್​ ಗೆದ್ದ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಅವರು ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ.

Abhilash B C

ಭದ್ರತಾ ಪ್ರೋಟೋಕಾಲ್‌ ಪಾಲಿಸಿ

ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾದರೂ ಭದ್ರತಾ ಪ್ರೋಟೋಕಾಲ್‌ಗಳ ಕಾರಣ ಅಭಿಮಾನಿಗಳು ಮುಂಚಿತವಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಬೇಕು. ಬ್ಯಾಗ್‌ಗಳು, ತಂಬಾಕು ಉತ್ಪನ್ನಗಳು, ನಾಣ್ಯಗಳು, ಕಾಗದ, ಪೆನ್ಸಿಲ್‌ಗಳು, ಪವರ್ ಬ್ಯಾಂಕ್‌ಗಳು, ನೀರಿನ ಬಾಟಲಿಗಳು ಮತ್ತು ಆಕ್ಷೇಪಾರ್ಹ ಬ್ಯಾನರ್‌ಗಳು ಕ್ರೀಡಾಂಗಣದ ಒಳಗೆ ನಿಷೇಧಿಸಲಾಗಿದೆ. ಮೊಬೈಲ್ ಫೋನ್, ಕೈಗಡಿಯಾರ ಮತ್ತು ವ್ಯಾಲೆಟ್‌ಗಳನ್ನು ಮಾತ್ರ ಕ್ರೀಡಾಂಗಣದೊಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ.

Abhilash B C

ಬೌಂಡರಿ ಕೌಂಟ್​ ಇಲ್ಲ

ಕಳೆದ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಸೂಪರ್​ ಓವರ್​ ಟೈಗೊಂಡಾಗ ಫಲಿತಾಂಶಕ್ಕೆ ಬೌಂಡರಿ ಲೆಕ್ಕಾಚಾರವನ್ನು ಮಾಡಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಈ ಬಾರಿ ಬೌಂಡರಿ ನಿಯಮವನ್ನು ತೆಗೆದು ಹಾಕಲಾಗಿದೆ. ಈ ಬಾರಿ ಸೆಮಿ ಆಗಲಿ ಫೈನಲ್​ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್​ ಓವರ್​ ಆಡಿಸಲಾಗುತ್ತದೆ

Abhilash B C

ಮಳೆ ಬಂದರೆ ಏನು ಗತಿ?

ವಿಶ್ವಕಪ್​ ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಲೀಗ್ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ್ದರೂ, ಯಾವುದೇ ಪಂದ್ಯ ಕೂಡ ರದ್ದುಗೊಂಡಿರಲಿಲ್ಲ. ಇದೀಗ ಸೆಮಿಫೈನಲ್​ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಏನು ಗತಿ, ಫಲಿತಾಂಶ ನಿರ್ಧಾರ ಹೇಗೆ ಹೀಗೆ ಹಲವು ಪಶ್ನೆಗಳು ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ಐಸಿಸಿ ಮಂಗಳವಾರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರುತ್ತದೆ ಎಂದಿದೆ.

Abhilash B C

ಮರುಕಳಿಸದಿರಲಿ 2019ರ ಸೋಲಿನ ನೋವು…

Exit mobile version