Site icon Vistara News

IND vs SL: ಭಾರತಕ್ಕೆ ಶ್ರೀಲಂಕಾ ವಿರುದ್ಧ 41 ರನ್​ ವಿಜಯ

rohit sharma and dasun shanaka

ಕೊಲಂಬೊ: ಏಷ್ಯಾಕಪ್​ನ(Asia Cup 2023) ಮಂಗಳವಾರದ ಸೂಪರ್​ 4(India vs Sri Lanka Super Fours) ಪಂದ್ಯದಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್​ ಶ್ರೀಲಂಕಾ(IND vs SL) ವಿರುದ್ಧ 41 ರನ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ತಂಡ ಬಹುತೇಕ ಫೈನಲ್​ಗೇರಿದೆ. ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ ಟೀಮ್ ಇಂಡಿಯಾ ಲಂಕಾ ಸ್ಪಿನ್ನರ್​ಗಳ ದಾಳಿಗೆ ಸಿಲುಕಿ 49.2 ಓವರ್​ಗಳಲ್ಲಿ 213 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ತಂಡ 41. 3 ಓವರ್​ಗಳಲ್ಲಿ 172 ರನ್​ಗಳಿಗೆ ಆಲ್​ಔಟ್​ ಆಗಿ ಸೋಲೊಪ್ಪಿಕೊಂಡಿತು.

ಭಾರತ ತಂಡ ರೋಹಿತ್ ಶರ್ಮಾ (53 ರನ್​) ಅರ್ಧ ಶತಕ ಹಾಗೂ ಶುಭ್​ಮನ್ ಗಿಲ್​ (19) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮೊದಲ ವಿಕೆಟ್​​ಗೆ 80 ರನ್​ ಜತೆಯಾಟ ಪಡೆಯಿತು. ಆದರೆ, ಆ ಬಳಿಕ ಭಾರತದ ಬ್ಯಾಟಿಂಗ್ ವಿಭಾಗ ಏಕಾಏಕಿ ವೈಫಲ್ಯ ಕಂಡಿತು. ಲಂಕಾದ ಯುವ ಸ್ಪಿನ್ನರ್​ ದುನಿತ್​ ವೆಲ್ಲಾಲಗೆ (40 ರನ್​ಗಳಿಗೆ 5 ವಿಕೆಟ್​), ಚರಿತ್ ಅಸಲಂಕಾ (18 ರನ್​ಗಳಿಗೆ 4 ವಿಕೆಟ್​) ಅವರ ಮಾರಕ ದಾಳಿಗೆ ಸಿಲುಕಿ ನಲುಗಿತು.

ವಿರಾಟ್ ಕೊಹ್ಲಿ 3 ರನ್​ಗಳಿಗೆ ಔಟಾದರೆ, ಇಶಾನ್​ ಕಿಶನ್​ (33) ಹಾಗೂ ಕೆ. ಎಲ್​ ರಾಹುಲ್ (39) ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿದರು. ಆದರೆ, ಲಂಕಾದ ಸ್ಪಿನ್ನರ್​ಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಸತತವಾಗಿ ವಿಕೆಟ್​ಗಳನ್ನು ಕಳೆದಕೊಂಡು ಕನಿಷ್ಠ ಮೊತ್ತಕ್ಕೆ ಸರ್ವಪತನ ಕಂಡಿತು.

ಹಾರ್ದಿಕ್ ಪಾಂಡ್ಯ 5 ರನ್​ ಬಾರಿಸಿದರೆ, ರವೀಂದ್ರ ಜಡೇಜಾ 4 ರನ್​ಗಳಿಗೆ ಸೀಮಿತಗೊಂಡರು. ಅಕ್ಷರ್ ಪಟೇಲ್ ಕೊನೆ ವಿಕೆಟ್​ ಆಗಿ ಔಟಾಗುವ ಮೊದಲು 26 ರನ್​ಗಳ ಕೊಡುಗೆ ಕೊಟ್ಟರು. ಬುಮ್ರಾ 5 ರನ್​, ಕುಲ್ದೀಪ್​ ಯಾದವ್​ ಶೂನ್ಯಕ್ಕೆ ಔಟಾದರು.

ಲಂಕಾ ಪರ ಮಹೀಶ್ ತೀಕ್ಷಣಾ ಒಂದು ವಿಕೆಟ್​ ಪಡೆದರು.

Abhilash B C

ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ರೋಹಿತ್​ ಶರ್ಮ

Abhilash B C

ಈ ಪಂದ್ಯಕ್ಕೆ ಭಾರತ ತಂಡ ಒಂದು ಬದಲಾವಣೆ ಮಾಡಿದೆ. ಶಾರ್ದೂಲ್​ ಠಾಕೂರ್​ ಬದಲು ಆಲ್​ರೌಂಡರ್​ ಅಕ್ಷರ್​ ಪಟೇಲ್​ ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿದೆ.

Abhilash B C

ಶ್ರೀಲಂಕಾ ವಿರುದ್ಧ ಟಾಸ್​ ಗೆದ್ದ ರೋಹಿತ್​ ಶರ್ಮ ಮೊದಲು ಬ್ಯಾಟಿಂಗ್​ ಮಾಡಲು ನಿರ್ಧರಿಸಿದ್ದಾರೆ

Abhilash B C

ಶ್ರೀಲಂಕಾ ತಂಡದಲ್ಲಿ ಹೆಚ್ಚಿನ ಸ್ಟಾರ್​ ಆಟಗಾರರು ಕಾಣಿಸಿಕೊಳ್ಳದಿದ್ದರೂ ಅವರ ಸವಾಲನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಯುವ ಆಟಗಾರರನ್ನೆ ನೆಚ್ಚಿಕೊಂಡ ಲಂಕಾ ಕಳೆದ ಬಾರಿ ಅಂಡರ್​ ಡಾಗ್​ ಎಂದೇ ಪರಿಗಣಿಸಿದ್ದರೂ ಕಪ್​ ಎತ್ತಿ ಮೆರೆದಾಡಿತ್ತು.

Abhilash B C

ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಶಾರ್ದೂಲ್​ ಅವರನ್ನು ಈ ಪಂದ್ಯದಲ್ಲಿ ಕೈಬಿಟ್ಟು ಅನುಭವಿ ಮೊಹಮ್ಮದ್​ ಶಮಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

Exit mobile version