ಬೆಂಗಳೂರು : ವಿಶ್ವದ ನಂಬರ್ ಒನ್ ಚೆಸ್ ಪಟು ಮ್ಯಾಗ್ನೆಸ್ ಕಾರ್ಲ್‌ಸೆನ್ ಅವರನ್ನು ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಸೋಲುಣಿಸಿದ್ದಾರೆ. ಏಮ್‌ಚೆಸ್ ರಾಪಿಡ್ ಅನ್‌ಲೈನ್ ಚೆಸ್ ಟೂರ್ನಮೆಂಟ್‌ನ ಏಳನೇ ಸುತ್ತಿನಲ್ಲಿ ಅವರು ನಾರ್ವೆಯ ಆಟಗಾರನನ್ನು ಮಣಿಸಿದ್ದಾರೆ. ಈ ಮೂಲಕ ಅವರು ವಿಶ್ವದ ನಂಬರ್ ಒನ್ ಆಟಗಾರನನ್ನು ಸೋಲಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ತಮಿಳುನಾಡಿನ ಪ್ರಜ್ಞಾನಂದ ಅವರು ನಾರ್ವೆಯ ಆಟಗಾರನನ್ನು ಸೋಲಿಸಿದ್ದರು.
೧೯ ವರ್ಷದ ಈ ಗ್ರ್ಯಾಂಡ್ ಮಾಸ್ಟರ್ ಎರಿಗೈಸಿ ಹಿಂದಿನ ಸುತ್ತಿನಲ್ಲಿ ಭಾರತದವರೇ ಆದ ವಿದಿತ್ ಸಂತೋಷ್ ಗುಜರಾತಿ ವಿರುದ್ಧ ಸೋತಿದ್ದರು. ಇದೀಗ ಎಂಟು ಸುತ್ತಿನ ಹಣಾಹಣಿಗಳ ಬಳಿಕ ಅವರು ಐದನೇ ಸ್ಥಾನದಲ್ಲಿದ್ದಾರೆ. ಅರ್ಜುನ್ ಅವರು ಉಜ್ಬೇಕಿಸ್ತಾನದ ನೊದಿರ್ಬೆಕ್, ಅಜೆರ್‌ಬೈಜಾನ್‌ನ ಶಕ್ರಿಯಾರ್ ಮಮೆಡೊಯಾರೊವ್ ವಿರುದ್ಧವೂ ಜಯ ಸಾಧಿಸಿದರು.
ಅರ್ಜುನ್ ಅವರು ಕಳೆದ ತಿಂಗಳು ನಡೆದಿದ್ದ ಜೂಲಿಯಸ್ ಬೆರ್ ಜನರೇಷನ್ ಕಪ್ ಆನ್‌ಲೈನ್ ಚೆಸ್ ಟೂರ್ನಮೆಂಟ್‌ನಲ್ಲಿ ಮ್ಯಾಗ್ನಸ್ ಕಾರ್ಲ್‌ಸೆನ್ ವಿರುದ್ಧ ಸೋಲು ಕಂಡಿದ್ದರು.
ಇದನ್ನೂ ಓದಿ | ರಜನಿಕಾಂತ್ ಭೇಟಿಯಾದ Grandmaster ಪ್ರಜ್ಞಾನಂದ; ರಾಘವೇಂದ್ರ ಸ್ವಾಮಿ ಫಟೊ ಗಿಫ್ಟ್