Site icon Vistara News

ICC World Cup 2023 : ಫೈನಲ್​ಗೆ ಮೊದಲು ಬಾನಂಗಳದಲ್ಲಿ ಚಿತ್ತಾರ ಮೂಡಿಸಲಿದೆ ಸೂರ್ಯ ಕಿರಣ!

Suryakiran website

ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ನವೆಂಬರ್ 19 ರಂದು (ಭಾನುವಾರ) ಅಹಮದಾಬಾದ್​ನಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್​​ನ ಫೈನಲ್​ ಪಂದ್ಯಕ್ಕೆ ಮುಂಚಿತವಾಗಿ ಏರ್ ಶೋ ನಡೆಸಲಿದೆ. ಪಿಟಿಐ ವರದಿಯ ಪ್ರಕಾರ, ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪ್ರಾರಂಭವಾಗುವ ಹತ್ತು ನಿಮಿಷಗಳ ಮೊದಲು ಅಭಿಮಾನಿಗಳನ್ನು ರಂಜಿಸಲಿದೆ ಎಂದು ಗುಜರಾತ್​ನ ರಕ್ಷಣಾ ಸಾರ್ವಜನಿಕ ಸಂಪರ್ಕ ವಿಭಾಗ ಘೋಷಿಸಿದೆ.

ಐಎಎಫ್​​ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಸಾಮಾನ್ಯವಾಗಿ ಒಂಬತ್ತು ವಿಮಾನಗಳನ್ನು ಒಳಗೊಂಡಿರುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ತಂಡವು ದೇಶಾದ್ಯಂತ ಹಲವಾರು ಏರ್ ಶೋಗಳನ್ನು ನಡೆಸಿದೆ. ಲೂಪ್ ಕುಶಲತೆಗಳು, ಬ್ಯಾರೆಲ್ ರೋಲ್ ಕೌಶಲ ಮತ್ತು ಆಕಾಶದಲ್ಲಿ ವಿವಿಧ ಆಕಾರಗಳ ರಚನೆಯು ಇದರ ಪ್ರದರ್ಶನದ ಹೆಗ್ಗುರುತಾಗಿದೆ.

ಏರ್ ಶೋನ ಪೂರ್ವಾಭ್ಯಾಸ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ ಎಂದು ಸಾರ್ವಜನಿಕ ಸಂಪರ್ಕ ವಿಭಾಗ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೈನಲ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದಾರೆ. ಅವರಲ್ಲದೆ, ಭಾರತದ ವಿಶ್ವಕಪ್ ವಿಜೇತ ನಾಯಕರಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿ ಕೂಡ ಬ್ಲಾಕ್ಬಸ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸುವ ನಿರೀಕ್ಷೆಯಿದೆ. ಅಹ್ಮದಾಬಾದ್​​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಐಸಿಸಿ ಮತ್ತು ಬಿಸಿಸಿಐನ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಅಹ್ಮದಾಬಾದ್ ತಲುಪಿದ ಟೀಂ ಇಂಡಿಯಾ

ಅಹ್ಮದಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಭಾನುವಾರ ಅಹಮದಾಬಾದ್ ತಲುಪಿದೆ. ನ್ಯೂಜಿಲೆಂಡ್ ವಿರುದ್ಧದ ಭಾರತದ ಗೆಲುವಿನ ನಂತರ ಕಳೆದ ರಾತ್ರಿ ತಂಡದ ಹೋಟೆಲ್​ನಿಂದ ಹೊರಟಿದ್ದ ವಿರಾಟ್ ಕೊಹ್ಲಿ ವಿಮಾನ ನಿಲ್ದಾಣದಲ್ಲಿ ಮತ್ತೆ ತಂಡವನ್ನು ಸೇರಿಕೊಂಡರು. ಭಾರತ ಕ್ರಿಕೆಟ್ ತಂಡವು ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸಲಿದೆ.

ಇದನ್ನೂ ಓದಿ : ICC World Cup 2023 : ಮೋದಿ ಸ್ಟೇಡಿಯಮ್​ನಲ್ಲಿ ಟಾಸ್ ಗೆದ್ದವರೇ ಬಾಸ್​ ಹೌದಾ?

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ನಂತರ ಭಾರತ ಕ್ರಿಕೆಟ್ ತಂಡ ಫೈನಲ್ಗೆ ಪ್ರವೇಶಿಸಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಶ್ರೇಯಸ್ ಅಯ್ಯರ್ ಈ ಆಟದ ಅತ್ಯುತ್ತಮ ಪ್ರದರ್ಶನ ನೀಡಿದರು. ಇದೀಗ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ತಂಡವನ್ನು ಪ್ರಶಸ್ತಿ ಫೈಟ್​ನಲ್ಲಿ ಎದುರಿಸಲಿದೆ.

ಮುಖಾಮುಖಿ

ಕೊಲ್ಕತ್ತಾದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯದ ವಿಜೇತ ಆಸೀಸ್​ ತಂಡ ಭಾರತಕ್ಕೆ ಸೆಡ್ಡು ಹೊಡೆಯಲಿದೆ. ಈ ತಂಡ 2003ರ ವಿಶ್ವ ಕಪ್​ನ ಫೈನಲ್​ ಪಂದ್ಯದಲ್ಲಿ ಪರಸ್ಪರ ಎದುರಾಗಿತ್ತು. ಅಲ್ಲಿ ಭಾರತ ತಂಡ ಹೀನಾಯವಾಗಿ ಸೋತು ರನ್ನರ್​ ಅಪ್ ಪ್ರಶಸ್ತಿ ಗೆದ್ದಿತ್ತು.

ಭಾರತ ಐಸಿಸಿ ಟ್ರೋಫಿಯ 10 ವರ್ಷಗಳ ಬರ ನೀಗಿಸಲು ಭಾರತಕ್ಕೆ ಅತ್ಯುತ್ತಮ ಅವಕಾಶವಾಗಿದೆ. ರೋಹಿತ್ ಶರ್ಮಾ ಬಳಗ ಹಾಲಿ ವಿಶ್ವಕಪ್ ನಲ್ಲಿ 10 ಪಂದ್ಯಗಳ ಗೆಲುವಿನ ಹಾದಿಯಲ್ಲಿದೆ. ಮತ್ತೊಂದು ಗೆಲುವು ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ 11 ಗೆಲುವುಗಳ ದಾಖಲೆಯನ್ನು ಸರಿಗಟ್ಟಲು ಭಾರತಕ್ಕೆ ಸಹಾಯ ಮಾಡುತ್ತದೆ. ಜತೆಗೆ ಟ್ರೋಫಿಯೂ ದೊರಕುತ್ತದೆ.

Exit mobile version