ಕೊಲಂಬೊ: ಏಷ್ಯಾಕಪ್ನ(Asia Cup 2023) ಮಂಗಳವಾರದ ಸೂಪರ್ 4(India vs Sri Lanka Super Fours) ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್ ಶ್ರೀಲಂಕಾ(IND vs SL) ವಿರುದ್ಧ 41 ರನ್ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಬಹುತೇಕ ಫೈನಲ್ಗೇರಿದೆ. ಇಲ್ಲಿನ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಲಂಕಾ ಸ್ಪಿನ್ನರ್ಗಳ ದಾಳಿಗೆ ಸಿಲುಕಿ 49.2 ಓವರ್ಗಳಲ್ಲಿ 213 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ 41. 3 ಓವರ್ಗಳಲ್ಲಿ 172 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು.
ಭಾರತ ತಂಡ ರೋಹಿತ್ ಶರ್ಮಾ (53 ರನ್) ಅರ್ಧ ಶತಕ ಹಾಗೂ ಶುಭ್ಮನ್ ಗಿಲ್ (19) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮೊದಲ ವಿಕೆಟ್ಗೆ 80 ರನ್ ಜತೆಯಾಟ ಪಡೆಯಿತು. ಆದರೆ, ಆ ಬಳಿಕ ಭಾರತದ ಬ್ಯಾಟಿಂಗ್ ವಿಭಾಗ ಏಕಾಏಕಿ ವೈಫಲ್ಯ ಕಂಡಿತು. ಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ (40 ರನ್ಗಳಿಗೆ 5 ವಿಕೆಟ್), ಚರಿತ್ ಅಸಲಂಕಾ (18 ರನ್ಗಳಿಗೆ 4 ವಿಕೆಟ್) ಅವರ ಮಾರಕ ದಾಳಿಗೆ ಸಿಲುಕಿ ನಲುಗಿತು.
ವಿರಾಟ್ ಕೊಹ್ಲಿ 3 ರನ್ಗಳಿಗೆ ಔಟಾದರೆ, ಇಶಾನ್ ಕಿಶನ್ (33) ಹಾಗೂ ಕೆ. ಎಲ್ ರಾಹುಲ್ (39) ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿದರು. ಆದರೆ, ಲಂಕಾದ ಸ್ಪಿನ್ನರ್ಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಸತತವಾಗಿ ವಿಕೆಟ್ಗಳನ್ನು ಕಳೆದಕೊಂಡು ಕನಿಷ್ಠ ಮೊತ್ತಕ್ಕೆ ಸರ್ವಪತನ ಕಂಡಿತು.
ಹಾರ್ದಿಕ್ ಪಾಂಡ್ಯ 5 ರನ್ ಬಾರಿಸಿದರೆ, ರವೀಂದ್ರ ಜಡೇಜಾ 4 ರನ್ಗಳಿಗೆ ಸೀಮಿತಗೊಂಡರು. ಅಕ್ಷರ್ ಪಟೇಲ್ ಕೊನೆ ವಿಕೆಟ್ ಆಗಿ ಔಟಾಗುವ ಮೊದಲು 26 ರನ್ಗಳ ಕೊಡುಗೆ ಕೊಟ್ಟರು. ಬುಮ್ರಾ 5 ರನ್, ಕುಲ್ದೀಪ್ ಯಾದವ್ ಶೂನ್ಯಕ್ಕೆ ಔಟಾದರು.
ಲಂಕಾ ಪರ ಮಹೀಶ್ ತೀಕ್ಷಣಾ ಒಂದು ವಿಕೆಟ್ ಪಡೆದರು.
ಶ್ರೀಲಂಕಾ ತಂಡದ ಮೇಲುಗೈ
ಸ್ಪಿನ್ನರ್ ವೆಲ್ಲಲಗೆಗೆ ವಿಕೆಟ್ ಒಪ್ಪಿಸಿದ ಹಾರ್ದಿಕ್ ಪಾಂಡ್ಯ. ಐದು ರನ್ ಬಾರಿಸಿ ಔಟ್.
ಇಶಾನ್ ಕಿಶನ್ ಔಟ್. 33 ರನ್ ಬಾರಿಸಿ ಅಸಲಂಕಾಗೆ ವಿಕೆಟ್ ಒಪ್ಪಿಸಿದ ಇಶಾನ್ ಕಿಶನ್
ಕೆ. ಎಲ್ ರಾಹುಲ್ ವೆಲ್ಲಲಗೆ ಬೌಲಿಂಗ್ಗೆ ರಿಟರ್ನ್ ಕ್ಯಾಚ್ ನೀಡಿ ಔಟಾಗಿದ್ದಾರೆ.
ಪಾಕ್ ವಿರುದ್ಧ ಶತಕ ಬಾರಿಸಿ ಸಂಭ್ರಮಿಸಿದ ವಿರಾಟ್ ಕೊಹ್ಲಿ ಲಂಕಾ ವಿರುದ್ಧ ಮೂರು ರನ್ಗೆ ವಿಕೆಟ್ ಒಪ್ಪಿಸಿದರು.