Site icon Vistara News

India Women’s Squad: 2 ವರ್ಷಗಳ ಬಳಿಕ ತಂಡಕ್ಕೆ ಮರಳಿದ ಪ್ರಿಯಾ ಪೂನಿಯ; ಅನುಭವಿ ರಿಚಾ,ರಾಜೇಶ್ವರಿಗೆ ಕೊಕ್​

priya punia

ಮುಂಬಯಿ: ಬಾಂಗ್ಲಾದೇಶ ವಿರುದ್ಧದ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಗಾಗಿ ಭಾರತ ಮಹಿಳಾ ಕ್ರಿಕೆಟ್​ ತಂಡ(India Women’s Squad) ಪ್ರಕಟಗೊಂಡಿದೆ. ತಂಡದಲ್ಲಿ ಕೆಲ ಅಚ್ಚರಿಯ ಆಯ್ಕೆ ನಡೆದಿದೆ. ಆರಂಭಿಕ ಆಟಗಾರ್ತಿಯಾಗಿರುವ ಪ್ರಿಯಾ ಪೂನಿಯ(priya punia) 2 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಆದರೆ ಅನುಭವಿ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಮತ್ತು ರಿಚಾ ಘೋಷ್​(Richa Ghosh) ಅವರಿಗೆ ಸ್ಥಾನ ನೀಡಲಾಗಿಲ್ಲ. ರಿಚಾ ಬದಲಿಗೆ ಅಸ್ಸಾಂನ ಯುವ ವಿಕೆಟ್ ಕೀಪರ್ ಉಮಾ ಛೆಟ್ರಿಯನ್ನು ಆಯ್ಕೆ ಮಾಡಲಾಗಿದೆ. ಉಮಾ ಇತ್ತೀಚೆಗೆ ಉದಯೋನ್ಮುಖ ಏಷ್ಯಾ ಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಇದೀಗ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ.

ಬಾಂಗ್ಲಾದೇಶ ಪ್ರವಾಸದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ ಮೊದಲಿಗೆ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿದ್ದು, ಮೊದಲ ಪಂದ್ಯ ಜುಲೈ 9ರಂದು ಮೀರ್‌ಪುರದಲ್ಲಿ ನಡೆಯಲಿದೆ. ಜುಲೈ 11 ಮತ್ತು 13ರಂದು ಸರಣಿಯ ಉಳಿದೆರಡು ಪಂದ್ಯಗಳು ನಡೆಯಲಿದೆ. ಏಕದಿನ ಕ್ರಿಕೆಟ್‌ ಸರಣಿಯ ಮೂರು ಪಂದ್ಯಗಳು ಕ್ರಮವಾಗಿ ಜುಲೈ 16, 19 ಮತ್ತು 22ರಂದು ಇದೇ ಮೈದಾನದಲ್ಲಿ ನಡೆಯಲಿದೆ. ಎರಡೂ ಸರಣಿಗಳ ಎಲ್ಲ ಪಂದ್ಯಗಳು ಮೀರ್‌ಪುರದಲ್ಲೇ ನಡೆಯಲಿವೆ. ಹರ್ಮನ್​ಪ್ರೀತ್ ಕೌರ್(Harmanpreet Kaur)​ ನಾಯಕಿಯಾದರೆ, ಸ್ಮೃತಿ ಮಂಧಾನಾ(Smriti Mandhana) ಉಪನಾಯಕಿಯಾಗಿದ್ದಾರೆ.​

ಇತ್ತೀಚೆಗೆ ನಡೆದಿದ್ದ ಏಷ್ಯನ್‌ ಎಮರ್ಜಿಂಗ್ ಟೂರ್ನಿಯಲ್ಲಿ ಮಿಂಚಿದ್ದ 20 ವರ್ಷದ ಕನ್ನಡತಿ ಶ್ರೇಯಾಂಕ ಪಾಟೀಲ್​ ಅವರು ಈ ಸರಣಿಗೆ ಆಯ್ಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಅವರು ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗಿದೆ. ಏಷ್ಯನ್ ಟೂರ್ನಿಯಲ್ಲಿ ಶ್ರೇಯಾಂಕ 9 ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಸದ್ಯ ಅವರು ಕೆರಿಬಿಯನ್​ ಮಹಿಳಾ ಟಿ20 ಲೀಗ್​ನಲ್ಲಿ ಆಡಲು ಸಜ್ಜಾಗಿದ್ದಾರೆ.

ಟಿ20 ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್. ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರವಾಣಿ, ಮೋನಿಕಾ ಪಟೇಲ್, ರಾಶಿ ಕನೌಜಿಯಾ, ಅನುಷಾ ಬ್ಯಾರೆಡಿ, ಮಿನ್ನು ಮಣಿ.

ಇದನ್ನೂ ಓದಿ WOMENS IPL | ದೇಶೀಯ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್​ ಉತ್ತಮ ವೇದಿಕೆ; ಹರ್ಮನ್​ಪ್ರೀತ್ ಕೌರ್ ವಿಶ್ವಾಸ

ಏಕದಿನ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರವಾಣಿ, ಮೋನಿಕಾ ಪಟೇಲ್, ರಾಶಿ ರಾಶಿ ಕನೌಜಿಯಾ, ಅನುಷಾ ಬ್ಯಾರೆಡಿ, ಸ್ನೇಹ ರಾಣಾ.

Exit mobile version