ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೊಹಮ್ಮದ್ ಶಮಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಉರುಳಿಸಿದ್ದಾರೆ. ಅವರು ಎಂಟನೆಯವರಾಗಿ ಆಡಲು ಬಂದ ಮ್ಯಾಟ್ ಹೆನ್ರಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಅವರು ಖಾತೆ ತೆರೆಯದೇ ಪೆವಿಲಿಯನ್ಗೆ ಮರಳಿದರು. ಶಮಿಯ ಒಟ್ಟು ವಿಕೆಟ್ 4
ನ್ಯೂಜಿಲ್ಯಾಂಡ್ ತಂಡದ ಏಳನೇ ವಿಕೆಟ್ ಉರುಳಿದೆ. ಶಮಿ ಬೌಲಿಂಗ್ಗೆ ಎಡಗೈ ಬ್ಯಾಟರ್ ಮಿಚೆಲ್ ಸ್ಯಾಂಟ್ನರ್ ಔಟಾಗಿದ್ದಾರೆ. ಅವರು ಕೇವಲ 1 ರನ್ ಬಾರಿಸಿದ್ದರು. ವಿಶ್ವ ಕಪ್ನಲ್ಲಿ ಮೊದಲ ಅವಕಾಶ ಪಡೆದ ಶಮಿ ಮೂರು ವಿಕೆಟ್ ಉರುಳಿಸಿದಂತಾಯಿತು. ನ್ಯೂಜಿಲ್ಯಾಂಡ್ ತಂಡದ ಮೊತ್ತ 7 ವಿಕೆಟ್ಗೆ 270
ನ್ಯೂಜಿಲ್ಯಾಂಡ್ ತಂಡ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ಎಡಗೈ ಬ್ಯಾಟರ್ ಮಾರ್ಕ್ ಚಾಪ್ಮನ್ 6 ರನ್ ಬಾರಿಸಿ ಔಟಾಗಿದ್ದಾರೆ. ಬುಮ್ರಾ ಎಸೆತಕ್ಕೆ ಬೌಂಡರಿ ಲೈನ್ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾಗಿದ್ದಾರೆ. ಸ್ಲಾಗ್ ಓವರ್ಗಳಲ್ಲಿ ರನ್ ಬಾರಿಸುವ ಅವರ ಕನಸು ನನಸಾಗಲಿಲ್ಲ. ಭಾತಕ್ಕೆ ಕೊನೇ ಹಂತದಲ್ಲಿ ಮತ್ತೊಂದು ವಿಕೆಟ್ ಲಭಿಸಿತು.
ನ್ಯೂಜಿಲ್ಯಾಂಡ್ ತಂಡಕ್ಕೆ 46 ಓವರ್ಗಳಿಗೆ 5 ವಿಕೆಟ್ಗೆ 249 ರನ್
ನ್ಯೂಜಿಲ್ಯಾಂಡ್ ತಂಡದ ಬಲಗೈ ಬ್ಯಾಟರ್ 26 ಎಸೆತಗಳಿಗೆ 23 ರನ್ ಬಾರಿಸಿ ಔಟಾಗಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಮೊತ್ತ 44,2 ಓವರ್ಗಳಲ್ಲಿ 5 ವಿಕೆಟ್ಗೆ 243