ಧರ್ಮಶಾಲಾ: ಸೈಲೆಂಟ್ ಕಿಲ್ಲರ್ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
🚨 Toss and Team Update 🚨
— BCCI (@BCCI) October 22, 2023
Rohit Sharma wins the toss and #teamindia have elected to bowl first in Dharamsala!
Two changes in the side as Suryakumar Yadav & Mohd. Shami are named in the eleven 👌
Follow the match ▶️ https://t.co/Ua4oDBM9rn#cwc23 | #meninblue | #indvnz pic.twitter.com/6dy150WC1S
ಸದ್ಯ ಮಳೆಯ ಭೀತಿ ಇರದ ಕಾರಣ ಪಂದ್ಯ ಸಂಪೂರ್ಣವಾಗಿ ನಡೆಯುವ ನಿರೀಕ್ಷೆ ಇದೆ. ಆದರೆ ಸ್ಟೇಡಿಯಂ ಮಾತ್ರ ಖಾಲಿ ಖಾಲಿ ಇದೆ. ನವರಾತ್ರಿಯ ಹಿನ್ನೆಲೆ ಜನರೆಲ್ಲರೂ ಹಬ್ಬದ ಸಂಭ್ರದಲ್ಲಿರುವಂತೆ ಕಾಣುತ್ತಿದೆ.
ನ್ಯೂಜಿಲ್ಯಾಂಡ್ ಆಡುವ ಬಳಗ
ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.
ನ್ಯೂಜಿಲ್ಯಾಂಡ್ ತಂಡ ಈ ಪಂದ್ಯಕ್ಕೆ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಆಡಲಿಳಿಸಿತು.
ಭಾರತ ತಂಡ
ರೋಹಿತ್ ಶರ್ಮ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್.