Site icon Vistara News

ಬೌಂಡರಿಗಳ ತ್ರಿಶತಕ: ಹಿಟ್‌ಮ್ಯಾನ್‌ ಮತ್ತೊಂದು ದಾಖಲೆ

ಹಿಟ್‌ ಮ್ಯಾನ್‌

ಬರ್ಮಿಂಗ್‌ಹ್ಯಾಮ್‌: ಭಾರತ ತಂಡದ ನಾಯಕ ರೋಹಿತ್‌ ಶರ್ಮ ಟಿ೨೦ ಮಾದರಿಯಲ್ಲಿ ೩೦೦ ಫೋರ್‌ಗಳನ್ನು ಬಾರಿಸಿದ ವಿಶ್ವದ ಕ್ರಿಕೆಟಿಗರ ಸಾಲಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ವೇಳೆ ಅವರು ಭಾರತ ತಂಡದ ಪರ ಅತಿ ಹೆಚ್ಚು ಫೋರ್‌ ದಾಖಲಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಶನಿವಾರ ನಡೆದ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್‌ ತಂಡಗಳ ನಡುವಿನ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್‌ ಬೌಂಡರಿಗಳ ತ್ರಿಶತಕ ಬಾರಿಸಿದರು.

ರೋಹಿತ್‌ ಶರ್ಮ ಒಟ್ಟಾರೆ ೩೦೧ ಫೋರ್‌ಗಳನ್ನು ಬಾರಿಸಿದರೆ, ಐರ್ಲೆಂಡ್‌ ತಂಡದ ಪಾಲ್‌ ಸ್ಟಿರ್ಲಿಂಗ್‌ ೩೨೫ ಫೋರ್‌ಗಳನ್ನು ಹೊಡೆದು ಈ ಸಾಲಿನಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ೨೯೮ ಬೌಂಡರಿಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಸಿಕ್ಸರ್‌ಗಳ ವಿಚಾರಕ್ಕೆ ಬಂದರೆ ನ್ಯೂಜಿಲೆಂಡ್‌ ತಂಡದ ಮಾರ್ಟಿನ್‌ ಗಪ್ಟಿಲ್‌ ೧೬೫ ಸಿಕ್ಸರ್‌ ಬಾರಿಸ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ರೋಹಿತ್‌ ಶರ್ಮ ಇಲ್ಲೂ ಎರಡನೇ ಸ್ಥಾನ ಪಡೆದುಕೊಂಡಿದ್ದು, ೧೫೭ ಸಿಕ್ಸರ್‌ ಬಾರಿಸಿದ್ದಾರೆ.

ಇದನ್ನೂ ಓದಿ: 500 ಡಾಟ್‌ಬಾಲ್‌ ದಾಖಲೆ ಸೃಷ್ಟಿಸಿದ Team India ಬೌಲರ್‌

Exit mobile version