Site icon Vistara News

India vs Sri Lanka Final : ಲಂಕಾ ವಿರುದ್ಧ ಫೈನಲ್​ನಲ್ಲಿ ನಿರಾಯಸ ಗೆಲುವು, ಭಾರತ ತಂಡ ಏಷ್ಯಾ ಕಪ್​ ಚಾಂಪಿಯನ್​

India vs Sri Lanka, Final - Live Cricket Score, Commentary

ಕೊಲೊಂಬೊ: ಕಳೆದ ಆವೃತ್ತಿಯ ಏಷ್ಯಾ ಕಪ್​ ಚಾಂಪಿಯನ್ ಶ್ರೀಲಂಕಾ (Asia Cup 2023) ತಂಡದ ವಿರುದ್ಧದ ನಿರಾಯಸ ಗೆಲುವು ಸಾಧಿಸಿದ ಭಾರತ ತಂಡದ ಟ್ರೋಫಿ ಎತ್ತಿ ಹಿಡಿದಿದೆ. ಇದು ಭಾರತ ತಂಡದ ಪಾಲಿಗೆ ಎಂಟನೇ ಚಾಂಪಿಯನ್​ಷಿಪ್ ಆಗಿದ್ದು, ಏಷ್ಯಾ ಕಪ್​ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಫೈನಲ್​ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಬೌಲರ್​ ಮೊಹಮ್ಮದ್​ ಸಿರಾಜ್​ ಪ್ರಮುಖ ಪಾತ್ರ ವಹಿಸಿದರು. ಅವರು ಲಂಕಾ ತಂಡದ ಪ್ರಮುಖ ಆರು ವಿಕೆಟ್​ಗಳನ್ನು ಉರುಳಿಸಿ ಮಿಂಚಿದರು.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್​ ಮಾಡಿತು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್​ಗಳಲ್ಲಿ 50 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಭಾರತ ತಂಡ 6.1 ಓವರ್​ಗಳಲ್ಲಿ 51 ರನ್​ ಮಾಡಿ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.

ಏಷ್ಯಾ ಕಪ್​ ಫೈನಲ್​ನಲ್ಲಿ ಭಾರತ ತಂಡದ ಬೌಲರ್​ಗಳು ಅಬ್ಬರಿಸಿದ್ದಾರೆ. ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆತಿಥೇಯ ಶ್ರೀಲಂಕಾ ತಂಡವನ್ನು ಕೇವಲ 50 ರನ್​ಗಳಿಗೆ ಆಲ್​ಔಟ್​ ಮಾಡಿದೆ. ಇದು ಏಕದಿನ ಮಾದರಿಯಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ.

ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್​ ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಬ್ಯಾಟರ್​ಗಳೆಲ್ಲರೂ ಪತರಗುಟ್ಟುವಂತೆ ಮಾಡಿದ ಅವರು ತಮ್ಮ 7 ಓವರ್​ಗಳ ಸ್ಪೆಲ್​ನಲ್ಲಿ 21 ರನ್​ ನೀಡಿ 6 ವಿಕೆಟ್​ ಕಬಳಿಸಿದ್ದಾರೆ. ತಮ್ಮ ಬೆಂಕಿಯುಂಡೆಯಂಥ ಚೆಂಡುಗಳ ಮೂಲಕ ಲಂಕಾದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್​ ಮಾಡಿದ್ದಾರೆ.

ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಮ್ಮ 2.2 ಓವರ್​ಗಳ 3 ರನ್​ ಬಾರಿಸಿ 3 ವಿಕೆಟ್ ಪಡೆದರು.

Abhilash B C

ಹ್ಯಾಟ್ರಿಕ್​ ವಿಕೆಟ್​ ಅವಕಾಶ ಕಳೆದುಕೊಂಡ ಸಿರಾಜ್​

Abhilash B C

8 ರನ್​ಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಲಂಕಾ

Abhilash B C

ಲಂಕಾಗೆ ಅವಳಿ ಆಘಾತವಿಕ್ಕಿದ ಮೊಹಮ್ಮದ್​ ಸಿರಾಜ್​

Abhilash B C

ಲಂಕಾದ ಮತ್ತೊಂದು ವಿಕೆಟ್​ ಪತನ. 8 ರನ್​ಗೆ 2 ವಿಕೆಟ್​ ಪತನ

Abhilash B C

ಚಿರತೆ ವೇಗದಲ್ಲಿ ಜಿಗಿದು ಕ್ಯಾಚ್​ ಪಡೆದ ರವೀಂದ್ರ ಜಡೇಜಾ

Exit mobile version