ನವದೆಹಲಿ: ಭಾರತದಲ್ಲಿ ಫುಟ್ಬಾಲ್(Indian Football) ಬೆಳವಣಿಯ ಬಗ್ಗೆ ವಿಶೇಷ ಕ್ರಮಕೈಗೊಂಡಿರುವ ಭಾರತ ಫುಟ್ಬಾಲ್ ಫೆಡರೇಶನ್(AIFF) ಮುಂದಿನ ವರ್ಷದಿಂದ ಅಂಡರ್-20 ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್(U-20 National Football Championship) ಆರಂಭಿಸುವುದಾಗಿ ಘೋಷಿಸಿದೆ. ಈ ಮೂಲಕ ಯುವ ಪ್ರತಿಭೆಗಳನ್ನು ಬೆಳೆಸುವ ಉದ್ದೇಶಕ್ಕೆ ಕೈ ಹಾಕಿದೆ.
ಚೊಚ್ಚಲ ಆವೃತ್ತಿ ಟೂರ್ನಿ 2024ರ ಜನವರಿ-ಫೆಬ್ರವರಿ ತಿಂಗಳಿನಲ್ಲಿ ನಡೆಸುವುದಾಗಿ ಪ್ರಾಥಮಿಕ ದಿನಾಂಕವನ್ನು ಪ್ರಕಟಿಸಿದೆ. ಯುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ, ಅವರನ್ನು ಬೆಳೆಸುವುದು ಜತೆಗೆ ಭಾರತೀಯ ಫುಟ್ಬಾಲನ್ನು ಉನ್ನತ ಸ್ಥಾನಕ್ಕೇರಿಸುವುದು ನಮ್ಮ ಮುಖ್ಯ ಗುರಿ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದೆ. ಕೆಲವು ವಾರಗಳ ಹಿಂದಷ್ಟೇ ಭಾರತ ಸ್ಯಾಫ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಗೆಲುವಿನ ಬಳಿಕ ಫಿಫಾ ಶ್ರೇಯಾಂಕದಲ್ಲಿಯೂ ಪ್ರಗತಿ ಸಾಧಿಸಿದಿದೆ. ) 2018ರ ಬಳಿಕ ಮೊದಲ ಬಾರಿ ಫಿಫಾ ಶ್ರೇಯಾಂಕದಲ್ಲಿ(Fifa Ranking) ಅಗ್ರ 100ರೊಳಗೆ ಸ್ಥಾನ ಪಡೆದಿದೆ.
ಭಾರತದ ಖಾತೆಯಲ್ಲಿ ಸದ್ಯ 1,208.69 ಅಂಕಗಳಿವೆ. ಭಾರತದ ಶ್ರೇಷ್ಠ ಶ್ರೇಯಾಂಕ 94 ಇದನ್ನು 1966ರಲ್ಲಿ ಸಾಧಿಸಿತ್ತು. ಈ ಮುನ್ನ 2017, 2018ರಲ್ಲಿ 96ನೇ ಸ್ಥಾನಕ್ಕೇರಿತ್ತು. 1993ರಲ್ಲಿ 99ನೇ ಸ್ಥಾನದಲ್ಲಿತ್ತು. ಸ್ಯಾಫ್ ಟೂರ್ನಿಗೂ ಮುನ್ನ ಭಾರತ 101ರಿಂದ 100ನೇ ಸ್ಥಾನಕ್ಕೇರಿತ್ತು. ಫಿಫಾ ವಿಶ್ವ ಚಾಂಪಿಯನ್ ಅರ್ಜೆಂಟೀನಾ ನಂ.1 ಸ್ಥಾನದಲ್ಲಿದ್ದರೆ ಫ್ರಾನ್ಸ್, ಬ್ರೆಜಿಲ್,ಇಂಗ್ಲೆಂಡ್ ಮತ್ತು ಬೆಲ್ಜಿಂಯಂ ಕ್ರಮವಾಗಿ ಆಬಳಿಕದ ಸ್ಥಾನದಲ್ಲಿದೆ. ಏಷ್ಯಾ ತಂಡಗಳ ಪೈಕಿ ಜಪಾನ್ 20ನೇ ಸ್ಥಾನದಲ್ಲಿದೆ.
ಇದನ್ನೂ ಓದಿ 2036 Olympics | 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಸಲಿದೆ; ಅನುರಾಗ್ ಠಾಕೂರ್ ವಿಶ್ವಾಸ
ಬೇಸರದ ಸಂಗತಿ ಎಂದರೆ ಭಾರತ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದರೂ ಈ ಬಾರಿಯ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವುದು. ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಈ ಕ್ರೀಡಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡುವುದಾಗಿ ಎಐಎಫ್‍ಎಫ್(AIFF ) ಹೇಳಿಕೊಂಡಿದೆ.