ತಿರುವನಂತಪುರ : ಮೂರನೇ ಹಾಗೂ ಅಂತಿಮ ಏಕ ದಿನ ಪಂದ್ಯದಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾದ ಆಟಗಾರರು ತಿರುವನಂತಪುರ ತಲುಪಿದ್ದಾರೆ. ಗುವಾಹಟಿ ಹಾಗೂ ಕೋಲ್ಕೊತಾದಲ್ಲಿ ನಡೆದ ಪಂದ್ಯಗಳಲ್ಲಿ ಜಯ ಗಳಿಸಿರುವ ಭಾರತ ತಂಡ ಸರಣಿಯನ್ನು ಜಯಿಸಿಕೊಂಡಿದೆ. ಹೀಗಾಗಿ ಆಟಗಾರರು ನಿರಾಳತೆಯಿಂದ ಇದ್ದಾರೆ. ಹೀಗಾಗಿ ಅವರೆಲ್ಲರೂ ಶನಿವಾರ ಬೆಳಗ್ಗೆ ಇತಿಹಾಸ ಪ್ರಸಿದ್ಧ ಹಾಗೂ ಸಂಪದ್ಭರಿತ ಶ್ರೀ ಅನಂತಪದ್ಮನಾಭ ಸ್ವಾಮಿ (Indian Cricket Team) ದೇಗುಲಕ್ಕೆ ಭೇಟಿ ನೀಡಿದ್ದಾರೆ
ಆಟಗಾರರು ಸಾಂಪ್ರದಾಯಿಕ ದಿರಿಸಿನೊಂದಿಗೆ ದೇಗುಲಕ್ಕೆ ಭೇಟಿ ನೀಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೂರ್ಯಕುಮಾರ್ ಯಾದವ್, ಯಜ್ವೇಂದ್ರ ಚಹಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರು ದೇಗುಲಕ್ಕೆ ನೀಡಿದ್ದರು. ಅವರೆಲ್ಲರೂ ದೇವರ ದರ್ಶನದ ಬಳಿಕ ಫೊಟೋ ತೆಗಿಸಿಕೊಂಡಿದ್ದಾರೆ. ತಂಡದ ಸಹಾಯ ಸಿಬ್ಬಂದಿ ಹಾಗೂ ದೇಗುಲದ ಆಡಳಿತ ಮಂಡಳಿಯ ಸದಸ್ಯರೂ ಜತೆಗಿದ್ದರು.
ತಿರುವನಂತಪುರದ ಅನಂತಪದ್ಮನಾಭ ಸ್ವಾಮಿ ದೇಗುಲು ಸಂಪತ್ತಿನ ಮೂಲಕ ವಿಶ್ವ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ತಿರುವನಂತಪುರಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಅಂತೆಯೇ ಟೀಮ್ ಇಂಡಿಯಾದ ಆಟಗಾರರೂ ಅಲ್ಲಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ | IND VS SL | ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ