Site icon Vistara News

Chess Tournament | ಮಹಿಳಾ ಚೆಸ್‌ಪಟುವನ್ನು ವಿಶ್ವ ಮಟ್ಟದ ಟೂರ್ನಿಯಿಂದ ಹೊರಕ್ಕೆ ಕಳುಹಿಸಿದ ಆಯೋಜಕರು

ಬೆಂಗಳೂರು : ಭಾರತದ ಮಹಿಳಾ ಗ್ರಾಂಡ್‌ ಮಾಸ್ಟರ್‌ ಪ್ರಿಯಾಂಕಾ ನುಟಕ್ಕಿ ಅವರನ್ನು ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಿಂದ (Chess Tournament) ಹೊರಕ್ಕೆ ಕಳುಹಿಸಿದ ಪ್ರಸಂಗ ನಡೆದಿದೆ. ಅವರು ಧರಿಸಿದ್ದ ಜಾಕೆಟ್‌ನಲ್ಲಿ ನಿಷೇಧಿತ ಇಯರ್‌ ಬಡ್‌ ಪತ್ತೆಯಾದ ಕಾರಣ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ ಎಂಬುದಾಗಿ ವಿಶ್ವ ಚೆಸ್‌ ಒಕ್ಕೂಟ (ಫಿಡೆ) ಹೇಳಿದೆ.

೨೦ ವರ್ಷದ ಪ್ರಿಯಾಂಕ ಅವರು (ಎಲೊ ರೇಟಿಂಗ್‌ ೨೩೧೬) ಅವರ ಜಾಕೆಟ್‌ ಜೇಬಿನಲ್ಲಿ ಎರಡು ಇಯರ್‌ ಬಡ್‌ಗಳು ಪತ್ತೆಯಾಗಿವೆ. ಇಯರ್‌ಫೋನ್ ಸೇರಿದಂತೆ ಹಲವು ಸಂವಹನ ಸಾಧನಗಳನ್ನು ಚೆಸ್‌ ಟೂರ್ನಮೆಂಟ್‌ ನಡೆಯುವ ಜಾಗಕ್ಕೆ ಕೊಂಡೊಯ್ಯುವಂತಿಲ್ಲ. ಅಂತೆಯೇ ತಪಾಸಣೆ ವೇಳೆ ಇಯರ್‌ಬಡ್ ಪತ್ತೆಯಾಗಿದೆ.

”ಪ್ರಿಯಾಂಕ ಅವರು ಮೋಸದಾಟದಲ್ಲಿ ಪಾಲ್ಗೊಂಡಿಲ್ಲ. ಆದರೆ, ಇಂಥ ವಸ್ತುಗಳನ್ನು ಕೊಂಡ್ಯೊಯ್ಯುವುದು ನಿಯಮ ಬಾಹಿರ. ಪತ್ತೆಯಾದರೆ ಗೇಮ್‌ನ ಅಂಕವನ್ನು ಕಡಿತಗೊಳಿಸಲಾಗುವುದು ಮತ್ತು ಟೂರ್ನಿಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ,” ಎಂಬುದಾಗಿ ಆಯೋಜಕರು ತಿಳಿಸಿದ್ದಾರೆ.

ಪ್ರಿಯಾಂಕ ಅವರು ತಮ್ಮ ನಾಲ್ಕನೇ ಸುತ್ತಿನ ಹಣಾಹಣಿಯಲ್ಲಿ ಗೆದ್ದಿದ್ದ ಅಂಕವನ್ನು ಎದುರಾಳಿ ಆಟಗಾರ್ತಿಗೆ ನೀಡಲಾಗಿದೆ. ಅವರು ಇದುವರೆಗೆ ಐದು ಸುತ್ತುಗಳಲ್ಲಿ ನಾಲ್ಕು ಅಂಕಗಳನ್ನು ಸಂಪಾದಿಸಿದ್ದರು.

ಇದನ್ನೂ ಓದಿ | Aimchess Rapid Tournament | ವಿಶ್ವ ನಂಬರ್‌ ಒನ್‌ ಆಟಗಾರನಿಗೆ ಸೋಲುಣಿಸಿದ ಭಾರತದ ಚೆಸ್‌ ಪಟು

Exit mobile version