Site icon Vistara News

IND vs WI T20 | ಲಗೇಜ್ ಬರುವುದು ತಡವಾಗಿದ್ದಕ್ಕೆ ಮ್ಯಾಚ್‌ ಎರಡು ಗಂಟೆ ವಿಳಂಬ!

ING vsWI T20

ಸೇಂಟ್‌ ಕಿಟ್ಸ್‌ : ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಟಿ೨೦ ಸರಣಿಯ ಎರಡನೇ ಪಂದ್ಯ ಎರಡು ಗಂಟೆ ತಡವಾಗಿ ಅರಂಭವಾಗಲಿದೆ. ಈ ಹಿಂದೆ ನಿಗದಿಯಾಗಿರುವಂತೆ ಪಂದ್ಯ ಭಾರತೀಯ ಕಾಲಮಾನ ರಾತ್ರಿ ೮ ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಹೊಸ ಸಮಯದ ಪ್ರಕಾರ ರಾತ್ರಿ ೧೦ ಗಂಟೆಗೆ ಪಂದ್ಯ ಶುರುವಾಗಲಿದೆ. ಇಷ್ಟಕ್ಕೂ ಎರಡು ಗಂಟೆ ಪಂದ್ಯ ತಡವಾಗುವುದಕ್ಕೆ ದೊಡ್ಡ ಕಾರಣಗಳೇನೂ ಇಲ್ಲ. ಕೇವಲ ಲಗೇಜ್‌ ತಡವಾಗಿ ಬಂದಿರುವುದು.

ಮೊದಲ ಪಂದ್ಯ ತರೊಬದ ಬ್ರಿಯಾನ್‌ ಲಾರಾ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆದಿತ್ತು. ಅಂತೆಯೇ ಎರಡನೇ ಪಂದ್ಯ ಸೇಂಟ್‌ ಕಿಟ್ಸ್‌ನ ವಾರ್ನರ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲಿ ಆಯೋಜನೆಗೊಂಡಿದೆ. ಅಂತೆಯೇ ಪಂದ್ಯದಕ್ಕಾಗಿ ಭಾರತ ತಂಡದ ಆಟಗಾರರು ಸೇಂಟ್‌ ಕಿಟ್ಸ್‌ಗೆ ಸೋಮವಾರ ತಲುಪಿದ್ದಾರೆ. ಅದರೆ, ಅವರ ಲಗೇಜ್‌ ಸೂಕ್ತ ಸಮಯಕ್ಕೆ ಅಲ್ಲಿಗೆ ತಲುಪಿಲ್ಲ.

ಸಾರಿಗೆ ವ್ಯವಸ್ಥೆಯಲ್ಲಿ ತೊಂದರೆ ಉಂಟಾದ ಕಾರಣ ಟೀಮ್‌ ಇಂಡಿಯಾದ ಕ್ರಿಕೆಟಿಗರ ಲಗೇಜ್‌ ಬಂದಿಲ್ಲ ಎನ್ನಲಾಗಿದೆ. ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಲಗೇಜ್‌ ತಲುಪಿಸಲಾಗಿದೆ. ಈ ಗೊಂದಲದ ನಡುವೆ ಆಟಗಾರರಿಗೆ ಅಭ್ಯಾಸಕ್ಕೆ ಸಿದ್ಧಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಪಂದ್ಯವನ್ನು ಎರಡು ಗಂಟೆ ಮುಂದೂಡಲು ನಿರ್ಧರಿಸಲಾಗಿದೆ.

ಐದು ಪಂದ್ಯಗಳ ಸರಣಿಯಲ್ಲಿ ಒಂದು ಹಣಾಹಣಿ ಮುಕ್ತಾಯಗೊಂಡಿದ್ದು, ಭಾರತ ಜಯ ಸಾಧಿಸಿ ೧-೦ ಮುನ್ನಡೆಯಲಿದೆ. ಅಂತೆಯೇ ಬೌಲಿಂಗ್‌ಗೆ ನೆರವು ನೀಡುವ ವಾರ್ನರ್‌ಪಾರ್ಕ್ಸ್‌ ಸ್ಟೇಡಿಯಮ್‌ನಲ್ಲಿ ಆಡಿ ಗೆಲವು ಸಾಧಿಸುವುದು ಕೂಡ ಟೀಮ್‌ ಇಂಡಿಯಾದ ಗುರಿಯಾಗಿದೆ.

ಇದನ್ನೂ ಓದಿ | IND vs WI T20 | 2ನೇ ಪಂದ್ಯದ ಗೆಲುವಿಗೆ ಹಳೆ ತಂತ್ರ ಫಲಿಸುವುದೇ?

Exit mobile version