Site icon Vistara News

Ind vs Bangla | 2015ರ ಬಳಿಕ ಬಾಂಗ್ಲಾ ಪ್ರವಾಸ ಕೈಗೊಳ್ಳಲಿರುವ ಭಾರತ ಕ್ರಿಕೆಟ್​ ತಂಡ

bangla

ಢಾಕಾ: 2015 ರ ಬಳಿಕ ಮೊದಲ ಬಾರಿಗೆ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್‌ನಲ್ಲಿ ಬಾಂಗ್ಲಾ (Ind vs Bangla) ಪ್ರವಾಸಕ್ಕೆ ತೆರಳಲಿರುವ ಭಾರತ ಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳ ಸರಣಿ ಆಡಲಿದೆ.

ಮೂರೂ ಏಕದಿನ ಪಂದ್ಯಗಳಿಗೆ ಢಾಕಾದ ಮೀರ್‌ಪುರ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಈ ಪಂದ್ಯ ಡಿಸೆಂಬರ್​ 4, 7 ಮತ್ತು 10 ರಂದು ನಡೆಯಲಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್‌ ಹಸನ್‌ ಗುರುವಾರ ಪ್ರಕಟಣೆ ತಿಳಿಸಿದ್ದಾರೆ. ಅದರಂತೆ ಮೊದಲ ಟೆಸ್ಟ್‌ ಡಿ.14 ರಿಂದ 18ರವರೆಗೆ ಚಿತ್ತಗಾಂಗ್ ಹಾಗೂ ಎರಡನೇ ಟೆಸ್ಟ್‌ ಡಿ.22 ರಿಂದ 26ರ ವರೆಗೆ ಢಾಕಾದಲ್ಲಿ ಆಯೋಜನೆಯಾಗಿದೆ.

“ಎರಡೂ ದೇಶಗಳ ಅಭಿಮಾನಿಗಳು ಮತ್ತೊಂದು ಸ್ಮರಣೀಯ ಸರಣಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ವೇಳಾಪಟ್ಟಿ ಸಿದ್ಧಪಡಿಸಲು ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ. ಭಾರತ ತಂಡವನ್ನು ಬಾಂಗ್ಲಾದೇಶಕ್ಕೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ನಜ್ಮುಲ್‌ ಹಸನ್‌ ಹೇಳಿದ್ದಾರೆ.

ಭಾರತ ತಂಡ 2015ರಲ್ಲಿ ಕೊನೆಯದಾಗಿ ಬಾಂಗ್ಲಾ ಪ್ರವಾಸ ಕೈಗೊಂಡಿತ್ತು. ಆ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ 1-2 ಅಂತರದಲ್ಲಿ ಭಾರತ ಸೋಲು ಕಂಡಿತ್ತು. ಆದರೆ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಡ್ರಾ ಸಾಧಿಸಿತ್ತು.

ಇದನ್ನೂ ಓದಿ | T20 World Cup | ಭಾರತ-ಪಾಕ್​ ಪಂದ್ಯಕ್ಕೆ ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

Exit mobile version