Site icon Vistara News

INDW VS AUSW | ಆಸ್ಟ್ರೇಲಿಯಾ ವಿರುದ್ಧದ ತವರಿನ ಟಿ20 ಸರಣಿಗೆ ಭಾರತ ವನಿತಾ ತಂಡ ಪ್ರಕಟ

India womens squad

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ(INDW VS AUSW ) ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಶುಕ್ರವಾರ 15 ಸದಸ್ಯರ ಭಾರತ ವನಿತಾ ತಂಡ ಪ್ರಕಟಗೊಂಡಿದೆ. ಆದರೆ ತಂಡದ ಸ್ಟಾರ್​ ಆಟಗಾರ್ತಿ ಪೂಜಾ ವಸ್ತ್ರಾಕರ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಪೂಜಾ ವಸ್ತ್ರಾಕರ್ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಅದರಂತೆ ಹರ್ಮನ್​ಪ್ರೀತ್ ಕೌರ್ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದಂತೆ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಯಾ ರೋಡ್ರಿಗಸ್, ದೀಪ್ತಿ ಶರ್ಮಾ ಮತ್ತು ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

2023 ರಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವ ಕಪ್​ನ ತಯಾರಿಗಾಗಿ ಆಯೋಜಿಸುತ್ತಿರುವ ಪಂದ್ಯ ಇದಾಗಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ಉಭಯ ತಂಡಗಳಿಗೆ ಈ ಸರಣಿ ತಂಡವನ್ನು ಸಂಯೋಜಿಸಲು ಮಹತ್ವದ್ದಾಗಿದೆ. ಡಿಸೆಂಬರ್ 9 ರಂದು ಈ ಸರಣಿ ಆರಂಭಗೊಂಡು ಡಿ. 20ರ ವರೆಗೆ ನಡೆಯಲಿದೆ.

ನಾಲ್ವರು ನೆಟ್​ ಬೌಲರ್​ಗಳು

ತಂಡದ ಜತೆಗೆ ನಾಲ್ಕು ನೆಟ್ ಬೌಲರ್​ಗಳನ್ನು ಕೂಡ ಹೆಸರಿಸಲಾಗಿದೆ. ಮೋನಿಕಾ ಪಟೇಲ್, ಅರುಂದತಿ ರೆಡ್ಡಿ, ಎಸ್​ಬಿ ಪೋಕರ್ಕರ್ ಹಾಗೂ ಸಿಮ್ರಾನ್ ಬಹದ್ದೂರ್​ ನೆಟ್ ಬೌಲರ್​ಗಳಾಗಿದ್ದಾರೆ. ಇವರು ಭಾರತೀಯ ಆಟಗಾರ್ತಿಯರಿಗೆ ಅಭ್ಯಾಸದ ವೇಳೆ ನೆರವು ನೀಡಲಿದ್ದಾರೆ.

ಭಾರತ ವನಿತಾ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಯಾ ರೋಡ್ರಿಗಸ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸಾರ್ವಾನಿ, ದೇವಿಕಾ ವೈದ್ಯ, ಎಸ್ ಮೇಘನಾ, ರಿಚಾ ಘೋಷ್, ಹರ್ಲೀನ್ ಡಿಯೋಲ್.

ಇದನ್ನೂ ಓದಿ | IND VS BANGLA | ಭಾರತ ವಿರುದ್ಧದ ಸರಣಿಯಿಂದ ಬಾಂಗ್ಲಾ ನಾಯಕ ತಮೀಮ್‌ ಇಕ್ಬಾಲ್‌ ಔಟ್​!

Exit mobile version