Site icon Vistara News

ind vs wi : ವಿಂಡೀಸ್ ವಿರುದ್ಧದ 2ನೇ ಪಂದ್ಯ ನಡೆಯುವ ಕೆನ್ಸಿಂಗ್ಟನ್​ ಓವಲ್​ ಪಿಚ್​ ಹೇಗಿದೆ?

Kensigton Oval

ಬಾರ್ಬಡೋಸ್​: ಜುಲೈ 29 ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆಯಲಿರುವ ಭಾರತ ಮತ್ತು ವೆಸ್ಟ್​ ಇಂಡೀಸ್ ತಂಡಗಳ ನಡುವಿನ ಏಕ ದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬ ಲೆಕ್ಕಾಚಾರ ಶುರುವಾಗಿದೆ. ಭಾರತವು ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್​ಗಳಿಂದ ಗೆದ್ದಿತ್ತು. ಆದರೆ ಸಣ್ಣ ಮೊತ್ತವನ್ನು ಬೆನ್ನಟ್ಟುವಲ್ಲಿ ತ್ವರಿತವಾಗಿ ಐದು ವಿಕೆಟ್​ಗಳನ್ನು ಕಳೆದುಕೊಂಡಿದ್ದು ಆತಂಕಕಾರಿ ವಿಷಯವಾಗದೆ. ಆದರೆ, ಬೌಲಿಂಗ್​ನಲ್ಲಿ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ವಿಶ್ವಾಸ ಮೂಡಿಸಿದ್ದಾರೆ. ವಿಂಡೀಸ್​ ಪರ ಗುಡಕೇಶ್ ಮೋತಿ ಮತ್ತು ಯಾನಿಕ್ ಕ್ಯಾರಿಯಾ ಅವರ ಬೌಲಿಂಗ್ ವೆಸ್ಟ್ ಇಂಡೀಸ್ ತಂಡಕ್ಕೆ ಪೂರಕವಾಗಿದೆ.

ಮೊದಲ ಪಂದ್ಯ ನಡೆದ ಕ್ರೀಡಾಂಗಣದಲ್ಲಿಯೇ ಎರಡನೇ ಪಂದ್ಯವೂ ಆಯೋಜನೆಗೊಂಡಿದೆ. ಮೊದಲ ಪಂದ್ಯ ಸಂಪೂರ್ಣವಾಗಿ ಸ್ಪಿನ್​ ಸ್ನೇಹಿಯಾಗಿತ್ತು ಹಾಗೂ ಎರಡೂ ತಂಡ ಸ್ಪಿನ್ನರ್​​ಗಳು ಇಲ್ಲಿ ಮೇಲುಗೈ ಸಾಧಿಸಿದ್ದರು. ಹೀಗಾಗಿ ಮತ್ತೊಂದು ಅದೇ ಮಾದರಿಯ ಪಂದ್ಯವನ್ನು ನಿರೀಕ್ಷೆ ಮಾಡಬಹುದು.

ಕ್ರೀಡಾಂಗಣದ ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಿದರೆ ಈ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸವಾಲಿನ ಕೆಲಸ. ಇಲ್ಲಿ ಸರಾಸರಿ ಸ್ಕೋರ್ 239. ಈ ಪಿಚ್​ ಬ್ಯಾಟರ್​​ಗಳಿಗೆ ಕಷ್ಟ ಎಂಬುದು ಸಾಬೀತಾಗಿದೆ. ಪಿಚ್​ ನಿಧಾನಗತಿಯಲ್ಲಿರುವ ಕಾರಣ ಸ್ಪಿನ್​ ಬೌಲರ್​ಗಳು ಮೆರೆದಾಡುತ್ತಾರೆ.

ಪರಿಸ್ಥಿತಿಗಳನ್ನು ಗಮನಿಸಿದರೆ, ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಕಾರ್ಯತಂತ್ರದ ಚೇಸಿಂಗ್ ತಂಡಕ್ಕೆ ಹೆಚ್ಚು ಅನುಕೂಲಕರ. ಏಕೆಂದರೆ ಅವರು ಪಿಚ್​​ನ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಬ್ಯಾಟಿಂಗ್ ವಿಧಾನವನ್ನು ಯೋಜಿಸಲು ಅವಕಾಶವನ್ನು ಸಿಗುತ್ತದೆ.

ಇದನ್ನೂ ಓದಿ : WTC Final 2023: ಇಬ್ಬರು ಆಟಗಾರರ ಮೇಲೆ ವಿಶೇಷ ನಿಗಾ ಅಗತ್ಯ; ಪಾಂಟಿಂಗ್​ ಹೇಳಿದ ಈ ಟೀಮ್​ ಇಂಡಿಯಾದ ಆಟಗಾರರು ಯಾರು?

ಇಲ್ಲಿ ಆಡಿದ ಪಂದ್ಯಗಳ ಫಲಿತಾಂಶವು ಸಮತೋಲಿತವಾಗಿದೆ. ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು ಇಲ್ಲಿಯವರೆಗೆ ನಡೆದ 45 ಏಕದಿನ ಪಂದ್ಯಗಳಲ್ಲಿ 26ರಲ್ಲಿ ಗೆದ್ದಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 19 ಗೆಲುವುಗಳನ್ನು ಸಾಧಿಸಿವೆ.

ತಂಡಗಳು

ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಯಜುವೇಂದ್ರ ಚಾಹಲ್, ಜಯದೇವ್ ಉನಾದ್ಕತ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್.

ವೆಸ್ಟ್ ಇಂಡೀಸ್: ಶಾಯ್​ ಹೋಪ್ (ನಾಯಕ), ಕೈಲ್ ಮೇಯರ್ಸ್, ಬ್ರೆಂಡನ್ ಕಿಂಗ್, ಶಿಮ್ರೋನ್​ ಹೆಟ್ಮಾಯರ್​ , ಅಲಿಕ್ ಅಥಾನಾಜೆ, ರೋವ್ಮನ್ ಪೊವೆಲ್, ಕೀಸಿ ಕಾರ್ಟಿ, ರೊಮಾರಿಯೊ ಶೆಫರ್ಡ್, ಗುಡಕೇಶ್ ಮೋಟಿ, ಅಲ್ಜಾರಿ ಜೋಸೆಫ್, ಒಶೇನ್ ಥಾಮಸ್, ಜೇಡನ್ ಸೀಲ್ಸ್, ಕೆವಿನ್ ಸಿಂಕ್ಲೇರ್, ಡೊಮಿನಿಕ್ ಡ್ರೇಕ್ಸ್, ಯಾನಿಕ್ ಕ್ಯಾರಿಯಾ.

Exit mobile version