ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಭಾರತ ಹಾಕಿ ತಂಡ ಸೆಮಿಫೈನಲ್ಸ್ ಹಂತಕ್ಕೆ ಪ್ರವೇಶ ಪಡೆದಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ವೇಲ್ಸ್ ತಂಡದ ವಿರುದ್ಧ ೪-೧ ಅಂತರದಿಂದ ಭರ್ಜರಿ ಜಯ ಸಾಧಿಸಿ ಉಪಾಂತ್ಯಕ್ಕೆ ಎಂಟ್ರಿ ಶ ಪಡೆದುಕೊಂಡಿತು.
ಹಾಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಆಕ್ರಮಣಕಾರಿ ಆಟದೊಂದಿಗೆ ಜೈತ್ರಯಾತ್ರೆ ಮಾಡುತ್ತಿರುವ ಭಾರತ ತಂಡ ಘಾನಾ ದೇಶದ ವಿರುದ್ಧ ೧೧.-೦ ಹಾಗೂ ಕೆನಡಾ ವಿರುದ್ಧ ೮-೦ ಅಂತರದಿಂದ ಜಯ ಸಾಧಿಸಿತ್ತು. ಅಂತಯೇ ಗುರುವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತು.
ಭಾರತ ಪರ ಅನುಭವಿ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ (೧೮, ೧೯ ಹಾಗೂ ೪೫ನೇ ನಿಮಿಷ) ಹ್ಯಾಟ್ರಿಕ್ ಗೋಲ್ ದಾಖಲಿಸಿದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಗುರ್ಜಂತ್ ಸಿಂಗ್ ಒಂದು ಗೋಲ್ ದಾಖಲಿಸಿದರು. ೫೫ನೇ ನಿಮಿಷದಲ್ಲಿ ವೇಲ್ಸ್ ತಂಡ ಏಕೈಕ ಗೋಲ್ ದಾಖಲಿಸಿತು.
ಬುಧವಾರ ಮಹಿಳೆಯರ ತಂಡವೂ ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ಮಹಿಳೆಯರ ತಂಡ ೨೦೦೨ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ, ಭಾರತ ತಂಡ ಇದುವರೆಗೆ ಕಾಮನ್ವೆಲ್ತ್‌ನಲ್ಲಿ ಬಂಗಾರ ಗೆದ್ದಿಲ್ಲ. ಎರಡು ಬಾರಿ ಬಲಿಷ್ಠ ಅಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.
ಇದನ್ನೂ ಓದಿ | CWG-2022 | ತೇಜಸ್ವಿನ್ ಶಂಕರ್‌ಗೆ ಹೈಜಂಪ್‌ನಲ್ಲಿ ಕಂಚಿನ ಪದಕ