ಕೊಲೊಂಬೊ: ಕಳೆದ ಆವೃತ್ತಿಯ ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ (Asia Cup 2023) ತಂಡದ ವಿರುದ್ಧದ ನಿರಾಯಸ ಗೆಲುವು ಸಾಧಿಸಿದ ಭಾರತ ತಂಡದ ಟ್ರೋಫಿ ಎತ್ತಿ ಹಿಡಿದಿದೆ. ಇದು ಭಾರತ ತಂಡದ ಪಾಲಿಗೆ ಎಂಟನೇ ಚಾಂಪಿಯನ್ಷಿಪ್ ಆಗಿದ್ದು, ಏಷ್ಯಾ ಕಪ್‌ನಲ್ಲಿ ತನ್ನ ಪಾರಮ್ಯ ಮುಂದುವರಿಸಿದೆ. ಫೈನಲ್ ಪಂದ್ಯದ ಗೆಲುವಿನಲ್ಲಿ ಭಾರತ ತಂಡದ ಬೌಲರ್ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದರು. ಅವರು ಲಂಕಾ ತಂಡದ ಪ್ರಮುಖ ಆರು ವಿಕೆಟ್ಗಳನ್ನು ಉರುಳಿಸಿ ಮಿಂಚಿದರು.
ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿತು. ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 15.2 ಓವರ್ಗಳಲ್ಲಿ 50 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ 6.1 ಓವರ್ಗಳಲ್ಲಿ 51 ರನ್ ಮಾಡಿ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.
ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ತಂಡದ ಬೌಲರ್ಗಳು ಅಬ್ಬರಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಶ್ರೀಲಂಕಾ ತಂಡವನ್ನು ಕೇವಲ 50 ರನ್ಗಳಿಗೆ ಆಲ್ಔಟ್ ಮಾಡಿದೆ. ಇದು ಏಕದಿನ ಮಾದರಿಯಲ್ಲಿ ಭಾರತ ವಿರುದ್ಧ ಶ್ರೀಲಂಕಾ ತಂಡ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಭಾರತ ತಂಡದ ಪರವಾಗಿ ಮೊಹಮ್ಮದ್ ಸಿರಾಜ್ ಜೀವನ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಶ್ರೀಲಂಕಾದ ಬ್ಯಾಟರ್ಗಳೆಲ್ಲರೂ ಪತರಗುಟ್ಟುವಂತೆ ಮಾಡಿದ ಅವರು ತಮ್ಮ 7 ಓವರ್ಗಳ ಸ್ಪೆಲ್ನಲ್ಲಿ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದಾರೆ. ತಮ್ಮ ಬೆಂಕಿಯುಂಡೆಯಂಥ ಚೆಂಡುಗಳ ಮೂಲಕ ಲಂಕಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ಮಾಡಿದ್ದಾರೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ 2.2 ಓವರ್ಗಳ 3 ರನ್ ಬಾರಿಸಿ 3 ವಿಕೆಟ್ ಪಡೆದರು.
ಲಂಕಾ ವಿರುದ್ದೇ ಹ್ಯಾಟ್ರಿಕ್
ಭಾರತ ಏಷ್ಯಾ ಕಪ್‌ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ತಂಡ. 1988, 1990-91 ಮತ್ತು 1995ರಲ್ಲಿ ಸತತ 3 ವರ್ಷ ಭಾರತ ಪ್ರಶಸ್ತಿಯನ್ನೆತ್ತಿತ್ತು. ಮೂರೂ ಫೈನಲ್‌ಗಳಲ್ಲಿ ಶ್ರೀಲಂಕಾವನ್ನೇ ಮಣಿಸಿದ್ದು ವಿಶೇಷ.
ಏಷ್ಯಾ ಕಪ್ ಇತಿಹಾಸದ ಮತ್ತೊಂದು ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅದು ಅತ್ಯಧಿಕ 12 ಸಲ ಫೈನಲ್‌ಗೆ ಲಗ್ಗೆ ಇರಿಸಿ 6 ಸಲ ಪ್ರಶಸ್ತಿ ಎತ್ತಿದೆ. ಕಳೆದ ವರ್ಷ ಪಾಕಿಸ್ತಾನ ತಂಡವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಈ ಬಾರಿಯೂ ಕಪ್ ಗೆಲ್ಲಲಿದೆಯಾ ಎನ್ನುವುದು ಪಂದ್ಯದ ಕೌತುಕ.
ಭಾರತ ಇದುವರೆಗೆ 10 ಸಲ ಫೈನಲ್‌ಗೆ ಲಗ್ಗೆಯಿಟ್ಟು ಅತ್ಯಧಿಕ 7 ಸಲ ಪ್ರಶಸ್ತಿಯನ್ನೆತ್ತಿದೆ. ಈ ಬಾರಿಯೂ ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಯುಎಇಯಲ್ಲಿ ನಡೆದ 1984ರ ಚೊಚ್ಚಲ ಏಷ್ಯಾ ಕಪ್ ಗೆದ್ದ ಹಿರಿಮೆ ಭಾರತದದ್ದು. ಭಾರತಕ್ಕೆ ಮೊದಲ ಏಷ್ಯಾ ಕಪ್ ಗೆದ್ದು ಕೊಟ್ಟ ಖ್ಯಾತಿ ಸುನೀಲ್ ಗಾವಸ್ಕರ್‌ಗೆ ಸಲ್ಲುತ್ತದೆ.
ಭಾರತ ಮತ್ತು ಶ್ರೀಲಂಕಾ ನಡುವಣ ಏಷ್ಯಾಕಪ್ ಪಂದ್ಯ ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಮಳೆಯ ಭೀತಿ ಇದ್ದರೂ ಪಂದ್ಯದ ಟಿಕೆಟ್ ಸೋಲ್ಡ್ ಔಟ್ ಆಗಿದೆ.
Tickets for the finals of the Asia Cup 2023 have been sold out.
— Sri Lanka Cricket 🇱🇰 (@OfficialSLC) September 17, 2023
Hence, the public is advised not to arrive at ticket counters or the ground to purchase tickets to watch the epic final between Sri Lanka and India.
The ones who have purchased tickets to watch the final are… pic.twitter.com/GAKwLcQCdG