ಕೊಲೊಂಬೊ: ಕಳೆದ ಆವೃತ್ತಿಯ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ (Asia Cup 2023) ತಂಡದ ವಿರುದ್ಧದ ನಿರಾಯಸ ಗೆಲುವು ಸಾಧಿಸಿದ ಭಾರತ ತಂಡದ ಟ್ರೋಫಿ ಎತ್ತಿ ಹಿಡಿದಿದೆ. ಇದು ಭಾರತ ತಂಡದ ಪಾಲಿಗೆ ಎಂಟನೇ ಚಾಂಪಿಯನ್ಷಿಪ್ ಆಗಿದ್ದು, ಏಷ್ಯಾ ಕಪ್ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಫೈನಲ್ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದರು. ಅವರು ಲಂಕಾ ತಂಡದ ಪ್ರಮುಖ ಆರು ವಿಕೆಟ್ಗಳನ್ನು ಉರುಳಿಸಿ ಮಿಂಚಿದರು.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿತು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್ಗಳಲ್ಲಿ 50 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 6.1 ಓವರ್ಗಳಲ್ಲಿ 51 ರನ್ ಮಾಡಿ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.
ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ತಂಡದ ಬೌಲರ್ಗಳು ಅಬ್ಬರಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲ್ಔಟ್ ಮಾಡಿದೆ. ಇದು ಏಕದಿನ ಮಾದರಿಯಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್ ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಬ್ಯಾಟರ್ಗಳೆಲ್ಲರೂ ಪತರಗುಟ್ಟುವಂತೆ ಮಾಡಿದ ಅವರು ತಮ್ಮ 7 ಓವರ್ಗಳ ಸ್ಪೆಲ್ನಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ತಮ್ಮ ಬೆಂಕಿಯುಂಡೆಯಂಥ ಚೆಂಡುಗಳ ಮೂಲಕ ಲಂಕಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ಮಾಡಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ 2.2 ಓವರ್ಗಳ 3 ರನ್ ಬಾರಿಸಿ 3 ವಿಕೆಟ್ ಪಡೆದರು.
ಸದ್ಯಕ್ಕೆ ಮಳೆ ಭೀತಿ ಇಲ್ಲ. ಹೀಗಾಗಿ ಕೆಲವೇ ನಿಮಿಷದಲ್ಲಿ ಟಾಸ್ ಆಗಲಿದೆ.
ಏಷ್ಯಾಕಪ್ ಮುಖಾಮುಖಿ
ಭಾರತ ಮತ್ತು ಶ್ರೀಲಂಕಾ ಇದುವರೆಗೆ ಏಷ್ಯಾಕಪ್ನಲ್ಲಿ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಉಭಯ ತಂಡಗಳು ತಲಾ 11 ಪಂದ್ಯಗಳಲ್ಲಿ ಗೆದ್ದು ಸಮಾನವಾದ ದಾಖಲೆ ಹೊಂದಿದೆ. ಒಂದು ಸೋಲು ಈ ಬಾರಿಯ ಸೂಪರ್ ಫೋರ್ ಪಂದ್ಯದಲ್ಲಿ ದಾಖಲಾಗಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಎರಡು ತಂಡಗಳು ಬಲಿಷ್ಠವಾಗಿದೆ. ಹೀಗಾಗಿ ಫೈನಲ್ ಪಂದ್ಯವನ್ನು ಹೈವೋಲ್ಟೇಜ್ ಎಂದು ನಿರೀಕ್ಷೆ ಮಾಡಬಹುದು.
The Asia Cup 2023 Finals are here!
— Sri Lanka Cricket 🇱🇰 (@OfficialSLC) September 17, 2023
Get ready for a historic clash as Sri Lanka and India face off in a battle for glory! 🔥
Who's in your playing XI for both teams? Share your predictions! 🏆⚔️ #asiacup2023 #slvind #lankanlions pic.twitter.com/acvnu5BkRj
ಭಾರತ ಚೊಚ್ಚಲ ಏಷ್ಯಾಕಪ್ ಗೆದ್ದಿದ್ದು ಕೂಡ ಲಂಕಾ ವಿರುದ್ಧವೇ. ಯುಎಇಯಲ್ಲಿ ನಡೆದ 1984ರ ಈ ಫೈನಲ್ನಲ್ಲಿ ಭಾರತ ಸುನೀಲ್ ಗಾವಸ್ಕರ್ ನಾಯಕತ್ವದಲ್ಲಿ ಕಪ್ ಗೆದ್ದಿತ್ತು.
8ನೇ ಫೈನಲ್ ಮುಖಾಮುಖಿ
ಉಭಯ ತಂಡಗಳು ಏಷ್ಯಾಕಪ್ ಇತಿಹಾಸದಲ್ಲಿ ಒಟ್ಟು 7 ಬಾರಿ ಫೈನಲ್ ಮುಖಾಮುಖಿಯಾಗಿವೆ. ಭಾರತ 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ. ಶ್ರೀಲಂಕಾ 3 ಬಾರಿ ಗೆದ್ದು ಬೀಗಿದೆ.
ಶೇ.90 ರಷ್ಟು ಮಳೆ
ಕೊಲಂಬೊದಲ್ಲಿ ಫೈನಲ್ ಪಂದ್ಯ ನಡೆಯುವ ಭಾನುವಾರ ಶೇ.90 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ. ಈಗಾಗಲೇ ಮೀಸಲು ದಿನವನ್ನು ನಿಗದಿ ಮಾಡಲಾಗಿದೆ. ಅದರಂತೆ ಸೋಮವಾರ ಪಂದ್ಯ ನಡೆಯಲಿದೆ.