Site icon Vistara News

IND vs NZ Live: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗೆಲುವು

India vs New Zealand

ಧರ್ಮಶಾಲಾ: ಸೈಲೆಂಟ್​ ಕಿಲ್ಲರ್​​ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಶರ್ಮ ಅವರು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

Abhilash B C

ಈ ಸ್ಟೇಡಿಯಂನಲ್ಲಿ ಒಟ್ಟು 7 ಏಕದಿನ ಪಂದ್ಯಗಳು ಆಡಲಾಗಿದ್ದು 3 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದರೆ, 4 ಬಾರಿ ಚೇಸಿಂಗ್​ ನಡೆಸಿದ ತಂಡ ಗೆಲುವು ಸಾಧಿಸಿದೆ. 231 ಇಲ್ಲಿನ ಮೊದಲ ಇನಿಂಗ್ಸ್​ನ ಎವರೇಜ್​ ಮೊತ್ತವಾಗಿದೆ.

Abhilash B C

23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್‌ ಬೌಲಿಂಗ್‌ ಸ್ವರ್ಗವೆನಿಸಿದೆ.

Abhilash B C

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಜಿಲ್ಯಾಂಡ್​ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ.

Abhilash B C

2019 ವಿಶ್ವಕಪ್​ ಸೆಮಿಫೈನಲ್​ ವಿಡಿಯೊ ಹಂಚಿಕೊಂಡ ಐಸಿಸಿ

Abhilash B C

ಎಚ್‌ಪಿಸಿಎ ಸ್ಟೇಡಿಯಂನ ಅತ್ಯಂತ ರಮಣೀಯ ದೃಶ್ಯ

Exit mobile version