ಕೋಲ್ಕೊತಾ: ಈಗಾಗಲೇ ಸೆಮಿಫೈನಲ್ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್ ಹಾಕಿತೇ ಎನ್ನುವುದು ಪಂದ್ಯದ ಕೌತುಕ.
ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಹರಿಣಗಳ ಪಡೆ 27.1 ಓವರ್ಗಳಲ್ಲಿ 83 ರನ್ ಬಾರಿಸಿ ಸರ್ವಪತನ ಕಂಡಿತು. ಜಡೇಜಾ ಮಾತ್ರವಲ್ಲದೆ, ಮೊಹಮ್ಮದ್ ಸಿರಾಜ್ (18 ರನ್ಗೆ 2 ವಿಕೆಟ್), ಕುಲ್ದೀಪ್ ಯಾದವ್ (7 ರನ್ಗೆ 2 ವಿಕೆಟ್) ಪಡೆದು ಭಾರತಕ್ಕೆ ದೊಡ್ಡ ಅಂತರದ ಗೆಲುವು ತಂದುಕೊಟ್ಟರು.
ಹಾಲಿ ವಿಶ್ವ ಕಪ್ನಲ್ಲಿ ಭಾರತ ತಂಡದ ಪಾರಮ್ಯ ಮುಂದವರಿದಿದೆ. ಐತಿಹಾಸಿಕ ಈಡನ್ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭರ್ಜರಿ 243 ರನ್ಗಳ ಗೆಲುವು ದಾಖಲಿಸಿದೆ. ಇದು ವಿಶ್ವ ಕಪ್ ಟೂರ್ನಿಯಲ್ಲಿ ಸತತ ಎಂಟನೇ ಗೆಲುವಾಗಿದ್ದು, ಒಟ್ಟು 16 ಅಂಕಗಳನ್ನು ಗಳಿಸುವ ಮೂಳಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ನಲ್ಲಿ ತನ್ನ ಅಮೋಘ ಪ್ರದರ್ಶನ ಮುಂದುವರಿಸಿದರೆ, ಬೌಲಿಂಗ್ನಲ್ಲಿ ಉರಿ ಚೆಂಡಿನ ದಾಳಿಯನ್ನು ಮತ್ತೊಮ್ಮೆ ಸಂಘಟಿಸಿದೆ. ಅಜೇಯ ಶತಕ ಬಾರಿಸಿದ ವಿರಾಟ್ ಕೊಹ್ಲಿ (101 ರನ್), ಅರ್ಧ ಶತಕ ಬಾರಿಸಿದ ಶ್ರೇಯಸ್ ಅಯ್ಯರ್ (77 ರನ್) ಹಾಗೂ ಬೌಲಿಂಗ್ನಲ್ಲಿ ಮಿಂಚಿದ ರವೀಂದ್ರ ಜಡೇಜಾ (33 ರನ್ಗಳಿಗೆ 5 ವಿಕೆಟ್) ಭಾರತ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು.
ದಕ್ಷಿಣ ಆಫ್ರಿಕಾ 79 ರನ್ಗೆ 9 ವಿಕೆಟ್ ಕಳೆದುಕೊಂಡಿದೆ. ಜಡೇಜಾ ರಿಟರ್ನ್ ಕ್ಯಾಚ್ ಪಡೆಯುವ ಮೂಲಕ ತಮ್ಮ ಐದನೇ ವಿಕೆಟ್ ಸಾಧನೆಯನ್ನು ಮಾಡಿದರು. ಕಗಿಸೊ ರಬಾಡ 26 ಎಸೆತ ಎದುರಿಸಿ 6 ರನ್ ಮಾಡಿ ಔಟಾದರು.
ಕ್ರೀಸ್ನಲ್ಲಿ ತಳವೂರುವ ಮೂಲಕ ಭಾರತ ತಂಡದ ಬೌಲರ್ಗಳನ್ನು ಅನವಶ್ಯಕವಾಗಿ ಸತಾಯಿಸಲು ಆರಂಭಿಸಿದ್ದ ಆಲ್ರೌಂಡರ್ ಮಾರ್ಕೊ ಜೆನ್ಸನ್ ಔಟಾಗಿದ್ದಾರೆ. ಅವರು 30 ಎಸೆತಗಳಲ್ಲಿ 14 ರನ್ ಬಾರಿಸಿದ್ದರು. ಕುಲ್ದೀಪ್ ಯಾದವ್ಗೆ ಇದು ಈ ಪಂದ್ಯದಲ್ಲಿ ಮೊದಲ ವಿಕೆಟ್. ಜಡೇಜಾ ಸುಲಭ ಕ್ಯಾಚ್ ಪಡೆದು ಜೆನ್ಸನ್ಗೆ ಪೆವಿಲಿಯನ್ ಹಾದಿ ತೋರಿದರು.
ದಕ್ಷಿಣ ಆಫ್ರಿಕಾ ತಂಡ ಬ್ಯಾಟರ್ ಕೇಶವ್ ಮಹಾರಾಜ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ರವೀಂದ್ರ ಜಡೇಜಾಗೆ ಮತ್ತೊಂದು ಯಶಸ್ಸು. ಈ ಪಂದ್ಯದಲ್ಲಿ ಅವರಿಗೆ ನಾಲ್ಕನೇ ವಿಕೆಟ್. ಮಹಾರಾಜ್ 7 ರನ್ ಬಾರಿಸಿ ನಿರ್ಗಮಿಸಿದ್ದಾರೆ.