ಬರ್ಮಿಂಗ್‌ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್‌ನ ಮಹಿಳೆಯರ ಟಿ೨೦ ಕ್ರಿಕೆಟ್‌ನ ತನ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಎ ಗುಂಪಿನಲ್ಲಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಎದುರಾಳಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಕಳೆದ ಬಾರಿಯ ಟಿ೨೦ ವಿಶ್ವ ಕಪ್‌ನ ಫೈನಲ್ ಪಂದ್ಯದಲ್ಲಿ ಆಡಿದ ತಂಡಗಳಾಗಿದ್ದು, ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮತ್ತೆ ಪರಸ್ಪರ ಎದುರಾಗುತ್ತಿದೆ.
ಎಜ್‌ಬಾಸ್ಟನ್ ಸ್ಟೇಡಿಯಮ್‌ನಲ್ಲಿ ಪಂದ್ಯ ನಡೆಯಲಿದ್ದು, ಗೆಲುವಿನ ಮೂಲಕ ಪದಕದ ಬೇಟೆ ಆರಂಭಿಸುವ ಗುರಿಯೊಂದಿಗೆ ಭಾರತ ತಂಡ ಕಣಕ್ಕೆ ಇಳಿಯಲಿದೆ.
ಭಾರತ ತಂಡ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನಾ, ಶಫಾಲಿ ವರ್ಮ, ಯಸ್ತಿಕಾ ಭಾಟಿಯಾ, ಜೆಮಿಮಾ ರೋಡ್ರಿಗಸ್, ಹರ್ಲಿನ್ ದೇವಲ್, ದೀಪ್ತಿ ಶರ್ಮ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್, ರೇಣುಕಾ ಠಾಕೂರ್.
ಆಸ್ಟ್ರೇಲಿಯಾ ತಂಡ:
ಮೆಗ್ ಲ್ಯಾನಿಂಗ್, ಅಲಿಸಾ ಹೀಲಿ, ಬೆತ್ ಮೂನಿ, ತಹಲಿಯಾ ಮೆಕ್‌ಗ್ರಾಥ್, ರಾಚೆಲ್ ಹೇನ್ಸ್, ಆಶ್ಲೇ ಗಾರ್ಡ್ನ್‌ರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನ ಕಿಂಗ್, ಮೇಘನ್ ಶೂಟ್, ಡಾರ್ಸಿ ಬ್ರೌನ್.