ಬರ್ಮಿಂಗ್‌ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ (CWG- 2022) ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್‌ನ ಕ್ರೀಡಾ ಗ್ರಾಮದಲ್ಲಿ ಗುರುವಾರ ಭಾರತದ ಧ್ವಜಾರೋಹಣ ನಡೆಸಲಾಯಿತು. ಸ್ಪರ್ಧೆಗೆ ತೆರಳಿರುವ ಭಾರತದ ಅಥ್ಲೀಟ್‌ಗಳು ಈ ಧ್ವಜಾರೋಹಣ ಸಂದರ್ಭದಲ್ಲಿ ಸ್ಥಳದಲ್ಲಿದ್ದು ಗೌರವ ಸಲ್ಲಿಸಿದರು.
ಭಾರತೀಯ ಒಲಿಂಪಿಕ್ ಸಂಸ್ಥೆಯು ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ, ಖಜಾಂಜಿ ಅನ್ನದಾನೇಶ್ವರ ಪಾಂಡೆ, ಡೆಪ್ಯುಟಿ ಚೆಪ್ ಡಿ ಮಿಷನ್ ಅನಿಲ್ ದೂಪರ್ ಧ್ವಜಾರೋಹರಣ ಸಂದರ್ಭದಲ್ಲಿ ಹಾಜರಿದ್ದರು. ಭಾರತದ ಅಥ್ಲೀಟ್‌ಗಳ ನಿಯೋಗದ ಚೆಪ್ ಡಿ ಮಿಷನ್ ರಾಜೇಶ್ ಭಂಡಾರಿ ಅವರು ಧ್ವಜಾರೋಹಣ ನಡೆಸಿಕೊಟ್ಟರು. ಈ ವೇಳೆ ಸಂಗೀತ ಕಾರ್ಯಮಗಳು ನಡೆಯಿತು.
ಗುರುವಾರ ರಾತ್ರಿ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಷಟ್ಲರ್ ಪಿ. ವಿ ಸಿಂಧೂ ಹಾಗೂ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ತ್ರಿವರ್ಣ ಧ್ವಜದೊಂದಿಗೆ ಪಥ ಸಂಚಲನದ ಮುಂದಾಳತ್ವ ವಹಿಸಲಿದ್ದಾರೆ.
ಇದನ್ನೂ ಓದಿ | CWG -2022 | ಕಾಮನ್ವೆಲ್ತ್ ಗೇಮ್ಸ್ ಎಷ್ಟು ಗಂಟೆಗೆ ಶುರು? ಭಾರತದ ಧ್ವಜಧಾರಿಗಳು ಯಾರೆಲ್ಲ?