ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಶತಕದ ದಾಖಲೆ ಮಾಡುವ ಪ್ರಯತ್ನದಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಅವರು 95 ರನ್ ಬಾರಿಸಿ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದ್ದಾರೆ. ಭಾರತದ ಗೆಲುವಿಗೆ ಇನ್ನು 5 ರನ್ ಬೇಕಾಗಿದೆ.
45 ಓವರ್ಗಳ ಮುಕ್ತಾಯ ಭಾರತದ ಗೆಲುವಿಗೆ ಬೇಕು 26 ರನ್
ಭಾರತ ತಂಡದ ಗೆಲುವಿಗೆ ಇನ್ನು 48 ರನ್ಗಳು ಬೇಕಾಗಿವೆ. ಕೊಹ್ಲಿ ಹಾಗೂ ಜಡೇಜಾ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಭಾರತ ತಂಡ ಅನಗತ್ಯ ವಿಕೆಟ್ ಒಂದನ್ನು ಕಳೆದುಕೊಂಡಿದೆ. ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿಯ ನಡುವಿನ ಸಂವಹನದ ಕೊರತೆಯಿಂದಾಗಿ ವಿಕೆಟ್ ಒಂದು ಪತನಗೊಂಡಿದೆ. ಸೂರ್ಯಕುಮಾರ್ ಯಾದವ್ 4 ಎಸೆತಗಳಿಗೆ 2 ರನ್ ಬಾರಿಸಿ ಔಟಾಗಿದ್ದಾರೆ. ಬೌಲ್ಟ್ ಎಸೆತವನ್ನು ಸೂರ್ಯಕುಮಾರ್ ಯಾದವ್ ಕವರ್ ಕಡೆಗೆ ಕಳುಹಿಸಿದ್ದರು. ಮಿಚೆಲ್ ಸ್ಯಾಂಟ್ನರ್ ಅದ್ಭುತ ಫೀಲ್ಡಿಂಗ್ ಮಾಡಿ ಚೆಂಡನ್ನು ತಡೆದರು. ವಿರಾಟ್ ಕೊಹ್ಲಿ ಕ್ರೀಸ್ಗೆ ವಾಪಸ್ ಬಂದರು. ಸೂರ್ಯಕುಮಾರ್ ರನ್ಔಟ್
ವಿರಾಟ್ ಕೊಹ್ಲಿಗೆ ಉತ್ತಮವಾಗಿ ಸಾಥ್ ಕೊಡುತ್ತಿದ್ದ ಕೆ. ಎಲ್ ರಾಹುಲ್ ಔಟಾಗಿದ್ದಾರೆ. 35 ಎಸೆತಕ್ಕೆ 27 ರನ್ ಬಾರಿಸಿದ್ದ ಅವರು ಮಿಚೆಲ್ ಸ್ಯಾಂಟ್ನರ್ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಭಾರತ ತಂಡ 32.1 ಓವರ್ಗಳಲ್ಲಿ 182 ರನ್ ಬಾರಿಸಿದೆ. ಗೆಲುವಿಗೆ 92 ರನ್ ಬೇಕಾಗಿದೆ.