Site icon Vistara News

India Women’s Hockey: ಯುರೋಪ್‌ ಪ್ರವಾಸಕ್ಕೂ ಸವಿತಾ ಪೂನಿಯ ನಾಯಕಿ

savita punia

ನವದೆಹಲಿ: ಯುರೋಪ್‌ ಪ್ರವಾಸಕ್ಕೆ 20 ಮಂದಿಯ ರಾಷ್ಟ್ರೀಯ ಮಹಿಳಾ ತಂಡವನ್ನು ಹಾಕಿ ಇಂಡಿಯಾ(India Women’s Hockey) ಪ್ರಕಟಿಸಿದೆ. ಈ ಪ್ರವಾಸದಲ್ಲಿ ಭಾರತವು ಜರ್ಮನಿಯಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ನಂತರ ಸ್ಪೇನ್‌ನಲ್ಲಿ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಆಡಲಿದೆ. ಜುಲೈ 16 ರಿಂದ ಟೂರ್ನಿ ಆರಂಭವಾಗಲಿದೆ. ಏಷ್ಯನ್‌ ಗೇಮ್ಸ್‌ ಸಿದ್ಧತೆಗೆ ಇದು ಭಾರತಕ್ಕೆ ಮಹತ್ವದ ಸರಣಿಯಾಗಿದೆ.

ಭಾರತ ತಂಡವನ್ನು ಗೋಲ್​ ಕೀಪರ್​ ಸವಿತಾ ಪೂನಿಯ(savita punia) ಮುನ್ನಡೆಸಲಿದ್ದಾರೆ. ದೀಪ್ ಗ್ರೇಸ್ ಎಕ್ಕಾ ಉಪನಾಯಕಿ ಆಗಿದ್ದಾರೆ. ಜರ್ಮನಿಯಲ್ಲಿ ಜುಲೈ 16 ರಿಂದ 19ರವರೆಗೆ ಭಾರತವು ಮೂರು ಪಂದ್ಯಗಳನ್ನು ಆಡಲಿದ್ದು, ಒಂದು ಪಂದ್ಯವು ಚೀನಾ ವಿರುದ್ಧ, ಎರಡು ಪಂದ್ಯಗಳನ್ನು ಆತಿಥೇಯರ ವಿರುದ್ಧ ಆಡಲಿದೆ. ನಂತರ ಸ್ಪೇನ್‌ಗೆ ತೆರಳಲಿರುವ ತಂಡವು ಜುಲೈ 25 ರಿಂದ 30ರವರೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಮತ್ತು ಆತಿಥೇಯರ ವಿರುದ್ಧ ಪಂದ್ಯಗಳನ್ನು ಆಡಲಿದೆ. ಸ್ಪ್ಯಾನಿಷ್‌ ಹಾಕಿ ಫೆಡರೇಷನ್‌ನ 100ನೇ ವರ್ಷದ ಅಂಗವಾಗಿ ಟೆರಸಾದಲ್ಲಿ ಈ ನಾಲ್ಕು ರಾಷ್ಟ್ರಗಳ ಟೂರ್ನಿ ನಡೆಯಲಿದೆ.

ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ತಂಡದ ಸದಸ್ಯರನ್ನೇ ಈ ಸರಣಿಗೂ ಆಯ್ಕೆ ಮಾಡಿಕೊಳ್ಳಲಾಗಿದೆ. ಆಸೀಸ್​ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದ ಅನುಭವಿ ಡಿಫೆಂಡರ್‌ ಸುಶೀಲಾ ಚಾನು ಪುಕ್ರಾಂಬಮ್ ಮತ್ತು ಫಾರ್ವರ್ಡ್ ದೀಪಿಕಾ ಮತ್ತೆ ತಂಡಕ್ಕೆ ಮರಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ ಬಳಿಕ ತಂಡದಿಂದ ಹೊರಗುಳಿದಿರುವ ರಾಣಿ ರಾಮ್​ಪಾಲ್​ ಅವರು ಈ ಸರಣಿಯಲ್ಲಿ ಕಮ್​ಬ್ಯಾಕ್​ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅವರು ಇನ್ನೂ ಫಿಟ್​ ಆಗದ ಕಾರಣ ಈ ಸರಣಿಯಿಂದ ಹೊರಗುಳಿದಿದ್ದಾರೆ. ಮುಂದಿನ ವರ್ಷ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟ ಇದ್ದು ಇದರಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರು ಆಡದಿದ್ದರೆ ಸವಿತಾ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆ ಅಧಿಕವಾಗಿದೆ.

ಇದನ್ನೂ ಓದಿ Hockey India: ಆಸೀಸ್​ ವಿರುದ್ಧದ ಹಾಕಿ ಸರಣಿ; ಭಾರತ ತಂಡಕ್ಕೆ ಸವಿತಾ ಪೂನಿಯಾ ನಾಯಕಿ

ಹಾಕಿ ತಂಡ

ಗೋಲ್‌ಕೀಪರ್ಸ್‌: ಸವಿತಾ (ನಾಯಕಿ), ಬಿಚುದೇವಿ ಖರಿಬಮ್. ಡಿಫೆಂಡರ್ಸ್‌: ದೀಪ್‌ ಗ್ರೇಸ್‌ ಎಕ್ಕಾ (ಉಪ ನಾಯಕಿ), ನಿಕ್ಕಿ ಪ್ರಧಾನ್, ಇಷಿಕಾ ಚೌಧರಿ, ಉದಿತಾ, ಸುಶೀಲಾ ಚಾನು ಪುಕ್ರಾಂಬಮ್.

ಮಿಡ್‌ಫೀಲ್ಡರ್ಸ್‌: ನಿಶಾ, ಮೋನಿಕಾ, ಸಲಿಮಾ ಟೆಟೆ, ನೇಹಾ, ನವನೀತ್ ಕೌರ್‌, ಸೋನಿಕಾ, ಬಲಜೀತ್‌ ಕೌರ್‌, ವೈಷ್ಣವಿ ವಿಠ್ಠಲ್‌ ಫಾಲ್ಕೆ, ಜ್ಯೋತಿ ಚೆಟ್ರಿ.

ಫಾರ್ವರ್ಡ್ಸ್: ಲಾಲ್‌ರೆಮ್‌ ಸಿಯಾಮಿ, ವಂದನಾ ಕಟಾರಿಯಾ, ಸಂಗೀತಾ ಕುಮಾರಿ ಮತ್ತು ದೀಪಿಕಾ

Exit mobile version