Site icon Vistara News

IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್​ ಭರ್ಜರಿ ವಿಜಯ

India vs South Africa, 37th Match

ಕೋಲ್ಕೊತಾ: ಈಗಾಗಲೇ ಸೆಮಿಫೈನಲ್​ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್​ ಹಾಕಿತೇ ಎನ್ನುವುದು ಪಂದ್ಯದ ಕೌತುಕ.

Sukhesha Padibagilu

ಟಾಸ್​ ಗೆದ್ದ ಭಾರತ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಹರಿಣಗಳ ಪಡೆ 27.1 ಓವರ್​ಗಳಲ್ಲಿ 83 ರನ್​ ಬಾರಿಸಿ ಸರ್ವಪತನ ಕಂಡಿತು. ಜಡೇಜಾ ಮಾತ್ರವಲ್ಲದೆ, ಮೊಹಮ್ಮದ್ ಸಿರಾಜ್​ (18 ರನ್​ಗೆ 2 ವಿಕೆಟ್​), ಕುಲ್ದೀಪ್ ಯಾದವ್ (7 ರನ್​ಗೆ 2 ವಿಕೆಟ್​​) ಪಡೆದು ಭಾರತಕ್ಕೆ ದೊಡ್ಡ ಅಂತರದ ಗೆಲುವು ತಂದುಕೊಟ್ಟರು.

Sukhesha Padibagilu

ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡದ ಪಾರಮ್ಯ ಮುಂದವರಿದಿದೆ. ಐತಿಹಾಸಿಕ ಈಡನ್​ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭರ್ಜರಿ 243 ರನ್​ಗಳ ಗೆಲುವು ದಾಖಲಿಸಿದೆ. ಇದು ವಿಶ್ವ ಕಪ್​ ಟೂರ್ನಿಯಲ್ಲಿ ಸತತ ಎಂಟನೇ ಗೆಲುವಾಗಿದ್ದು, ಒಟ್ಟು 16 ಅಂಕಗಳನ್ನು ಗಳಿಸುವ ಮೂಳಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಮುಂದುವರಿಸಿದೆ. ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್​ನಲ್ಲಿ ತನ್ನ ಅಮೋಘ ಪ್ರದರ್ಶನ ಮುಂದುವರಿಸಿದರೆ, ಬೌಲಿಂಗ್​ನಲ್ಲಿ ಉರಿ ಚೆಂಡಿನ ದಾಳಿಯನ್ನು ಮತ್ತೊಮ್ಮೆ ಸಂಘಟಿಸಿದೆ. ಅಜೇಯ ಶತಕ ಬಾರಿಸಿದ ವಿರಾಟ್ ಕೊಹ್ಲಿ (101 ರನ್​), ಅರ್ಧ ಶತಕ ಬಾರಿಸಿದ ಶ್ರೇಯಸ್ ಅಯ್ಯರ್​ (77 ರನ್​) ಹಾಗೂ ಬೌಲಿಂಗ್​ನಲ್ಲಿ ಮಿಂಚಿದ ರವೀಂದ್ರ ಜಡೇಜಾ (33 ರನ್​ಗಳಿಗೆ 5 ವಿಕೆಟ್​​) ಭಾರತ ತಂಡದ ಗೆಲುವಿನ ರೂವಾರಿಗಳೆನಿಸಿಕೊಂಡರು.

Sukhesha Padibagilu

ದಕ್ಷಿಣ ಆಫ್ರಿಕಾ 79 ರನ್​ಗೆ 9 ವಿಕೆಟ್​ ಕಳೆದುಕೊಂಡಿದೆ. ಜಡೇಜಾ ರಿಟರ್ನ್​ ಕ್ಯಾಚ್ ಪಡೆಯುವ ಮೂಲಕ ತಮ್ಮ ಐದನೇ ವಿಕೆಟ್​ ಸಾಧನೆಯನ್ನು ಮಾಡಿದರು. ಕಗಿಸೊ ರಬಾಡ 26 ಎಸೆತ ಎದುರಿಸಿ 6 ರನ್ ಮಾಡಿ ಔಟಾದರು.

Sukhesha Padibagilu

ಕ್ರೀಸ್​ನಲ್ಲಿ ತಳವೂರುವ ಮೂಲಕ ಭಾರತ ತಂಡದ ಬೌಲರ್​ಗಳನ್ನು ಅನವಶ್ಯಕವಾಗಿ ಸತಾಯಿಸಲು ಆರಂಭಿಸಿದ್ದ ಆಲ್​ರೌಂಡರ್​ ಮಾರ್ಕೊ ಜೆನ್ಸನ್​ ಔಟಾಗಿದ್ದಾರೆ. ಅವರು 30 ಎಸೆತಗಳಲ್ಲಿ 14 ರನ್ ಬಾರಿಸಿದ್ದರು. ಕುಲ್ದೀಪ್ ಯಾದವ್​ಗೆ ಇದು ಈ ಪಂದ್ಯದಲ್ಲಿ ಮೊದಲ ವಿಕೆಟ್​. ಜಡೇಜಾ ಸುಲಭ ಕ್ಯಾಚ್ ಪಡೆದು ಜೆನ್ಸನ್​ಗೆ ಪೆವಿಲಿಯನ್ ಹಾದಿ ತೋರಿದರು.

Sukhesha Padibagilu

ದಕ್ಷಿಣ ಆಫ್ರಿಕಾ ತಂಡ ಬ್ಯಾಟರ್​ ಕೇಶವ್​ ಮಹಾರಾಜ್​ ಕ್ಲೀನ್ ಬೌಲ್ಡ್​ ಆಗಿದ್ದಾರೆ. ರವೀಂದ್ರ ಜಡೇಜಾಗೆ ಮತ್ತೊಂದು ಯಶಸ್ಸು. ಈ ಪಂದ್ಯದಲ್ಲಿ ಅವರಿಗೆ ನಾಲ್ಕನೇ ವಿಕೆಟ್​. ಮಹಾರಾಜ್​ 7 ರನ್ ಬಾರಿಸಿ ನಿರ್ಗಮಿಸಿದ್ದಾರೆ.

Exit mobile version