ಮುಂಬಯಿ: ವಿಶ್ವ ಕಪ್ನ 33ನೇ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ (Ind vs Sl) ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿದ್ದಾರೆ. ಮುಂಬಯಿಯ ಐತಿಹಾಸಿಕ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯುತ್ತಿದ್ದು, ಹೊನಲು ಬೆಳಕಿನಲ್ಲಿ ಚೇಸ್ ಮಾಡುವುದು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಲಂಕಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
🚨 Toss and Team Update 🚨
— BCCI (@BCCI) November 2, 2023
Sri Lanka win the toss and elect to bowl first.
A look at #TeamIndia's Playing XI 👌👌
Follow the match ▶️ https://t.co/rKxnidWn0v#CWC23 | #MenInBlue | #INDvSL pic.twitter.com/aI5l9xm4p4
ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಎರಡನೇ ಭಾಗದಲ್ಲಿ ಬ್ಯಾಟಿಂಗ್ ಮಾಡಲು ಪಿಚ್ ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಕಳೆದ ಕೆಲವು ಪಂದ್ಯಗಳಲ್ಲಿ ನಮ್ಮ ತಂಡದ ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.. ಅವರು ಇಂದು ಅದೇ ರೀತಿ ಮುಂದುವರಿಸುತ್ತಾರೆ ಎಂದು ಆಶಿಸುತ್ತೇವೆ. ಒಂದು ಬದಲಾವಣೆ ಇದೆ ತಂಡದಲ್ಲಿ ಎಂದು ಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಹೇಳಿದ್ದಾರೆ.
ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುತ್ತಿದ್ದೆ. ಬ್ಯಾಟಿಂಗ್ ಮಾಡಲು ಉತ್ತಮ ಪಿಚ್. ನಿಸ್ಸಂಶಯವಾಗಿ ಉತ್ತಮ ಆರಂಭಕ್ಕೆ ಸಹಾಯವಾಗಲಿದೆ. ಹೊನಲು ಬೆಳಕಿನ ಅಡಿಯಲ್ಲಿ ನಮ್ಮ ವೇಗಿಗಳು ಮಿಂಚಲಿದ್ದಾರೆ. ತವರು ಮೈದಾನದಲ್ಲಿ ಭಾರತೀಯ ನಾಯಕನಾಗಿ ಮೊದಲ ಪಂದ್ಯ. ಇದು ಅತ್ಯುತ್ತಮ ಕ್ಷಣ. ನಾವು ನಮ್ಮ ಪ್ರದರ್ಶನ ಮುಂದುವರಿಲಿದ್ದೇವೆ.. ಕಳೆದ ಪಂದ್ಯದಂತೆಯೇ ಅದೇ ತಂಡವನ್ನು ಆಡಿಸಲಿದ್ದೇವೆ ಎಂದು ಟಾಸ್ ಸೋತ ರೋಹಿತ್ ಶರ್ಮಾ ಹೇಳಿದ್ದಾರೆ.
CWC 2023. Sri Lanka XI: D Karunaratne, P Nissanka, K Mendis (C/WK), C Asalanka, A Mathews, S Samarawickrama, D Hemantha, D Chameera, M Theekshana, K Rajitha, D Madushanka. https://t.co/B6bRzb775S #INDvSL #CWC23
— BCCI (@BCCI) November 2, 2023
ಆರು ಸಮಗ್ರ ಗೆಲುವುಗಳ ನಂತರ ಭಾರತವು ಸೋಲಿಲ್ಲದ ಏಕೈಕ ತಂಡವಾಗಿ ಎತ್ತರಕ್ಕೆ ಹಾರುತ್ತಿದೆ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ನಾಕೌಟ್ ಹಂತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅಂಚಿನಲ್ಲಿದೆ.
ಈ ಸುದ್ದಿಯನ್ನೂ ಓದಿ: IPL 2023 : ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಬಟ್ಲರ್ ಡೌಟ್, ಮದುವೆಗೆಂದು ಊರಿಗೆ ಹೋದ ಮಿಚೆಲ್ ಮಾರ್ಷ್
ಸತತ ಏಳನೇ ಗೆಲುವು ಭಾರತ ತಂಡವನ್ನು ಬಹುತೇಕ ಅಗ್ರಸ್ಥಾನದಲ್ಲಿ ನಿಲ್ಲಿಸಲಿದೆ. ಹೀಗಾಗಿ ಈ ಪಂದ್ಯ ತಂಡದ ಲೈನ್ಅಪ್ ಅನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ. ತವರು ನೆಲದಲ್ಲಿ ಇತ್ತೀಚೆಗೆ ನಡೆದ ಏಷ್ಯಾಕಪ್ನ ಫೈನಲ್ಗೆ ಪ್ರವೇಶಿಸಿದ್ದು, ಶ್ರೀಲಂಕಾ ತಂಡಕ್ಕೆ ಅಚ್ಚರಿಯಾಗಿತ್ತು. ಆದರೆ ಆ ನಿರ್ಣಾಯಕ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ 21 ರನ್ಗೆ 6 ವಿಕೆಟ್ ಪಡೆದಿದ್ದರು. ಲಂಕಾ ತಂಡ ಕೇವಲ 50 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ಭಾರತವು ಕೇವಲ 6.1 ಓವರ್ಗಳಲ್ಲಿ 10 ವಿಕೆಟ್ ಉಳಿಸಿಕೊಂಡು ಗೆಲುವು ಸಾಧಿಸಿತ್ತು.
ತಂಡಗಳ ವಿವರ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಶ್ರೀಲಂಕಾ ತಂಡ: ಪಥುಮ್ ನಿಸ್ಸಾಂಕಾ, ದಿಮುತ್ ಕರುಣರತ್ನೆ, ಕುಸಾಲ್ ಮೆಂಡಿಸ್ (ನಾಯಕ & ವಿಕೆಟ್ ಕೀಪರ್), ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶಾನ್ ಹೇಮಂತ, ಮಹೀಶ್ ತೀಕ್ಷಾನಾ, ಕಸುನ್ ರಜಿತಾ, ದುಷ್ಮಂತ ಚಮೀರಾ, ದಿಲ್ಶಾನ್ ಮಧುಶಂಕಾ.