Site icon Vistara News

IND vs WI T20 | ಕ್ರಿಕೆಟಿಗರಿಗೆ ಕೊನೆಗೂ ಸಿಕ್ಕಿತು ಅಮೆರಿಕ ವೀಸಾ, ಸರಣಿ ನಿರಾತಂಕ

IND vs Wi t20

ಪೋರ್ಟ್‌ ಆಫ್‌ ಸ್ಪೇನ್‌ : ಭಾರತ ಹಾಗೂ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಸರಣಿಯ ಕೊನೇ ಎರಡು ಪಂದ್ಯಗಳ ಮೇಲೆ ಚಾಚಿದ್ದ ಕಾರ್ಮೋಡ ಕರಗಿ ಹೋಗಿದೆ. ಇತ್ತಂಡಗಳ ಆಟಗಾರರಿಗೆ ಕೊನೆಗೂ ಅಮರಿಕ ವೀಸಾ ಲಭಿಸಿದ್ದು, ತಕ್ಷಣದಲ್ಲೇ ಅವರು ಫ್ಲೋರಿಡಾಗೆ ಪ್ರವಾಸ ಮಾಡಲಿದ್ದಾರೆ. ಗಯಾನ ಸರಕಾರದ ಮಧ್ಯಪ್ರವೇಶದ ಬಳಿಕ ಕ್ರಿಕೆಟಿಗರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ಲಭಿಸಿದೆ.

ಐದು ಪಂದ್ಯಗಳಲ್ಲಿ ಮೊದಲ ಪಂದ್ಯ ಪೋರ್ಟ್‌ ಆಫ್‌ ಸ್ಪೇನ್‌ನ ಬ್ರಿಯಾನ್‌ ಲಾರಾ ಸ್ಟೇಡಿಯಮ್‌ನಲ್ಲಿ ನಡೆದಿದ್ದರೆ, ಎರಡನೇ ಹಾಗೂ ಮೂರನೇ ಪಂದ್ಯ ಸೇಂಟ್‌ ಕಿಟ್ಸ್‌ನ ವಾರ್ನರ್‌ ಪಾರ್ಕ್‌ ಸ್ಟೇಡಿಯಮ್‌ನಲ್ಲಿ ನಡೆದಿತ್ತು. ಅಂತೆಯೇ ನಾಲ್ಕನೇ ಹಾಗೂ ಐದನೇ ಪಂದ್ಯ ಅಮೆರಿಕದ ಫ್ಲೋರಿಡಾದಲ್ಲಿ ಆಯೋಜನೆಗೊಂಡಿತ್ತು. ಆದರೆ, ಇತ್ತಂಡಗಳ ಆಟಗಾರರಿಗೆ ವೀಸಾ ದೊರೆಯದೇ ಸಮಸ್ಯೆ ಉಂಟಾಗಿತ್ತು. ಎರಡು ಪಂದ್ಯಗಳನ್ನು ವೆಸ್ಟ್‌ ಇಂಡೀಸ್‌ನಲ್ಲಿಯೇ ನಡೆಸುವ ಬಗ್ಗೆಯೂ ಯೋಜನೆ ರೂಪಿಸಲಾಗಿತ್ತು. ಆದರೆ, ಇನ್ನೇನು ಎರಡು ದಿನಗಳು ಬಾಕಿ ಇರುವಂತೆಯೇ ಗಯಾನ ಸರಕಾರದ ಮಧ್ಯಪ್ರವೇಶದಿಂದ ವೀಸಾ ಲಭಿಸಿದೆ.

ಭಾರತೀಯ ಕ್ರಿಕೆಟಿಗರಾದ ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌, ದಿನೇಶ್‌ ಕಾರ್ತಿಕ್‌, ರವಿ ಬಿಷ್ಣೋಯಿ, ಸೂರ್ಯಕುಮಾರ್‌ ಯಾದವ್‌, ಕುಲ್ದೀಪ್‌ ಯಾದವ್‌ ಅಮೆರಿಕದ ಮಿಯಾಮಿಗೆ ತಲುಪಿದ್ದಾರೆ. ಉಳಿದ ಆಟಗಾರರು ಸಂಜೆಯ ವೇಳೆಗೆ ಅಲ್ಲಿಗೆ ತಲುಪಲಿದ್ದಾರೆ.

ಎಲ್ಲರ ವೀಸಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ. ಖಾಸಗಿ ವಿಮಾನದಲ್ಲಿ ಕೆಲವು ಆಟಗಾರರು ಮಿಯಾಮಿಗೆ ತಲುಪಿದ್ದಾರೆ. ಉಳಿದ ಆಟಗಾರರು ಗುರುವಾರ ಸಂಜೆಯ ವೇಳೆಗೆ ಇನ್ನೊಂದು ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Team India | ಟಿ20 ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸೂರ್ಯಕುಮಾರ್‌ಗೆ ಎರಡು ಸ್ಥಾನ ಬಡ್ತಿ

Exit mobile version