ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
15.4 ಓವರ್ಗಳಲ್ಲಿ 100 ರನ್ ಬಾರಿಸಿದ ಭಾರತ
15 ಓವರ್ಗಳ ಮುಕ್ತಾಯ. 91 ರನ್ ಬಾರಿಸಿದ ಭಾರತ ತಂಡ. ಎರಡು ವಿಕೆಟ್ಕಳೆದುಕೊಂಡ ಕಾರಣ ಸ್ವಲ್ಪ ಹಿನ್ನಡೆಗೆ ಒಳಗಾಗಿದೆ.
ಭಾರತ ತಂಡ ವಿಕೆಟ್ ನಷ್ಟ ಮಾಡಿಕೊಂಡಿದೆ. 31 ಎಸೆತಕ್ಕೆ 26 ರನ್ ಗಳಿಸಿದ್ದ ಶುಭ್ಮನ್ ಗಿಲ್ ಔಟಾಗಿದ್ದಾರೆ. ವೇಗದ ಬೌಲರ್ ಲೂಕಿ ಫರ್ಗ್ಯೂಸನ್ ಎಸೆತ ಸ್ಲಫ ಬೌನ್ಸರ್ಗೆ ಸಿಕ್ಸರ್ ಬಾರಿಸಲ ಮುಂದಾದ ಗಿಲ್ ಡ್ಯಾರಿಲ್ ಮಿಚೆಲ್ಗೆ ಕ್ಯಾಚ್ ನೀಡಿದ್ದಾರೆ. ಅವರ ಇನಿಂಗ್ಸ್ನಲ್ಲಿ 5 ಫೋರ್ಗಳಿದ್ದವು. ಈ ವೇಳೆ ಭಾರತ ತಂಡ 74 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.
ಅತ್ಯುತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ರೋಹಿತ್ ಶರ್ಮಾ ಔಟ್ ಆಗಿದ್ದಾರೆ. ಲೂಕಿ ಫರ್ಗ್ಯೂಸನ್ ಎಸೆತಕ್ಕೆ ಇನ್ಸೈಡ್ ಎಜ್ ಆಗಿ ಅವರು ಬೌಲ್ಡ್ ಅದರು. ಅವರು 40 ಎಸೆತಗಳಲ್ಲಿ 46 ರನ್ ಬಾರಿಸಿದ್ದಾರೆ. ತಂಡದ ಮೊತ್ತ 11.1 ಓವರ್ಗಳಲ್ಲಿ 1 ವಿಕೆಟ್ಗೆ 71 ರನ್
10 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 63 ರನ್ ಬಾರಿಸಿದ ಭಾರತ. ರೋಹಿತ್ ಶರ್ಮಾ 39 ಹಾಗೂ ಶುಭ್ಮನ್ ಗಿಲ್ 24 ಆಟ ಮುಂದುವರಿಸಿದ್ದಾರೆ.