ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತದ ಇನಿಂಗ್ಸ್ನ 30ನೇ ಓವರ್ ಮುಕ್ತಾಯಗೊಂಡಿದೆ. ಇನ್ನು 120 ಎಸೆತಗಳ ಪಂದ್ಯ ಬಾಕಿ ಇದೆ. ಭಾರತಕ್ಕಿನ್ನೂ 106 ರನ್ಗಳು ಗೆಲುವಿಗೆ ಬೇಕಾಗಿದೆ. ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಭಾರತ ತಂಡ 28 ಓವರ್ಗಳ ಮುಕ್ತಾಯದ ವೇಳೆಗೆ 151 ರನ್ ಬಾರಿಸಿದೆ. ಗೆಲುವಿಗೆ ಇನ್ನೂ 123 ರನ್ಗಳು ಬೇಕಾಗಿವೆ. ವಿರಾಟ್ 28 ರನ್ ಹಾಗೂ ರಾಹುಲ್ 16 ರನ್ ಬಾರಿಸಿ ಆಡುತ್ತಿದ್ದಾರೆ.
ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಔಟಾಗಿದ್ದಾರೆ. 29 ಎಸೆತಗಳಿಗೆ 33 ರನ್ ಗಳಿಸಿದ್ದ ಅವರು ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕಾನ್ವೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಶಾರ್ಟ್ ಪಿಚ್ ಎಸೆತ ತಮ್ಮ ದೌರ್ಬಲ್ಯ ಎಂಬುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು. ಶ್ರೇಯಸ್ ಬ್ಯಾಟ್ನ ಮೇಲ್ಭಾಗಕ್ಕೆ ತಗುಲಿದ ಚೆಂಡು ಡೀಪ್ ಮಿಡ್ ವಿಕೆಟ್ ಕಡೆಗೆ ಹೋಗಿ ಫೀಲ್ಡರ್ ಕಾನ್ವೆ ಕೈ ಸೇರಿತು.
ಭಾರತದ ಇನಿಂಗ್ಸ್ನ 20 ಓವರ್ಗಳು ಮುಕ್ತಾಯಗೊಂಡಿದ್ದು ಭಾರತ 2 ವಿಕೆಟ್ ನಷ್ಟಕ್ಕೆ 121 ರನ್ ಬಾರಿಸಿದೆ. ವಿರಾಟ್ ಕೊಹ್ಲಿ 20 ರನ್ ಹಾಗೂ ಶ್ರೇಯಸ್ ಅಯ್ಯರ್ 28 ರನ್ ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಭಾರತದ ಗೆಲುವಿಗೆ ಇನ್ನೂ 153ರನ್ ಬೇಕಾಗಿವೆ.
ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ವಾತಾವರಣದಲ್ಲಿ ಇಬ್ಬನಿ ಪ್ರಮಾಣ ಹೆಚ್ಚಾಗಿದೆ. ಫ್ಲಡ್ ಲೈಟ್ಗಳಿಗಿಂತ ಕೆಳಗೆ ಮೋಡ ಬರುತ್ತಿದೆ. ಹೀಗಾಗಿ ಆಟಕ್ಕೆ ಅಡಚಣೆ ಉಂಟಾಗಿದೆ. ಅಂಪೈರ್ಗಳು ಮಾತುಕತೆ ನಡಸಿದ ಬಳಿಕ ಪಂದ್ಯವನ್ನು ಮೊಟಕುಗೊಳಿಸಲಾಗಿದೆ.