Site icon Vistara News

IND vs NZ Live: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗೆಲುವು

India vs New Zealand

ಧರ್ಮಶಾಲಾ: ಸೈಲೆಂಟ್​ ಕಿಲ್ಲರ್​​ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಶರ್ಮ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

Abhilash B C

ನಿರೀಕ್ಷೆಯಂತೆ ಭಾರತ ಈ ಪಂದ್ಯಕ್ಕೆ 2 ಬದಲಾವಣೆ ಮಾಡಿಕೊಂಡಿದೆ. ಹಾರ್ದಿಕ್​ ಬದಲು ಸೂರ್ಯಕುಮಾರ್​ ಸ್ಥಾನ ಪಡೆದರೆ, ಶಾರ್ದೂಲ್​ ಬದಲು ಮೊಹಮ್ಮದ್​ ಶಮಿ ಅವಕಾಶ ಪಡೆದರು.

Abhilash B C

ಸಂಭಾವ್ಯ ತಂಡ

ನ್ಯೂಜಿಲ್ಯಾಂಡ್​: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್​, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.

ಭಾರತ: ರೋಹಿತ್​ ಶರ್ಮ, ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್, ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ, ಕುಲ್​ದೀಪ್​ ಯಾದವ್​.

Abhilash B C

ಬಲಾಬಲ

ಇತ್ತಂಡಗಳು ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆದ್ದಿದ್ದು ಕೇವಲ ಮೂರು ಪಂದ್ಯಗಳು ಉಳಿದ 5 ಪಂದ್ಯಗಳಲ್ಲಿ ಕಿವೀಸ್​ ಗೆದ್ದು ಬೀಗಿದೆ. 2019 ವಿಶ್ವಕಪ್​ನಲ್ಲಿ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಆದರೆ​ ಸೆಮಿಫೈನಲ್​ನಲ್ಲಿ ಭಾರತ ಸೋಲು ಕಂಡಿತ್ತು. ಈ ಅಂಕಿ ಅಂಶಗಳ ಆಧಾರದಲ್ಲಿ ಕಿವೀಸ್​ ಗೆಲುವಿನ ನೆಚ್ಚಿನ ತಂಡವಾಗಿದೆ.

Abhilash B C

ಹವಾಮಾನ ಇಲಾಖೆಯ ವರದಿ ಪ್ರಕಾರ, ಧರ್ಮಶಾಲದಲ್ಲಿ ಭಾರಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿತ್ತು. ಆದರೆ ಸದ್ಯ ಮಳೆಯ ಯಾವುದೇ ತೊಂದರೆ ಕಾಣುತ್ತಿಲ್ಲ.

Abhilash B C

ಈ ಮೈದಾನದಲ್ಲಿ ದಾಖಲಾದ ಅತ್ಯಧಿಕ ಮೊತ್ತವೆಂದರೆ 9 ವಿಕೆಟ್​ಗೆ 364 ರನ್​. ಇದು ಈ ಬಾರಿ ವಿಶ್ವಕಪ್​ ಕಪ್​ ಟೂರ್ನಿಯಲ್ಲೇ ದಾಖಲಾಗಿದೆ. ಬಾಂಗ್ಲಾದೇಶ ವಿರುದ್ಧ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಈ ರನ್​ ಪೇರಿಸಿತ್ತು.

Exit mobile version