ಬೆಂಗಳೂರು : 2022ನೇ ವರ್ಷಾಂತ್ಯಕ್ಕೆ ಭಾರತ ಕ್ರಿಕೆಟ್ ತಂಡ (Indian Cricket Team) ಕ್ರಿಕೆಟ್ ಕ್ಷೇತ್ರದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇದುವರೆಗೆ ಯಾವುದೇ ತಂಡದ ಮಾಡದ ಗೆಲುವಿನ ಸಾಧನೆ ಅದಾಗಿದ್ದು, ವಿಶ್ವದ ನಂಬರ್ ಒನ್ ತಂಡ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸುಮಾರು ಏಳು ನಾಯಕರ ಮುಂದಾಳತ್ವದಲ್ಲಿ ಆಡಿರುವ ಭಾರತ ತಂಡ ಚರಿತ್ರೆ ಸೃಷ್ಟಿಸಿದೆ.
2022ರ ಅಂತ್ಯಕ್ಕೆ ಭಾರತ ತಂಡ ಎಲ್ಲ ಮಾದರಿಯ ಕ್ರಿಕೆಟ್ ಸೇರಿ 46 ಪಂದ್ಯಗಳಲ್ಲಿ ಜಯ ಗಳಿಸಿದೆ. ರೋಹಿತ್ ಶರ್ಮ ಕಾಯಂ ನಾಯಕತ್ವದ ಟೀಮ್ ಇಂಡಿಯಅ ವರ್ಷಾಂತ್ಯಕ್ಕೆ ಗರಿಷ್ಠ ಪಂದ್ಯಗಳನ್ನು ಗೆದ್ದ ದಾಖಲೆಯನ್ನು ತನ್ನೆಸರಿಗೆ ಬರೆಸಿಕೊಂಡಿದೆ. ಇದರಲ್ಲಿ ತವರಿನ ಸರಣಿ, ವಿದೇಶಿ ಪ್ರವಾಸ, ಏಷ್ಯಾ ಕಪ್ ಹಾಗೂ ಟಿ20 ವಿಶ್ವ ಕಪ್ನ ಪಂದ್ಯಗಳು ಸೇರಿಕೊಂಡಿವೆ. ಒಟ್ಟಾರೆ ಭಾರತ ತಂಡ 71 ಪಂದ್ಯಗಳಲ್ಲಿ ಆಡಿದೆ.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡ ಎರಡನೇ ಸ್ಥಾನದಲ್ಲಿದೆ. 2003ರಲ್ಲಿ ಆಸ್ಟ್ರೇಲಿಯಾ ಬಳಗ ಒಟ್ಟು 38 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿತ್ತು. ಮೂರನೇ ಸ್ಥಾನವನ್ನು ಭಾರತವೇ ತನ್ನದಾಗಿಸಿಕೊಂಡಿದೆ. ವಿರಾಟ್ ಕೊಹ್ಲಿಯ ನೇತೃತ್ವದಲ್ಲಿ ಆಡುತ್ತಿದ್ದ ಭಾರತ ಬಳಗ ಆ ವರ್ಷ 37 ಪಂದ್ಯಗಳಲ್ಲಿ ವಿಜಯ ಸಾಧಿಸಿತ್ತು.
ನಾಲ್ಕನೇ ಸ್ಥಾನ ಮತ್ತೆ ಆಸ್ಟ್ರೇಲಿಯಾಗೆ ಲಭಿಸಿದೆ. ಸ್ಟ್ರೀವ್ ವಾ ಅವರ ನಾಯಕತ್ವದ ತಂಡ 35 ಪಂದ್ಯಗಳನ್ನು ಗೆದ್ದು ಸಾಧನೆ ಮಾಡಿದೆ. ಪಟ್ಟಿಯಲ್ಲಿ ಐದನೇ ಸ್ಥಾನ ಭಾರತಕ್ಕೆ ಲಭಿಸಿದೆ. ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ತಂಡ 2018ರಲ್ಲಿ 35 ಪಂದ್ಯಗಳಲ್ಲಿ ವಿಜಯ ಸಾಧಿಸಿತ್ತು. ಈ ರೀತಿಯಾಗಿ ಅಗ್ರ ಐದು ಸ್ಥಾನಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ 3 ಹಾಗೂ 2 ಸ್ಥಾನಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ | IND VS BAN | ಅಭ್ಯಾಸದ ವೇಳೆ ಕೆ.ಎಲ್. ರಾಹುಲ್ಗೆ ಗಾಯ; ಟೀಮ್ ಇಂಡಿಯಾದಲ್ಲಿ ಆತಂಕ!