Site icon Vistara News

India Women’s Cricket: ಭಾರತ ಮಹಿಳಾ ತಂಡಕ್ಕೆ ಹಂಗಾಮಿ ಕೋಚ್​ ಆಗಿ ನೂಶಿನ್ ಅಲ್ ಖದೀರ್ ನೇಮಕ

Nooshin Al Khadeer

ಮುಂಬಯಿ: ಬಾಂಗ್ಲಾದೇಶ ವಿರುದ್ಧದ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಗಾಗಿ ಭಾರತ ಮಹಿಳಾ ಕ್ರಿಕೆಟ್​ ತಂಡ(India Women’s Squad) ಈಗಾಗಲೇ ಪ್ರಕಟಗೊಂಡಿದೆ. ಇದೀಗ ಈ ಸರಣಿಗೆ ಭಾರತ ತಂಡದ ಹಂಗಾಮಿ ಕೋಚ್​ ಆಗಿ ನೂಶಿನ್ ಅಲ್ ಖದೀರ್ (Nooshin Al Khadeer) ನೇಮಕಗೊಂಡಿದ್ದಾರೆ. ಅಮೋಲ್‌ ಮಜುಂದಾರ್‌(Amol Mazumdar) ಅವರು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಳ್ಳುವುದು ಖಚಿತವಾಗಿದ್ದರೂ ಇದನ್ನು ಬಿಸಿಸಿಐ(BCCI) ಅಂತಿಮವಾಗಿ ಪ್ರಕಟಿಸಿಲ್ಲ. ಹೀಗಾಗಿ ನೂಶಿನ್ ಅಲ್ ಖದೀರ್ ಅವರನ್ನು ಬಾಂಗ್ಲಾದೇಶದ ಸರಣಿಗೆ ಹಂಗಾಮಿ ಕೋಚ್​ ಆಗಿ ನೇಮಕ ಮಾಡಲಾಗಿದೆ. ಚೊಚ್ಚಲ ಆವೃತ್ತಿಯ ಅಂಡರ್‌-19 ಟಿ20 ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡದ ಕೋಚ್​ ಆಗಿ ಕರ್ತವ್ಯ ನಿರ್ವಹಿಸಿದ್ದ ಅವರು ತಂಡವನ್ನು ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದರು.

ಮಹಿಳಾ ತಂಡದ ಕೋಚ್‌ ಆಯ್ಕೆ ಸಂಬಂಧ ಅಶೋಕ್‌ ಮಲ್ಹೋತ್ರ, ಜತಿನ್‌ ಪರಾಂಜಪೆ ಮತ್ತು ಸುಲಕ್ಷಣಾ ಕುಲಕರ್ಣಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯು (ಸಿಎಸಿ) ಮುಂಬೈನಲ್ಲಿ ಸೋಮವಾರ ಆಕಾಂಕ್ಷಿಗಳ ಸಂದರ್ಶನ ನಡೆಸಿತು.

ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ ಮೊದಲಿಗೆ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಜುಲೈ 9ರಂದು ಮೀರ್‌ಪುರದಲ್ಲಿ ನಡೆಯಲಿದೆ. ಜುಲೈ 11 ಮತ್ತು 13ರಂದು ಸರಣಿಯ ಉಳಿದೆರಡು ಪಂದ್ಯಗಳು ನಡೆಯಲಿದೆ. ಏಕದಿನ ಕ್ರಿಕೆಟ್‌ ಸರಣಿಯ ಮೂರು ಪಂದ್ಯಗಳು ಕ್ರಮವಾಗಿ ಜುಲೈ 16, 19 ಮತ್ತು 22ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಎರಡೂ ಸರಣಿಗಳ ಎಲ್ಲ ಪಂದ್ಯಗಳು ಮೀರ್‌ಪುರದಲ್ಲೇ ನಡೆಯಲಿವೆ. ಹರ್ಮನ್​ಪ್ರೀತ್ ಕೌರ್(Harmanpreet Kaur)​ ನಾಯಕಿಯಾದರೆ, ಸ್ಮೃತಿ ಮಂಧಾನಾ(Smriti Mandhana) ಉಪನಾಯಕಿಯಾಗಿದ್ದಾರೆ.​

ಇದನ್ನೂ ಓದಿ WOMENS IPL | ದೇಶೀಯ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್​ ಉತ್ತಮ ವೇದಿಕೆ; ಹರ್ಮನ್​ಪ್ರೀತ್ ಕೌರ್ ವಿಶ್ವಾಸ

ಎರಡು ಸರಣಿಗೆ ಭಾರತ ತಂಡ

ಟಿ20 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್. ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರವಾಣಿ, ಮೋನಿಕಾ ಪಟೇಲ್, ರಾಶಿ ಕನೌಜಿಯಾ, ಅನುಷಾ ಬ್ಯಾರೆಡಿ, ಮಿನ್ನು ಮಣಿ.

ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರವಾಣಿ, ಮೋನಿಕಾ ಪಟೇಲ್, ರಾಶಿ ರಾಶಿ ಕನೌಜಿಯಾ, ಅನುಷಾ ಬ್ಯಾರೆಡಿ, ಸ್ನೇಹ ರಾಣಾ.

Exit mobile version